ನನ್ನ ಕನ್ನಡ
ಸವಿದಂತೆ ಹಾಲ್ಜೇನು
ಮಧುರಕಂಪಿನ ಹೊನಲು
ಮುರಳಿ ಗಾನದ ಇಂಪು
ಕನ್ನಡದ ನುಡಿಯು..
ರಾಜಠೀವಿಯಲುಲಿವ
ಸೊಗಸು ಮೈದುಂಬಿರುವ
ಸರಸದಲಿ ನಲಿ-ನಲಿವ
ಒಲವಿನ ಹೊನ್ನುಡಿಯು..
ಸಾಹಿತ್ಯ ಮಲ್ಲಿಗೆಯ
ಜಗದಿ ಘಮಘಮಿಸುತಲಿ
ಸರಸತಿಯ ಹೆಮ್ಮೆಯ
ಕಂದ ತಾ ಕನ್ನಡವು..
ಮೈ-ಮನದ ಅಣು-ಅಣುವು
ಉಸಿರಿನಾ ಪ್ರತಿ ಕಣವು
ರಕ್ತದ ಹನಿ-ಹನಿಯು
ನನ್ನ ಪ್ರಾಣ *ಕನ್ನಡವು* ..!!!
–ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.