ಮಹಿಳೆ ಕಹಳೆ
ಮಂದಳಾಗದಿರು ಮಹಿಳೆ
ಮೊಳಗುತಿಹುದು ಕಹಳೆ
ಸಂಘಟನೆ ಸಮಾವೇಶಗಳಗಾಳಿ
ಬೀಸುತಿದೆ ಹೊಸತನ ತಾಳಿ
ಹೋದಸಮಯಬರದುನಾಳಿ
ನಿ ತೋರಿಸು ವೀರಳಾಗಿಬಾಳಿ
ಸಂಸಾರ ತೂಗಲು
ಮನೆಯನು ಬೆಳಗಲು
ಸವೆದವು ಅಂಗೈ ರೇಖೆಗಳು
ಅಂಜನಹಿಡಿದು ಹುಡುಕಿದರೆಲ್ಲಿ
ನಿನ್ನಯ ಅದೃಷ್ಟ ರೇಖೆಗಳು
ಸರ್ವಸಶಕ್ತಿನೀ ಸರ್ವಸುಭದ್ರೆ ನೀ
ಸಮಾಜವಿತ್ತ ಬಿರುದುಗಳು
ಭೋಜ್ಜೆಷು ಮಾತೆ ಕ್ಷಮಯಾಧರಿತ್ರೀ
ಕರುಣೇಷು ಮಾತೆ
ಮಹಿಳೆ ಕರಗುವತನಾ
ಅಕ್ಷಮ್ಯಗಳಿಗೆ ಎದುರಾದರೆ ರಗಳೆ
ನೀ ರಂಭೆ ಊರ್ವಶಿ ಮೇಣಕೆನಾ????
ಸಮಪಾಲು ನಿನಗೆ ಕಾನೂನಿನಲ್ಲಿ
ಸಮಭಾವ ಯಾವಾಗ ಸಮಾಜದಲ್ಲಿ????
ಹಾಳೆಯೊಳಷ್ಟೆ ಮಹಿಳೆ ಸಮನಾಗದೆ
ಬಾಳ ಭಂಧ ಭಾವಗಳ ಪರೀಧಿಯೋಳಗೂ ಮೀಸಲಿಡಿ ಮುಂದೆ
🌹ಜ್ಯೋತಿ ಮಾಳಿ🌹