ಗುಬ್ಬಿ ಕಟ್ಟಿತು ಗೂಡು
ಗಂಡು ಹೆಣ್ಣು ಗುಬ್ಬಿ ಜೋಡು
ಕೂಡಿ ಕಟ್ಟಿದವು ಪುಟ್ಟ ಗೂಡು
ಹುಲ್ಲು ಬಣವೆ ಕಡ್ಡಿ ಕಾಂಡ.
ಚುಂಚು ಹೆಣೆಕೆಯ ಕದಿರು .
ಪುಟ್ಟ ತತ್ತಿಗೆ ಕಾವು ಕೊಟ್ಟಿತು
ನೋವ ಮರೆತ ತಾಯಿಯು
ಕುಕ್ಕ ಹೊರಟವು ಹದ್ದು ಗಿಜಗವು .
ಅಪ್ಪ ಹೊರಗೆ ದಿಟ್ಟ ಕಾವಲು .
ಕನಸು ಕಂಡ ಗುಬ್ಬಿ ಜೋಡಿಯು
ಹುಟ್ಟು ಸಾವಿನ ಮೋಡಿಯು.
ಕಣ್ಣು ಬಿಟ್ಟು ವಸುಧೆ ಕಂಡವು
ನಗೆ ಮೂಡಿತು ಗುಬ್ಬಿ ಒಡಲು
ಪುಟ್ಟ ಮರಿಗಳ ನಾದ ಇಂಚರ
ಸ್ಫೂರ್ತಿ ಸೆಲೆಯ ಸಿಂಚರ .
ರೆಕ್ಕೆ ಬಲಿತು ಹಾರಬಲ್ಲವು
ನಭದ ತುಂಬಾ ದುಂಧುಭಿ.
ಗೂಡ ತುಂಬಿತು ಪ್ರೇಮ ಭಾಷೆ
ನೋಡಿ ನಕ್ಕಳು ಒಡತಿ
ಸಲುಹುವವನು ಕೊಲ್ಲಲಾರ.
ಭೂಮಿ ಒಡೆಯನ ಕಾವಲು .
ಸತ್ಯ ಶಾಂತಿ ಸಮತೆ ಪ್ರೀತಿ
ಜೀವ ಜಾಲಕೆ ಮೀಸಲು .
–ಡಾ.ಶಶಿಕಾಂತ.ಪಟ್ಟಣ -ಪೂನಾ