ದೂಷಕರ ಧೂಮಕೇತುಗಳು ನಮ್ಮ ಶರಣರು
ಊರಿಗೆ ಹೊಸಬರು ಬಂದರೆ
ಪುರದೊಳಗಣ ಶ್ವಾನ ನೋಡಿ
ಬೊಗುಳದೆ ಸುಮ್ಮನೆ ಬಿಡುವುದೆ.?
ಊರಿಗೆ ಹೊರಗಾದ ಶರಣರು
ಊರುಗಳ ಮಧ್ಯದೊಳಿರಲು
ದೂಷಕರು ದೂಷಿಸದಿಪ್ಪರೇ ಅಯ್ಯ ?
ದೂಷಕರ ಧೂಮಕೇತುಗಳು ನಿಮ್ಮ ಶರಣರು, #ಕೂಡಲಸಂಗಮದೇವಾ.
ಊರಿಗೆ_ಹೊಸಬರು_ಬಂದರೆ
ಪುರದೊಳಗಣ ಶ್ವಾನ ನೋಡಿ
ಬೊಗುಳದೆ ಸುಮ್ಮನೆ ಬಿಡುವುದೆ.?
ಊರಿನೊಳಗೆ ಅಪರಿಚಿತ ವ್ಯಕ್ತಿಗಳು ಬಂದರೆ
ಅವರನ್ನು ನೋಡಿ ಊರಲ್ಲಿನ
ಬೀದಿ ನಾಯಿಗಳು ಬೊಗಳದೆ ಇರಲಾರವು ,
ಅದರಂತೆಯೇ
ಊರಿಗೆ ಹೊರಗಾದ ಶರಣರು
ಊರುಗಳ ಮಧ್ಯದೊಳಿರಲು
ದೂಷಕರು ದೂಷಿಸದಿಪ್ಪರೇ ಅಯ್ಯ ?
ಭವಿಗಳಲ್ಲದ ಭಕ್ತರು
ಸತ್ಯರು’ ನಿತ್ಯರು’ ಸಜ್ಜನ ಸಾತ್ವಿಕರು ‘
ಶಿವಾನುಭವ ಸಂಪನ್ನರು, ಅರಿವುಳ್ಳ ಜ್ಞಾನಿಗಳು,
ಊರಿಗೆ ಬಂದಾಗ ಉರೊಳಗಿನ ಅಜ್ಞಾನಿಗಳು, ಮೂಢರು, ಮತಿಹೀನ ಮನಜರು ಬೊಗಳದೆ ನಿಂದಿಸದೆ ಇರಲಾರರು,,
ಜ್ಯೋತಿಯ ಕಂಡಾಗ ಕತ್ತಲೆ ಹೆದರುವಂತೆ’
ಅರಿವುಳ್ಳ ಜ್ಞಾನಿಗಳ ಕಂಡಾಗ ಅರಿಯದ ಅಜ್ಞಾನಿಗಳು ಹೆದರಿ ಬೊಗಳುವುದು ಸಹಜ,
ದೂಷಕರ_ಧೂಮಕೇತುಗಳು_ನಿಮ್ಮ_ಶರಣರು ಕೂಡಲಸಂಗಮದೇವಾ…
ಆದರೆ’ ತಾವು ನಿಂದಿಸಿದ್ದು ದೂಷಿಸಿದ್ದು ತಾವು ಚೆಲ್ಲಾಟವಾಡಿದ್ದು,
ಹುಲಿಯ ಮೀಸೆಯನಿಡಿದು ಉಯ್ಯಾಲೆಯನಾಡಿದಂತೆ,
ಉರಿವಕೊಳ್ಳಿಯ ಕೊಂಡು ಸೆರಗಲ್ಲಿ ಕಟ್ಟಿಕೊಂಡಂತೆ, ಅರಿವುಳ್ಳ ಮಹಾಜ್ಞಾನಿಗಳಾದ
ಶರಣರನ್ನು ನಿಂದಿಸಿದರೆ,
ತನ್ನ ಸೆರಗಲ್ಲಿ ತಾನೆ ಕೆಂಡ ಕಟ್ಟಿಕೊಂಡಂತೆ,
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು, ಎಂಬಂತೆ
ದೂಷಕರ ಬದುಕನ್ನೇ ಸುಡಬಲ್ಲ ಧೂಮಕೇತುಗಳು ನಿಮ್ಮ ಶರಣರು ಕೂಡಲ_ಸಂಗಮದೇವಾ ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು….
–ಲೋಕೇಶ್_ಎನ್_ಮಾನ್ವಿ