ಈ ಸಾವು ಅರಿವಾಗಲು ಎಷ್ಟೊಂದು ವಿವರಣೆ ಇದೆ ಅಂತ ನೋಡಿ
ಸಾವಿಗೆ ಚಳಿಯಿದೆ ಅಂತ ಗೊತ್ತಾದದ್ದು , ಯಾರೋ ಹೊದಿಸಿದಾಗ…
ಸಾವಿನ ಬಣ್ಣ ಕಪ್ಪಾಗಿದೆ ಅಂತ ಗೊತ್ತಾದದ್ದು , ಬಿಳಿ ಬಟ್ಟೆಯಿಂದ ಹೊದಿಸಿದಾಗ…
ಸಾವಿಗೆ ಪ್ರೀತಿಯಿದೆ ಅಂತ ಗೊತ್ತಾದದ್ದು , ಅಂದಿನವರೆಗೂ ದೂರವಿದ್ದವರು ಕಾಣಲು ಬಂದಾಗ…
ಸಾವಿಗೆ ಸುಗಂಧವಿದೆ ಅಂತ ಗೊತ್ತಾದದ್ದು , ಹೂಗಳನ್ನು ಅರ್ಪಿಸಿದಾಗ…
ಸಾವಿಗೆ ಆತ್ಮೀಯತೆ ಇದೆ ಅಂತ ಗೊತ್ತಾದದ್ದು , ಆಪ್ತರೆಲ್ಲರೂ ಬಂದು ಸೇರಿದಾಗ…
ಸಾವು ನಿಸ್ವಾರ್ಥಿ ಅಂತ ಗೊತ್ತಾದದ್ದು , ಬದುಕಿನುದ್ದಕ್ಕೂ ಶೇಖರಿಸಿಟ್ಟದ್ದನ್ನು ಕೊಂಡೊಯ್ಯದಾದಾಗ
ಸಾವು ಶಾಂತಿಯ ಪ್ರತೀಕ ಅಂತ ಗೊತ್ತಾದದ್ದು , ಬಿಳಿ ಬಟ್ಟೆಯನ್ನು ಧರಿಸಿದಾಗ..
ಸಾವು ಮೌನಿ ಅಂತ ಗೊತ್ತಾದದ್ದು ,
ಬಂದು ಸೇರಿದವರೆಲ್ಲರೂ ಮೂಖರಾದಾಗ..
ಸಾವು ದುಃಖ ಅಂತ ಗೊತ್ತಾದದ್ದು ಒಡಹುಟ್ಟಿದವರು ಮತ್ತು ಸಂಬಂಧಿಕರ ರೋದನವು ಮುಗಿಲು ಮುಟ್ಟಿದಾಗ…
ಸಾವು ಉಪವಾಸ ಅಂತ ಗೊತ್ತಾಗಿದ್ದು , ಮನೆಯಲ್ಲಿ ಒಲೆ ಉರಿಯದಿದ್ದಾಗ…
ಸಾವಿಗೂ ದಿಕ್ಕುಗಳಿವೆ ಅಂತ ಗೊತ್ತಾದದ್ದು ದಕ್ಷಿಣೋತ್ತರವಾಗಿ ಮಲಗಿಸಿದಾಗ..
ಸಾವು ನಿಶ್ಚಿತ ಅಂತ ಗೊತ್ತಾದದ್ದು , ಕೊನೆಯ ಶ್ವಾಸವು ಹೊರಟು ಹೋದಾಗ
–ಶ್ರೀ ಧರ್ಮ ಚೈತನ್ಯ ವಿಚಾರ ವೇದಿಕೆ (ವಾಟ್ಸ್ ಆಪ್ ಮೂಲಕ)