ಶಾಂತಿಸೌಹಾರ್ದಕ್ಕಾಗಿ ಕ್ರೀಡಾಕೂಟಗಳು- ವರರುದ್ರಮುನಿ ಶಿವಾಚಾರ್ಯ

 

e-ಸುದ್ದಿ, ಮಸ್ಕಿ

ಕ್ರೀಡೆಗಳು ಮನಷ್ಯನ ಮನಸ್ಸು ಮತ್ತು ದೈಹಿಕ ಸಾಮಾಥ್ರ್ಯ ವೃದ್ಧಿಸುವುದು ಮಾತ್ರವಲ್ಲದೇ ಶಾಂತಿ ಸೌಹಾರ್ದಕ್ಕಾಗಿ ಕ್ರೀಡಾಕೂಟಗಳಿವೆ ಎಂದು ಮಸ್ಕಿ ಗಚ್ಚಿನ ಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ 2ನೇ ಹಂತದ ಮಸ್ಕಿ ಪ್ರೀಮಿಯರ್ ಲೀಗ್'(ಎಂಪಿಎಲ್) ಕ್ರೀಕೆಟ್ ಟೂರ್ನಾಮೆಂಟ್‍ಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಸ್ನೇಹ, ಶಾಂತಿ ಹಾಗೂ ಭಾತೃತ್ವ ಭಾವನೆಗಳು ಮುಖ್ಯ. ಇಂತಹ ಭಾವನೆಗಳನ್ನು ಹುಟ್ಟಿಸುವುದಕ್ಕಾಗಿಯೇ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗುತ್ತದೆ. ಕ್ರೀಡೆಗಳು ದೇಶ-ದೇಶಗಳ ನಡುವೆ ಬಾಂಧವ್ಯವನ್ನೂ ವೃದ್ಧಿ ಮಾಡಿವೆ. ಹೀಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಕ್ರೀಡಾ ಮನೋಬಾವದಿಂದ ಕ್ರೀಡೆಯಲ್ಲಿ ತೊಡಗಬೇಕು. ಗೆದ್ದೇವು ಎಂದು ಬೀಗದೆ, ಸೋತೆವು ಎಂದು ಕುಗ್ಗದೆ, ಗೆಲುವು-ಸೋಲು ಎರಡನ್ನು ಸಾಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಸಿಪಿಐ ದೀಪಕ್ ಭೂಸರೆಡ್ಡಿ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ್, ಪತ್ರಕರ್ತರಾದ ಅಬ್ದುಲ್ ಅಜೀಜ್, ವೀರೇಶ ಸೌದ್ರಿ, ಪುರಸಭೆ ಸದಸ್ಯ ನೀಲಕಂಠಪ್ಪ ಭಜಂತ್ರಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ, ಬಿ.ಜಿ.ನಾಯಕ, ದುರಗಪ್ಪ, ಮಸೂದ್‍ಪಾಷ, ಸೇರಿ ಇತರರು ಇದ್ದರು.
ಎರಡನೇ ಹಂತದ ಮಸ್ಕಿ ಪ್ರೀಮಿಯರ್ ಲೀಗ್'(ಎಂಪಿಎಲ್) ಕ್ರೀಕೆಟ್ ಟೂರ್ನಾಮೆಂಟ್‍ನಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಿಲಿವೆ. ವಿಜೇತರಿಗೆ ಮೊದಲನೇ ಬಹುಮಾನ 50 ಸಾವಿರ ಹಾಗೂ ಎರಡನೇ ಬಹುಮಾನ 25 ಸಾವಿರ ರೂಪಾಯಿಗಳನ್ನು ಬಹುಮಾನ ನೀಡಲಾಗುವುದು ಎಂದು ತಂಡದ ಆಯೋಜಕ ಅಶೋಕ ಮುರಾರಿ ತಿಳಿಸಿದರು. ವಿವಿಧ ತಂಡಗಳ ಮಾಲಕರಾದ ಪರಶುರಾಮ ದೆವರಡ್ಡಿ ವಕೀಲರು, ಪುರಸಭೆ ಸದಸ್ಯ ದೇವಣ್ಣ ನಾಯಕ, ಆಶೋಕ ಮುರಾರಿ, ನಿವೃತ್ತ ಎಎಸೈ ಗೋವಿಂದಪ್ಪ, ಗೌಸ್‍ಪಾಷ, ಭರತ್ ಕುಮಾರ್, ಶಿವಪ್ರಸಾದ್ ಕಾಯಿ, ನಟರಾಜ್, ಬಸವರಾಜ ಬುಕ್ಕಣ್ಣ, ಬಸವರಾಜ ಕೊಠಾರಿ ಇದ್ದರು.

Don`t copy text!