ದಿನಾಂಕ ೨೮-೨-೨೦೨೧ ರಂದು ನಡೆದ ಗೂಗಲ್ ಮೀಟ್ ಶರಣ ಸಾಹಿತ್ಯ ಚಿಂತನ ಮಂಥನ ಮಾಲಿಕೆ- ೧೭
*ಸ್ಥಾವರಕ್ಕಳಿವುಂಟು*
*ಕುಮಾರಿ ಗ್ರೀಷ್ಮ
ಅಜ್ಞಾನವೆಂಬ ತೊಟ್ಟಿಲಲ್ಲಿ ಜ್ಞಾನವೆಂಬ ಶಿಶುವ ಮಲಗಿಸಿ ಎನ್ನುವ ಅಲ್ಲಮಪ್ರಭುಗಳ ವಚನವನ್ನು ಸುಶ್ರಾವ್ಯವಾಗಿ ಹಾಡಿದಳು.
ವಿದ್ಯಾಮುಗ್ದುಮ್ ಅವರು
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ಎನ್ನುವ ಬಸವಣ್ಣನವರ ವಚನವನ್ನು ಅಮೋಘವಾಗಿ ಹಾಡಿದರು…
*ಗೀತಾ ಜಿ ಎಸ್ ಅವರು
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು
ಸಗಣಕ್ಕೆ ಸಾಸಿರ ಹುಳ ಹುಟ್ಟವೆ ದೇವಾ ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು…
ರುದ್ರಮೂರ್ತಿ ಸರ್ ಅವರು
ಗೂಗಲ್ ಮೀಟ್ ಗೆ ಬಂದಂತ ಸರ್ವ ಶರಣ ಶರಣೆಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆರಂಭಿಸಿ, ಶರಣರ ಚಿಂತನೆಯಲ್ಲಿ ಸ್ಥಾವರ ಎಂದರೆ ಏನು ಜಂಗಮ ಎಂದರೆ ಏನು ಸ್ಥಾವರ ಮುಖ್ಯವೋ ಜಂಗಮ ಮುಖ್ಯವೋ,ಶರಣರ ಚಿಂತನೆಯಲ್ಲಿ ಸ್ಥಾವರದ ಪರಿಕಲ್ಪನೆ ಏನು ಎಂದು ತಿಳಿದುಕೊಳ್ಳಬೇಕು…
ಎರೆದರೆ ನೆನೆಯದು,ಮರೆತರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ, ಜಂಗಮಕ್ಕೆ ಎರೆದರೆ ಸ್ಥಾವರವು ತನ್ನ ಅವಶ್ಯಕತೆಯನ್ನು ಜಂಗಮ ಸೇವೆಯಲ್ಲಿ ಪೂರೈಸುವ ಶಕ್ತಿಯನ್ನು ಹೊಂದಿರುತ್ತದೆ.ಈ ವಿಚಾರವನ್ನು ಡಾ.ಪಟ್ಟಣ ಸರ್ ನಮ್ಮೆಲ್ಲರಿಗೂ ತಿಳಿಸಿಕೊಡುತ್ತಾರೆ ಎಂದು ಹೇಳಿದರು…
ಡಾ.ಶಶಿಕಾಂತ ಪಟ್ಟಣ ಅವರು ಮಾತನಾಡಿ
ಕೊಟ್ಟಿರುವ ವಿಷಯವು ಮೇಲ್ನೋಟಕ್ಕೆ ಸರಳವಾಗಿ ಕಾಣುವ ವಿಚಾರ ೯00 ವರ್ಷಗಳ ಹಿಂದೆ ನಡೆದಿದೆ. ಬುದ್ಧನ ನಂತರ 1700 ವರ್ಷಗಳ ನಂತರ ಯಾವ ವೈಚಾರಿಕ ಪ್ರಜ್ಞೆ ಇರಲಿಲ್ಲ. ಭಾರತದೊಳಗೆ ಬಹುದೊಡ್ಡ ಕ್ರಾಂತಿ ನಡೆಯಿತು.ಸನಾತರು ಬುದ್ಧನನ್ನು ದಶಾವತಾರಿಯನ್ನಾಗಿ ಮಾಡಿದರು. ಅವನ ಭಂಗಿಗಳನ್ನುವಿಷ್ಣುವಿನ ಭಂಗಿಯಲ್ಲಿ ತೋರಿಸಿದರು. ಬಸವಣ್ಣನವರು ಆ ವ್ಯವಸ್ಥೆಯನ್ನು ಧಿಕ್ಕರಿಸಿದಾಗ ಸನಾತೆಯ ವ್ಯವಸ್ಥೆಯ ಬೇರುಗಳು ಅಲ್ಲಾಡತೊಡಗಿದವು ಎಂದು ತಿಳಿಸಿದರು…
ಜಡ,ಗುಡಿ ಸ್ಥಾವರ ಸಂಸ್ಕೃತಿಯನ್ನು ಅವರು ಪ್ರಶ್ನಿಸಿದರು,
೯00 ವರ್ಷಗಳ ಹಿಂದೆ 8 ವರ್ಷಗಳ ಬಾಲಕ ತನ್ನ ಅಕ್ಕನಿಗೆ ಜನಿವಾರವನ್ನು ಹಾಕದಿರುವ ಬಗ್ಗೆ ವಿರೋಧಿಸಿದ ಬಸವಣ್ಣನವರು ಮಹಿಳೆಯರು ಹಾಗೂ ದೀನ ದಲಿತರಿಗೆ ಸಮಾನತೆಯನ್ನು ತಂದು ಕೊಟ್ಟರು,ಎಲ್ಲಿ ಮನಸ್ಸು ಸಂಸ್ಕೃತಿ ಆಚಾರ ವಿಚಾರಗಳು ಜಡತ್ವಗೊಂಡಾಗ ಅವೆಲ್ಲವೂ ಜಡವಾಗುತ್ತದೆ. ಅಂಥ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸವನ್ನು ಬಸವಣ್ಣನವರು ಹೇಳಿಕೊಟ್ಟರು.ಅಲ್ಲಿಂದ ಕ್ರಾಂತಿಯ ಕಿಡಿಯನ್ನು ಹಚ್ಚಿದರು ಎಂದು ತಿಳಿಸಿದರು..
ಯಾವುದೇ ಚಲನವಿಲ್ಲದ ಸ್ಥಿತಿಯೇ ಸ್ಥಾವರ.ಸ್ಥಾವರ ಯಾವಾಗಲೂ ನಶಿಸುತ್ತದೆ. ಆತ್ಮ,ಪ್ರಾಣ ಮತ್ತು ದೇಹದ ಸಂಗಮವೇ ಕಾಯಕ,ಅದೇ ದೇವರು ಎಂದು ತಿಳಿಸಿದರು.
ನಿಷ್ಕ್ರೀಯವಾದ ಮನಸ್ಸು ಜಡತ್ವ ಕ್ರೀಯಾಶೀಲವಾಗಿರುವುದೇ ಚೈತನ್ಯ, ನಾವು ಲಾಂಛನಗಳಿಗೆ ಜೋತು ಬೀಳಬಾರದು, ಹಂತಹಂತವಾಗಿ ಈ ವ್ಯವಸ್ಥೆಯನ್ನು ನಾವು ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು. ಸತ್ತಿದ್ದು ವ್ಯಕ್ತಿಯೇ ಹೊರೆತು ಸತ್ಯವಲ್ಲ.
ಸತ್ಯ ಎನ್ನುವುದು ಜಂಗಮ, ಅಂಜಿಕೆ ಎನ್ನುವುದೇ ಸ್ಥಾವರ
ಪುಸ್ತಕ ಸ್ಥಾವರ, ಗ್ರಂಥಗಳು ಸ್ಥಾವರ ಆದರೆ ಅದರಲ್ಲಿರುವ ಅರಿವು ಜಂಗಮ, ಇಷ್ಟಲಿಂಗವು ಉತ್ಪಾದಿತ ವಸ್ತುವಲ್ಲ, ಇಷ್ಟಲಿಂಗವೂ ಸ್ಥಾವರವೇ. ನನ್ನನ್ನು ನಾನು ಮೊದಲು ಅರಿಯಬೇಕು, ಗುರು ವ್ಯಕ್ತಿಯಲ್ಲ, ಲಿಂಗ ವಸ್ತುವಲ್ಲ ಜಾತಿ ಜಂಗಮವಲ್ಲ ಎಂದು ತಿಳಿಸಿದರು. ಹಲವಾರು ವಚನಗಳು ಅರ್ಥವನ್ನು ಉದಾಹರಣೆ ಸಮೇತ ತಿಳಿಸಿ, ಶರಣ ಸಿದ್ಧಾಂತದ ಆಶಯಗಳನ್ನು ತಿಳಿದು ಅದರಂತೆ ನಾವು ನಮ್ಮ ಬದುಕಿನಲ್ಲಿ ಅನುಸರಿಸಬೇಕು ಎಂದು ತಿಳಿಸಿದರು…
*ಅಂಬಾರಾಯ ಬೀರದಾರ ಮಾತನಾಡಿ
ವೈಚಾರಿಕ ಸಾಮಾಜಿಕ ಹಾಗೂ ನೆಲೆಯಲ್ಲಿ ಚಿಂತನೆ ನಡೆಯುತ್ತಿದೆ, ನೀವು ಹೇಳುತ್ತಿರುವುದೆಲ್ಲಾ ಸತ್ಯ,ಅರಗಿಸಿಕೊಳ್ಳುವ ಮನಸ್ಸು ಬೇಕು ಅಷ್ಟೇ ಎಂದು ತಿಳಿಸಿ, ಶಿವಯೋಗದ ಪ್ರಕ್ರೀಯೆಯನ್ನು ಶರಣರು ಹಾಕಿಕೊಟ್ಟರು. ಆದರೆ ಗುರು ಜಾತಿಗೆ ಸೀಮಿತವಲ್ಲ,ಶರಣು ಕಾಯಕ ಮಾಡುವ ಜಂಗಮರು ಸ್ಥಾವರದೆಡೆಗೆ ಹೋಗಿ ಶರಣರ ನಿಜ ತತ್ವವನ್ನು ಮರೆತಿದ್ದಾರೆ, ನನ್ನೊಳಗೆ ದೇವರಿದ್ದಾನೆ ಈ ಬ್ರಹ್ಮ ಸತ್ಯವನ್ನು ಜನರಿಗೆ ತಿಳಿಸಬೇಕು.50 ರೋ ಲಿಂಗವನ್ನು 5000 ದವರೆಗೆ ಮಾರುತ್ತಿದ್ದಾರೆ,ಅವರು ಐಶಾರಾಮಿ ಜೀವನ ಮಾಡಲು ಜನರಿಗೆ ಮೋಸ ಮಾಡುತ್ತಿದ್ದಾರೆ ಕೆಲವರು ಇಷ್ಟಲಿಂಗದೊಳಗೆ ಮ್ಯಾಗ್ನೆಟ್ ಇಡುತ್ತಾರೆ, ಇದು ಸಲ್ಲದು ಎಂದು ತಿಳಿಸಿ, ಲಿಂಗ ಎನ್ನುವುದು ಶೂನ್ಯದ ಕುರುಹು, ಅದು ಕಪ್ಪು ಕಾಂತಿಯನ್ನು ಹೊಂದಿರುತ್ತದೆ.ದೀಪದ ಕಾಡಿಗೆ ಮತ್ತು ಕ್ಯಾರೆಣ್ಣೆಯಿಂದ ಲಿಂಗವನ್ನು ಮಾಡುತ್ತಾರೆ ಎಂದು ತಿಳಿಸಿದರು…
*ಲಿಂಗಪ್ಪ ಕಲ್ಬುರ್ಗಿ* ಮಾತನಾಡಿ
ಶರಣ ಧರ್ಮದ ತತ್ವಗಳನ್ನು ಅರಿತು ಅಳವಡಿಸಿ ಕೊಂಡರೆ ಜಂಗಮವಾಗುತ್ತದೆ,ಇಲ್ಲದಿದ್ದರೆ
ಸ್ಥಾವರ ವಾಗುತ್ತದೆ ಎಂದು ತಿಳಿಸಿದರು…
*ಮಲ್ಲಿಕಾರ್ಜುನ ಅಂಗಡಿ* ಮಾತನಾಡಿ
ಬಸವಾದಿ ಶರಣರ ವಿಚಾರ ಅತ್ಯಂತ ನಿಖರವಾದ ವಿಚಾರ,
ಗುಡಿಯಲ್ಲಿರುವ ಸ್ಥಾವರ ಲಿಂಗವನ್ನು ಇಷ್ಟಲಿಂಗಕ್ಕೆ ಹೋಲಿಸಬಾರದು, ಅವೆರಡೂ ಒಂದೇ ಎನ್ನುವರ ಮುಖವನ್ನು ನೋಡಲಾಗುತ್ತಿಲ್ಲ,ಲಿಂಗದ ಜೀವ ಚೈತನ್ಯವೇ ಜಂಗಮ ಎಂದು ತಿಳಿಸಿದರು…
*ಡಾ.ಉಮಾಕಾಂತ ಶೆಟ್ಕರ್* ಮಾತನಾಡಿ
ಲಿಂಗದ ಬಗ್ಗೆ ತಪ್ಪು ಕಲ್ಪನೆ ಇದೆ, ಬೇರೆ ಜನರಿಂದ ದುರುಪಯೋಗ ಆಗುತ್ತಿದೆ ಹಾಗಾಗಿ ಈ ವಿಷಯ ಮನೆಮನೆಗೂ ತಿಳಿಯಬೇಕು ಎಂದು ತಿಳಿಸಿದರು..
*ಸಂಗಮೇಶ ಸಾಲೀಮಠ್* ಮಾತನಾಡಿ
4 ಘಂಟೆಗೆ ಎದ್ದು ಶಿವಯೋಗ ಮಾಡ ಬೇಕು ಅನ್ನುತ್ತಾರೆ, ಮತ್ತು ಲಿಂಗದ ಒಳಗೆ ಸ್ಫಟಿಕ ಇರಬೇಕು ಅನ್ನುತ್ತಾರೆ ಇದು ನಿಜವೇ ಎಂದು ಕೇಳಿದರು…
ಶಿವಯೋಗ ಮಾಡುವಾಗ ಕಾಸ್ಮಿಕ್ ಪವರ್ ಹೊಂದಿರುತ್ತದೆ. ಇಷ್ಟಲಿಂಗವು ಕಪ್ಪು ಕಾಂತಿಯ ಅಂತರ್ಮುಖಿಯಾಗಿ ರುತ್ತದೆ,ಕಪ್ಪು ಕಾಂತಿಗಳು ಕಣ್ಣಿನ ಮೇಲೆ ಬಿದ್ದಾಗ ಪೀನಲ್ ಗ್ಲಾಂಡ್ ಲಿಂಗ ಚೈತನ್ಯದ ಅದ್ಭುತ ರಸವನ್ನು ಸ್ರವಿಸುತ್ತದೆ ಎಂದು ತಿಳಿಸಿದರು…
*ಸೋಮಶೇಖರ್ ಮುಗ್ಧುಮ್* :-ಮಾತನಾಡಿ
ಬಾಲ ಸಂಗಯ್ಯನವರ ಕಲ್ಲು ದೇವರು ದೇವರಲ್ಲ ಎನ್ನುವ ವಚನದ ಅರ್ಥವನ್ನು ತಿಳಿಸಿ ಹೇಳಿ ಹಾಗೆಯೇ ಅಂಬಿಗರ ಚೌಡಯ್ಯನವರೂ ಕೂಡ ನಿಷ್ಠುರವಾಗಿ ಹೇಳುವ ವಚನಕಾರ ಎಂದು ತಿಳಿಸಿದರು..
*ಶಾರದಾ ಅಂಬೆಸಂಗೆ* :-ಮಾತನಾಡಿ
ಯಾರು ಹೆಚ್ಚು ಬಸವ ತತ್ತ್ವವನ್ನು ಅಧ್ಯಯನ ಮಾಡಿರುತ್ತಾರೋ ಅವರು ಎಲ್ಲವನ್ನೂ ಅರಿತಿದ್ದಾರೆ, ಆದರೆ ಹಳ್ಳಿಗಳ ಕಡೆ ಈ ವಿಷಯಗಳನ್ನು ಮನವರಿಕೆ ಮಾಡಿ ಕೊಡಬೇಕು ಎಂದು ತಿಳಿಸಿ, ಕೆಲವು ಪೀಠಗಳಿಂದ ಬರುವ ಲಿಂಗಗಳ ಬಗ್ಗೆ ವಿವರಣೆ ಕೇಳಿದರು…
ಶ್ರೀಮತಿ ವಿದ್ಯಾ ಮುಗ್ಧ್ ಮ ರವರು ಗುರುಸೇವೆ ಮಾಡಿದೊಡೆ ಇಹದಲ್ಲಿ ಸುಖ, ಲಿಂಗ ಸೇವೆ ಮಾಡಿದಡೆ ಪರದಲ್ಲಿ ಸುಖ ಎನ್ನುವ ವಚನವನ್ನು ಹಾಡಿದರು.
ರುದ್ರಮೂರ್ತಿ ಸರ್ ಸರ್ವರೆಲ್ಲರನ್ನೂ ವಂದಿಸಿ ಮುಂದಿನ ವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇರುವುದರಿಂದ ಮಹಿಳೆಯರೇ ಭಾಗವಹಿಸಬೇಕು, ಶರಣ ಸಮಾಜದಲ್ಲಿ ಸ್ತ್ರೀಯರು- ವಚನಕಾರರು ಎನ್ನುವ ವಿಷಯವನ್ನು ಕೊಟ್ಟಿದ್ದೇವೆ, ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮನ್ನು ಕೇಳಿ ತಿಳಿದುಕೊಳ್ಳಿ ಎಂದು ತಿಳಿಸಿ ಕಾರ್ಯಕ್ರಮವನ್ನು ಮುಗಿಸಿದರು…
ವರದಿ
ಗೀತಾ ಜಿ ಎಸ್
ಹರಮಘಟ್ಟ ಶಿವಮೊಗ್ಗ