ಕರೆದರೂ ಕೇಳದೆ ಕರುಳಿನ ಕೂಗು

ಕರೆದರೂ ಕೇಳದೆ ಕರುಳಿನ ಕೂಗು

ಕರೆದರೂ ಕೇಳದೆ ಕರುಳಿನ ಕೂಗು
ಕೂಗು ಆಲಿಸಿಯೂ ಕೇಳದಂತಿಹೆಏಕೆ
ಏಕೆ ಈ ಮೌನ ಹೇಳೆನ್ನ ಕಂದ
ಕಂದ ನೀ ನನ್ನ ಕರುಳಿನ ಬಂಧ

ಬಂಧವದು ರಕ್ತ ಮಾಂಸದ ಸಂಬಂಧ
ಸಂಬಂಧ ಎದೆಯ ಪ್ರತಿಮಿಡಿತದಲ್ಲಿ
ಮಿಡಿತದೊಳುತುಂಬಿ ಮಾತೃವಾತ್ಸಲ್ಯ
ವಾತ್ಸಲ್ಯದ ಹೊನಲುನಿನಗಾಗಿಮಗುವೆ

ಮಗು ನನ್ನುದರದಲಿ ನೀಮೂಡಿದಂದು
ಮೂಡಿದಂತಾಯಿತ್ತು ಪೂರ್ಣ ಚಂದ್ರ
ಚಂದ್ರಕಾಂತಿಯು ಮೈಮನದಲಿ ತುಂಬಿ
ತುಂಬಿ ಹೋಯಿತು ಹೃದಯ ಹರುಷದಿಂದ..

ಹರುಷ ದಿನವದು ನಿನ್ನ ಜನ್ಮದಿನವು
ದಿನವು ವರುಷಗಳಾಗಿ ನೀನು ಬೆಳೆದೆ
ಬೆಳಯುತಲಿ ಮರೆತೆ ನೀ ತಾಯಮಮತೆ
ಮಮತೆಯಕರೆಗೆ ನೀ ಕಿವುಡಾದೆ ಏಕೆ..?

ಹಮೀದಾಬೇಗಂ ದೇಸಾಯಿ. ಸಂಕೇಶ್ವರ. 

Don`t copy text!