ಮಗಳು

 

ಮಗಳು
ಪಾದರಸದಂತೆ ಓಡಾಡುತ್ತಾ
ಘಲಕ್ ಘಲಕ್ ಗೆಜ್ಜೆಯ ಹೆಜ್ಜೆಯನೀಡುತ್ತಾ
ಅತ್ತಿತ್ತವರ ಕಣ್ ಸೆಳೆಯುತ ಓಡಾಡುವ,
ಚಿಮ್ಮಿ ಚುಮಿಕಿಸುವ ಉತ್ಸಹದ ಚಿಲುಮೆ ನೀ
ಎಲ್ಲಾರ ಪ್ರೀತಿಯ ಒಲುಮೆ ನೀ
ಬಾಳಂಗದಲಿ ಕತ್ತಲೆ  ಕಳೆಯುವ ಚುಮು ಚುಮು ಬೆಳಕು ಚೆಲ್ಲುವ ಸೂರ್ಯನಂತೆ
ಎಲ್ಲಾರ ಮನದ ನೋವನ್ನು ಮರೆಸುವ
ಮನೆಯ (ಮನದ )ನಂದಾದೀಪಾ ನೀ, ಬಾಳಿನಾ ಅಪರಂಜಿ ನೀ
ಹೊಡೆಯಲಿಲ್ಲಾ, ಬಡೆಯಲಿಲ್ಲ, ಬುದ್ದಿಯ ಮಾತಿಲ್ಲ
ವೇದಾಂತದ ಸುರಿಮಳೆ ಇಲ್ಲಾ
ಆದರೂ –
ನಾವು ನಿನ್ನ ಶರಣಾಗತರು

ಮಾಜಾನ್ ಮಸ್ಕಿ

Don`t copy text!