ಸತ್ಯ ಹೇಳುವವ


ಸತ್ಯ ಹೇಳುವವ

ಸತ್ಯ ಹೇಳುವವ ಹೆದರುವದಿಲ್ಲ .
ಹೆದರುವವ ಸತ್ಯ ಹೇಳುವದಿಲ್ಲ .
ತಿವಿಯುತ್ತಾನೆ ಕುಟುಕುತ್ತಾನೆ,.
ನೋವಾಗದಿರಲು ಜರೆಯುತ್ತಾನೆ .
ಜಡ ಸಮಾಜ ತಿದ್ದುತ್ತಾನೆ.
ಸ್ಪಂದಿಸದಾಗ ಮರಗುತ್ತಾನೆ .
ಟೀಕೆ ನೋವು ಅವಮಾನಕ್ಕೆ
ಜಗ್ಗುವದಿಲ್ಲ ಬಗ್ಗುವದಿಲ್ಲ .
ತನ್ನ ಮನೆ ನಗೆ ಸುಖ ಬಿಟ್ಟು
ಹೊರ ಜಗಕೆ ಅಳುತ್ತಾನೆ .
ಹಸಿವು ಶೋಷಣೆ ಅಸಮಾನತೆಗೆ
ನಿತ್ಯ ನಿರಂತರ ಸಂಘರ್ಷ ಸೆಣಸಾಟ .
ಚಳುವಳಿ ಬಂಡಾಯ ಹೋರಾಟ .
ನವನಿರ್ಮಾಣ ಕ್ರಾಂತಿ ಪ್ರಗತಿ ಪಥ
ಜನರ ಭ್ರಾಂತಿ ಬೇರು ಸಡಿಲು
ಗುಂಪು ಚದುರುತ್ತದೆ.
ಮತ್ತೆ ಒಬ್ಬಂಟಿಗನ ಅಳಲು .
ಸತ್ಯ ಶೂಲಕ್ಕೆರುತ್ತದೆ.
ಸತ್ಯ ಹೇಳುವವನಿಗೆ ಗುಂಡು .
ರಕ್ತಸಿಕ್ತ ಕಗ್ಗೊಲೆ .
ಸ೦ಪ್ರದಾಯಿಗಳ ಅಟ್ಟಹಾಸ .
ಪ್ರತಿಭಟನೆ ಮುಷ್ಕರ ಕೂಗಾಟ
ಅಳುವ ಜನರ ರಂಪಾಟ .
ಮೆರವಣಿಗೆ ಜಾಥಾ ನ್ಯಾಯಕ್ಕೆ
ಸುತ್ತಲೂ ಬಿದ್ದವೆ ಅನಾಥ ಭಿತ್ತಿ ಪತ್ರ
ಇಲ್ಲದವರಿಗೆ ಇಲ್ಲವಾಯಿತು ಮಾರ್ಗ .
ಕುಹುಕಿಗಳ ಒಳಗೊಳಗೆ ನಕ್ಕ ಸಂಭ್ರಮ .
ಸತ್ಯ ಹೇಳುವವ ಸಾಯುತ್ತಾನೆ.
ಸತ್ಯ ಸಾಯುವದಿಲ್ಲ ಸತ್ಯ ಸಾಯುವದಿಲ್ಲ.
ಸತ್ಯ ಹೇಳುವವ ಹೆದರುವದಿಲ್ಲ .
ಹೆದರುವವ ಸತ್ಯ ಹೇಳುವದಿಲ್ಲ .

*ಡಾ.ಶಶಿಕಾಂತ.ಪಟ್ಟಣ –ರಾಮದುರ್ಗ.*

Don`t copy text!