ಅವಳು ಜಗದ ಕಣ್ಣು

ಅವಳು ಜಗದ ಕಣ್ಣು
_________________________

ಸ್ತ್ರೀ ಎಂದರೆ ಅದು ತನ್ನ ಮೊದಲ ಹೆಜ್ಜೆಗಳು ಇಟ್ಟಿದ್ದು ಸಹನೆ ಶಾಂತಿ ನೆಮ್ಮದಿಯ ಬದುಕು..

ಈಗ ಶರಣರ ಪ್ರಕಾರ ಹೆಣ್ಣೆಂದರೆ ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸ್ವತಹ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಸಿದ್ದರಾಮೇಶ್ವರ ಶರಣರು ಹೇಳಿದ್ದಾರೆ ಅಂದರೆ ದೇವರ ಪ್ರತಿರೂಪವಾಗಿ ಹೆಣ್ಣನ್ನ ಕಂಡಿದ್ದಾರೆ. ಅಂತೆಯೇ
12ನೇ ಶತಮಾನದಲ್ಲಿ ಹೆಣ್ಣು-ಗಂಡು ಎಂಬ ಭೇದಭಾವವಿಲ್ಲದೆ ಎಲ್ಲರೂ ಧಾರ್ಮಿಕ ಹಾಗೂ ಸಾಮಾಜಿಕ ಸಾಮಾಜಿಕವಾಗಿ ಹಕ್ಕನ್ನು ಕೊಟ್ಟಿದ್ದಾರೆ ಬಸವಣ್ಣನವರು. ಸಂಸ್ಕಾರದಿಂದ ಯಾರು ಬೇಕಾದರೂ ದೇವನನ್ನು ಒಲಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಅದರಂತೆ
ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕೆ ಜ್ಞಾನದ ಸಗಾರಿ ನೀಲಮ್ಮ ತಾಯಿ
ಶರಣೆಮುಕ್ತಾಯಕ್ಕ ಶರಣೆ ಆಯ್ದಕ್ಕಿ ಲಕ್ಕಮ್ಮಶರಣೆಯರು ಕೂಡ ವಚನಗಳನ್ನು ರಚಿಸಿದ್ದಾರೆ .ಒಂದು ಕುಟುಂಬದಲ್ಲಿ ಹೆಣ್ಣು ಎಷ್ಟು ಮುಖ್ಯ ಎನ್ನುವುದು ಸುಳ್ಳಲ್ಲ. ಹೆಣ್ಣು ಸಂಸಾರದ ಕಣ್ಣು,ಕುಟುಂಬದ ಆಗುಹೋಗುಗಳನ್ನು ನೋಡಿಕೊಂಡು ಮನೆಯಲ್ಲಿ ಸುಖ-ದುಃಖದಲ್ಲಿ ಬೇಕು-ಬೇಡಗಳನ್ನು ಪೂರೈಸಲು ಶಕ್ತಿಯಾಗಿ ಯುಕ್ತಿ ಯಾಗಿ ನಿಲ್ಲುವಳು. ಯಾರಿಗೆ ಏನು ಎಂಬುದು ಅವಳಿಗೆ ಗೊತ್ತು ಮಕ್ಕಳ ಪಾಲನೆ ಪೋಷಣೆ ಮತ್ತು ಮನೆಯ ಜವಾಬ್ದಾರಿ ಮತ್ತು ಮನೆಗೆ ಬಂದ ಅಡಿಗೆ ಮಾಡುವದು ಅತಿಥಿಗಳಿಗೆ ನೋಡಿಕ್ಕೊಳ್ಳುವುದು ಹೀಗೆ ನಾನಾ ಕೆಲಸಗಳನ್ನು ಅವಳೊಬ್ಬಳೆ ನಿಭಾಯಿಸಲು ಸಾಧ್ಯ..

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ನುಡಿಯುವಂತೆ ಹೆಣ್ಣು ಸುಶಿಕ್ಷಿಳಾದರೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ ಅವರನ್ನು ತನ್ನ ಹಿಡಿತದಲ್ಲಿಟ್ಟು ಇತರಕೆಟ್ಟ ಚಟಗಳಿಗೆ ಬಲಿಯಾಗದೆ ದಿನದ ಸುದ್ದಿ ದಿನಾಲು ಕೇಳುತ್ತಾ ಮಕ್ಕಳೊಂದಿಗೆ ಬಾಂಧವ್ಯ ರಿಂದ ಇದ್ದು ಸಂಸ್ಕಾರಯುತ ಜೀವನ ನಡೆಸಲು ಸಹಕಾರಿಯಾಗಿರಿವಳು.. ಹೆಣ್ಣು ಜಗದ ಕಣ್ಣು ಜಗತ್ತಿನ ಎಲ್ಲಾ ಸುದ್ದಿಗಳನ್ನು ಅರ್ಥಮಾಡಿಕೊಂಡು ತಾನು ಯಾವ ರೀತಿ ಇರಬೇಕು ಎಂದು ನಿರ್ಧರಿಸಬೇಕು. ಸಂಸ್ಕಾರವಂತರು ನಡೆ-ನುಡಿ ನುಡಿಗಳು ಸಮಯಕ್ಕೆ ತಕ್ಕ ಬುದ್ಧಿಯಿಂದ ಇರುವವಳು ಆಮಿಷಗಳಿಗೆ ಒಳಗಾಗದೆ ಕುಟುಂಬದ ಗೌರವ ಕಾಪಾಡಿಕೊಂಡು ಬರುವವಳಾಗಿರಬೇಕು..
ಯಾವುದೇ ವಿಚಾರದಲ್ಲಿ ಮನೆಯವರೊಂದಿಗೆ ಅಂದರೆ ತಂದೆ ತಾಯಿ ಅಣ್ಣ ತಮ್ಮ ಮಕ್ಕಳೊಂದಿಗೆ ಚರ್ಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು .
ಹೆಣ್ಣನ್ನು ಹುಟ್ಟುತ್ತಲೇ ಕೀಳಾಗಿ ಕಾಣುವ ಜಗತ್ತಿದೆ ಆದರೆ ಹೆಣ್ಣು ಈ ಜಗತ್ತಿನ ಅವಿಭಾಜ್ಯ ಅಂಗ ಒಂದು ನಾಣ್ಯದ ಎರಡು ಮುಖವಿದ್ದಂತೆ. ಹೆಣ್ಣ್ ಇಲ್ಲದಿದ್ದರೆ ಜೀವನ ಅಪೂರ್ಣ ಅದರಂತೆ ಗಂಡು ಕೂಡ ಇರದಿದ್ದರೆ ಎಂಬುದನ್ನು ಗಮನಿಸಬೇಕು. ಇಬ್ಬರು ಅರ್ಥಮಾಡಿಕೊಂಡು ಸಮಾನ ಮನಸ್ಕರಾಗಿ ಜೀವನ ಎಂಬ ಬಂಡಿಗೆ ಚಕ್ರಗಳಂತೆ ಇರಬೇಕು. ಒಂದು ಚಕ್ರ ಮುರಿದರೆ ಬಂಡಿ ಸಾಗದು ಇದು ಅರ್ಥಮಾಡಿಕೊಂಡು ಹೆಣ್ಣು-ಗಂಡು ಸಮಾನವಾಗಿರಬೇಕು. ಇನ್ನು ಭಾರತದಲ್ಲಿ ಪೂಜ್ಯನೀಯವಾಗಿ ಕಂಡಿದ್ದಾರೆ ಅಂದರೆ ಗಂಗಾಮಾತೆ, ಭೂಮಿತಾಯಿ ಆದಿಶಕ್ತಿ ಆದಿಶಕ್ತಿ ಎಲ್ಲರೂ ಪೂಜನೀಯರು ಹಾಗೆ ನಾವು ಕೂಡ ಹೆಣ್ಣನ್ನು ಪವಿತ್ರ ದೃಷ್ಟಿಯಿಂದ ಕಾಣಬೇಕು ಭೂಮಿಯಂತೆ ಸಹನೆ ಗಂಗೆಯಂತೆ ಪವಿತ್ರ ಮತ್ತು ಆದಿಶಕ್ತಿ ಎಲ್ಲರ ಕಾಪಾಡುವ ಹಾಗೂ ದುಷ್ಟರನ್ನು ಸಂಹರಿಸುವ ಗುಣ ಅವರಲ್ಲಿದೆ.

ಒಟ್ಟಾರೆ ಹೇಳುವುದಾದರೆ ಹೆಣ್ಣು ತನ್ನ ಹದ್ದುಮೀರಿ ಉಡುಗೆ-ತೊಡುಗೆ ಮಾತನಾಡುವ ಬಗ್ಗೆ ಮತ್ತುತನ್ನ ನಡೆ-ನುಡಿ ಚೆನ್ನಾಗಿ ಇಟ್ಟುಕೊಳ್ಳಬೇಕು. ಅಂತಲೇ ಗುರುಬಸವಣ್ಣನವರು ನಾರಿಗೆ ಗುಣವೇ ಶೃಂಗಾರ ಎಂದಿದ್ದಾರೆ ಅವಳ ಗುಣಗಳೇ ಮುತ್ತು ರತ್ನ ಒಡವೆ ಆಭರಣ. ರತ್ನ ಎಲ್ಲವೂ ಆಗಿರಬೇಕು. ಹೆಣ್ಣು ಜಗಳಗಂಟಿ ಗಯಾಳಿ ಇವೆಲ್ಲವೂ ಅವಳಿಗೆ ಕೆಟ್ಟ ಹೆಸರು ತಂದುಕೊಡುತ್ತವೆ.
ಒಂದು ಮನೆಯ ಅಳಿವು ಉಳಿವು ಎಲ್ಲವೂ ಅವಳ ಕೈಯಲ್ಲಿರುತ್ತದೆ.ಒಂದಲ್ಲ ಎರಡು ಮನೆಯ ಅಂದರೆ ಗಂಡನ ಮನೆ ಹಾಗೂ ತವರು ಮನೆಗೆ ಹೆಸರು ತರುವಂತಹ ಜವಾಬ್ದಾರಿ ಹೆಣ್ಣಿಗಿದೆ.ಈ ಎಲ್ಲಾ ಗುಣಗಳು ಅವರಲ್ಲಿದ್ದರೂ ಕೂಡ ಮನೆಯಲ್ಲಿ ಅವಳನ್ನ ಹೀಯಾಳಿಸುವ ದೌರ್ಜನ್ಯ ಮಾಡುವುದು ಹೀಗೆ ಮಾಡಿದರೆ ಅವಳಾದರೇನು ಮಾಡಬೇಕು..
ಅದಕ್ಕೆ ಮನೆ ಅಥವಾ ಸಮಾಜದಲ್ಲಿ ಹೆಣ್ಣಿಗೆ ಒಳ್ಳೆ ಸ್ಥಾನಮಾನ ಗೌರವ ಅವಶ್ಯಕ….

ಮಹಿಳಾ ಸಬಲೀಕರಣ ಮಹಿಳಾ ಸಂಘಟನೆಗಳು ಮಹಿಳೆಯರ ಸಮಸ್ಯೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ತಯಾರು ಇರಬೇಕು ಎಂಬುದು ನಮ್ಮ ಆಶಯ. ಬದಲಾವಣೆ ತರಲು ನಿರಂತರ ಹೋರಾಟ ಅನಿವಾರ್ಯತೆ ಎದುರಾಗಿದೆ.
ಸ್ತ್ರೀಪರ ನಿಲುವಿನ ಚಿತ್ರಗಳು ಧಾರಾವಾಹಿ ಹಾಗೂ ಮಾಧ್ಯಮ ಪತ್ರಿಕೆ ಮುಂತಾದಲ್ಲಿ ಬಿಂಬಿಸುವ ಪ್ರಯತ್ನ ಮಾಡಬೇಕು.ಹೆಣ್ಣಿಗೆ ಹೆಣ್ಣೇ ಶೋಷಣೆ ಮಾಡುವುದು ಸರಿಯಲ್ಲ ಎಂದರಿಯಬೇಕು


ವಿಜಯಲಕ್ಷ್ಮಿ ಜವಳಗಿ

Don`t copy text!