ಗಜಲ್

ಗಜಲ್

‘ಮಲ್ಲಿ’ ಗೆ ದೂರದ ಭಯ ಕಾಡುತಿದೆ
ಮನಸು ಪ್ರೀತಿಯ ಮುದ ಬಯಸುತಿದೆ

ಅನುಭವದ ಒಲವು ಕಾಣದು ಕಣ್ಣಿಗೆ
ಕನಸು ಬಾಹುಗಳ ಬಂಧನ ಬೇಡುತಿದೆ

ಕಣ್ಣು ಕುಕ್ಕುವುದು ಚೆಲುವಲ್ಲ ಚೆಲುವೆ
ಹೃದಯ ಮಿಲನಕ್ಕಾಗಿ ಕನವರಿಸುತಿದೆ

ಅಲೆಗಳ ಅಬ್ಬರವು ಅನುರಾಗವಾಗದು
ಕಂಗಳು ಸಾಂಗತ್ಯಕ್ಕಾಗಿ ಪರಿತಪಿಸುತಿದೆ

ಕಾಯ ಕಾಯಿಸುವುದು ಅನುರಾಗವಲ್ಲ
ಶಾಂತಿಗಾಗಿ ತನು-ಮನವು ಕಾಯುತಿದೆೆ

-✍️ರತ್ನರಾಯಮಲ್ಲ

—————————————————————————ಬಸವ ಮಂದಾರ ಮೆಡಿಕಲ್ , ಜನರಲ್ ಸ್ಟೋರ್ ಮಸ್ಕಿ

One thought on “ಗಜಲ್

Comments are closed.

Don`t copy text!