ಸಂಕಷ್ಟದಲ್ಲಿ ಕುಳುವ ಸಮುದಾಯ – ಪ್ರತಾಪಗೌಡ ಪಾಟೀಲ್

e-ಸುದ್ದಿ, ಮಸ್ಕಿ
ಆಧುನಿಕ ಯುಗದಲ್ಲಿ ಕುಲ ಕಸುಬು ನಶಿಸಿ ಹೋಗಿರುವ ಹಿನ್ನೆಲೆಯಲ್ಲಿ ಕೊರಮ, ಕೊರಚ, ಕೊರವ ಸಮುದಾಯಗಳು ತೀವ್ರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿವೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ಮಸ್ಕಿ ತಾಲ್ಲೂಕಾ ಅಖಿಲ ಕರ್ನಾಟಕ ಕುಳುವ ಮಹಾಸಂಘ, ಹಾಗೂ ಯುವ, ನಗರ ಘಟಕ ಬಳಗಾನೂರÀ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಯಕಯೋಗಿ ನೂಲಿಯ ಚಂದಯ್ಯನವರ ಜಯಂತೋತ್ಸವ, ಹಾಗೂ ಕುಳುವ ಮಹಾಸಂಘ ನಗರ ಘಟಕ ಉದ್ಘಾಟನೆ ಹಾಗೂ ವಿಧ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಶಿಕ್ಷಣ ಮುಖ್ಯವಾಗಿದ್ದು ಸಮುದಾಯದಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸರ್ಕಾರದಿಂದ ಮೀಸಲಾತಿಗೆ ಅನುಗುಣವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದರ ಮೂಲಕ ಬೆಳವಣಿಗೆ ಹೊಂದಬೇಕು ಎಂದು ಪ್ರತಾಪಗೌಡ ಪಾಟೀಲ ತಿಳಿಸಿದರು. ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಹಾಗೂ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.


ತುಂಗಭದ್ರಾ ಕಾಡಾದ ಮಾಜಿ ಅಧ್ಯಕ್ಷ ಆರ್. ಬಸ್ಸನಗೌಡ ತುರ್ವಿಹಾಳ ನೂಲಿಯ ಚಂದಯ್ಯ ವೃತ್ತ ಉದ್ಘಾಟನೆ ಮಾಡಿ ಮಾತನಾಡಿದರು. ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟುಗಳ ಯುವಜನ ಒಕ್ಕೂಟದ ರಾಜ್ಯಾಧ್ಯಕ್ಷ ಡಾ: ಬಿ.ಮಲ್ಲಿಕಾರ್ಜುನ ಮಾತನಾಡಿದರು.
ಬಸವ ಪ್ರಸಾದ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕಲಬುರ್ಗಿ ವಿಭಾಗಿಯ ಅಧ್ಯಕ್ಷ, ಮಸ್ಕಿ ಪುರಸಭೆಯ ಸದಸ್ಯರಾದ ನೀಲಕಂಠಪ್ಪ ಬಜಂತ್ರಿ ಮಸ್ಕಿ ವಹಿಸಿದ್ದರು. ಎಕೆಎಂಎಸ್ ಬೆಂಗಳೂರು ರಾಜ್ಯಪ್ರಧಾನ ಕಾರ್ಯದರ್ಶಿ ಆನಂದಕುಮಾರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜಯಶೀಲ ವೀಜಯ ಇದ್ದರು.
ಸನ್ಮಾನ: ಲಂಕೆಪ್ಪ ಭಜಂತ್ರಿ, ಹಾಗೂ ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಲಾಸಾಧರಿಗೆ ಸನ್ಮಾನಿಸಿ ಗೌರÀವಿಸಲಾಯಿತು. ಮಹಾಸಂಘದ ಸಿಂಧನೂರು ತಾಲ್ಲೂಕಾ ಅಧ್ಯಕ್ಷ ಮರಿಯಪ್ಪ, ಬಳಗಾನೂರು ಪಪಂ ಅಧ್ಯಕ್ಷೆ ನೂರಜಹಾನ್ ಬೇಗಂ, ಬಿಜೆಪಿ ಮುಖಂಡರಾದ ಶೇಖರಪ್ಪ ಮೇಟಿ, ಬಿ.ತಿಕ್ಕಯ್ಯ, ಎಚ್.ಮಹಾಭಳೇಶ, ಕೆ.ರಾಘವೇಂದ್ರ ನಗರ ಘಟಕದ ಅಧ್ಯಕ್ಷ ಕರೆ ಕಲ್ಲಪ್ಪ, ಹನುಮಂತ ಜವಳಗೇರಾ, ಯಲ್ಲಪ್ಪ, ಹನುಮಂತ ಹುಲುಗಪ್ಪ, ಹನುಮಂತ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

 

Don`t copy text!