ಎತ್ತ ಸಾಗುತ್ತಿದೆ ಬಸವ ತತ್ವ

ಎತ್ತ ಸಾಗುತ್ತಿದೆ ಬಸವ ತತ್ವ

*ಬಲ್ಲವರೆ ಎಲ್ಲರೂ
ತಿಳಿದವರೇ ಎಲ್ಲರೂ
ತಮ್ಮ ತಮ್ಮ ನಿಲುವೇ
ದೊಡ್ಡ ದು ಅವರಿಗೆ…..

ಅರಿವೇ ಇಲ್ಲದ ಕಲಿಕೆ ,ವ್ಯರ್ಥ ಪ್ರಯತ್ನ
ದಂಡ ಪರದಾಟ….
ಮಂತ್ರಗಿಂತ ಉಗಳೇ ಜಾಸ್ತಿ
ಎಂಬ ಧೋರಣೆ……!!

ಅರಿತವರು ಯಾರೂ ಇಲ್ಲದ
ಒಣ ಮಾತಿನ ಮಲ್ಲರ ಕೂಟ
ತಿಳುವಳಿಕೆಯ ಕೊರತೆ ಇದೆ
ತತ್ತ್ವದ ಸರಳತೆ ಅರಿವಿಲ್ಲ…..

ಮನೆಯಲ್ಲಿ ವರ್ಷಪೂರ್ತಿ ಬಹುದೇವ ಆರಾಧನೆ!!!
ವರ್ಷಪೂರ್ತಿ ಮುಖ ಪುಟದಲ್ಲಿ
ಎಕದೇವೋಪಾಸನೆ ವಿವರಣೆ!!!…
ಎತ್ತ ಸಾಗುತ್ತಿದೆ ಪಯಣ

ಸೂಕ್ಮತೆ ಸ್ವಯo ಪ್ರೇರಕ
ಬಸವಭಕ್ತರ ಕೊರತೆ ಇದೆ
ವಿಡಂಬನ ವಿವಾದಕೊಳಗಾಗುವ
ಸಾಹಿತಿ ತತ್ವಜ್ಞಾನಿಗಳ ಹಿಂಡು!!

ವಾದ ಮಾಡಲು ವಾಟ್ಸಪ್…..
ಒಣ ಪ್ರತಿಷ್ಟೇ ಮಹಾ ಸಾಧನೆ!!
ಕಾಲೆಳೆಯುವ ಭರದಲ್ಲಿ
ಅರಿವಿರದೇ ಸಿಲುಕಿದ ಸಾಹಿತಿಗಳು….!!

ಎತ್ತ ನೋಡಿದರೂ ಬರೀ ಅದೇ..
ವಣ ಬೂಟಾಟಿಕೆ ಜೀವನ ಶೈಲಿ!!
ಇದೆಲ್ಲಾ ಕಂಡೂ ಸಾಕಾಗಿದೆ
ಉತ್ತಮ ವಿಚಾರವಂತರಿಗೆ.

ಬಿಡಿ ಬಿಡಿ ಈಗಲಾದರೂ ಹೊಡೆದಾಟ ಮನೋಭಾವನೆ!
ಕಟ್ಟೋಣ ಬನ್ನಿ ಎಲ್ರೂ ಕೂಡಿ
ಬಸವ ಮಹಾಮನೆಯ ……

ವ್ಯಕ್ತಿ ನಿಷ್ಟೆ, ಬೇಡವೆ ಬೇಡಾ
ತತ್ವಗಳನ್ನು ಅರಿತು ಒಂದಾಗಿ
ಬಸವ ಸಂಜಾತೆಯ ಬಿನ್ನಹವಿದು
ಆಗಿ ಸಾಗೋಣ ……

ಕವಿತಾ  ಮಾಳ್ಗಿ,  ಕಲಬುರ್ಗಿ,

—————————————————————————-ಇಂದಿನ ಸಂಚಿಕೆಯ ಪ್ರಾಯೋಜಕರು

ಬಸವ ಮಂದಾರ ಮೆಡಿಕಲ್ & ಜನರಲ್ ಸ್ಟೋರ್, ಮಸ್ಕಿ

Don`t copy text!