ಆಸೆಯನಳಿದು ರೋಷವ ನಿಲಿಸಿ

ಆಸೆಯನಳಿದು ರೋಷವ ನಿಲಿಸಿ

ಆಸೆಯನಳಿದು, ರೋಷವ ನಿಲಿಸಿ,
ಜಗದ ಪಾಶವ ಹರಿದು,
ಈಶ್ವರನೆನಿಸಿಕೊಂಬ ಶರಣರ
ಜಗದ ಹೇಸಿಗಳೆತ್ತಬಲ್ಲರು #ಅಪ್ಪಣ್ಣಪ್ರಿಯ_ಚೆನ್ನಬಸವಣ್ಣಾ .

—-#ಶರಣೆ_ಹಡಪದ_ಲಿಂಗಮ್ಮನವರು.

#ಭಾವಾರ್ಥ-;

ಸಾಮಾನ್ಯ ಮನುಷ್ಯರಿಗೆ
ಹಲವಾರು ಆಸೆಗಳಿರುತ್ತವೆ.
ಈ ಆಸೆಗಳು ದಿನದಿಂದ ದಿನಕ್ಕೆ ಹೆಚ್ಚಾದಂತೆ.
ಮನಃಶಾಂತಿ ಇಲ್ಲದಂತಾಗುತ್ತದೆ,
ಅದರೊಂದಿಗೆ ದುಃಖವೂ ಹೆಚ್ಚಾಗುತ್ತದೆ.
ಆಗ ಮನುಷ್ಯನಿಗೆ ಆಸೆಯನ್ನು ತಡೆಯಲಾಗದೆ
ಆಸೆಯಿಂದ ರೋಷ ಹೆಚ್ಚಿ.
ರೋಷದಿಂದ ದ್ವೇಷ ಹೆಚ್ಚಿ.
ದ್ವೇಷದಿಂದ ಮನಸ್ಸಿಗೆ ಹಾನಿಯುಂಟಾಗುತ್ತದೆ.
ಸಂಬಂಧಗಳು ಹಾಳಾಗುತ್ತವೆ..
ಈ ಸತ್ಯವನರಿದ ಶರಣರಿಗೆ ಆಸೆ ಆಮಿಷ ರೋಷ ವಿಷಯಾದಿಗಳಿಲ್ಲ.
ಆಸೆಯಂಬ ಪಾಶಕ್ಕೆ ಸಿಲುಕದವರು ನಿಲುಕದವರು ಶರಣರು,
ರೋಷಾದಿ ದ್ವೇಷವನ್ನು ತಡೆದು ನಿಲ್ಲಿಸಿದವರು ಶರಣರು.,
ಜಗದ ಆಕರ್ಷಣೆಯ ಮೋಹ ಪಾಶವನ್ನೇ ಹರಿದು ಬಿಟ್ಟವರು‌ ಶರಣರು.,
ಶುದ್ಧ ಮನದ ಸಿದ್ಧ ಪ್ರಸಿದ್ಧ ಪ್ರಬುದ್ಧರಿವರು ಶರಣರು.
ಅಂಗಭೋಗವ ತೊರೆದ ಲಿಂಗಭೋಗಿಗಳು ಶರಣರು.
ಲಿಂಗಾಂಗ ಸಾಮರಸ್ಯದಲ್ಲಿ ತಲ್ಲೀನರಾಗಿ ಜಗದ ಜಂಜಡವ ಬಿಟ್ಟವರು ನಮ್ಮ ಶರಣರು..
ಇಂತಪ್ಪ ಶರಣರ ಜಗದ ಹೇಸಿ(ಕೊಳಕು) ಮನಸ್ಸುಳ್ಳವರೇನು ಬಲ್ಲರು..? ಎಂದು ಪ್ರಶ್ನಿಸುತ್ತಾರೆ ಶರಣೆ ಹಡಪದ ಲಿಂಗಮ್ಮನವರು.

ಲೋಕೇಶ್, ಎನ್  ಮಾನ್ವಿ

Don`t copy text!