ಇಂದೇ ಶುಭದಿನ

ಇಂದೇ ಶುಭದಿನ

ಅಂದು ಇಂದು ಮತ್ತೊಂದೆನಬೇಡ”
ದಿನವಿಂದೇ ಶಿವಶರಣರೆಂಬವಂಗೆ”
ದಿನವಿಂದೇ ಹರಶರಣೆಂಬವಂಗೆ”
ದಿನವಿಂದೇ ನಮ್ಮ ಕೂಡಲ ಸಂಗನ ಮಾಣದೆ ನೆನೆವಂಗೆ”

ಅಪ್ಪ_ವಿಶ್ವಗುರು_ಬಸವಣ್ಣನವರ_ವಚನ

#ಭಾವಾರ್ಥ-;
ಅಂದು ಇಂದು ನಾಳೆ ಈಗ
ಎಂದು ಸಮಯ ವ್ಯರ್ಥ ಕಳೆಯದೆ
ಶಿವನೆ ನಿನಗೆ ಶರಣು ಎಂದು ದುಡಿದವನಿಗೆ ಇಂದೇ ಸುದಿನ.

ಶುಭ ಅಶುಭ, ರಾಹುಕಾಲ ಗುಳಿಕಕಾಲ ವೆಂದು
ವ್ಯರ್ಥಸಮಯಸಾಧಕನಾಗದೆ,
ಹರನೇ ಶರಣು ಎಂದು ದೇವರ ಸ್ಮರಿಸಿ
ಮನಸ್ಸು ನಿತ್ಯನಿರ್ಮಲ ಶುದ್ಧವಾಗಿದ್ದರೆ ಅದುವೇ ಸುದಿನ,
ಒಳ್ಳೆಮನಸ್ಸಿಂದ ಕಾಯಕ ಪ್ರಾರಂಭಿಸುವವನಿಗೆ ಇಂದೇ
ಈ ಕ್ಷಣವೇ ಮಹಾದಿನ.
ನಮ್ಮ ಕೂಡಲ ಸಂಗಮನಾಥನನ್ನು
ತಪ್ಪದೇ ಧ್ಯಾನಿಸುವವನಿಗೆ
ಇದೀಗಲೇ ಸುಸಮಯವೆಂದು ಭಾವಿಸಬೇಕು,
ಸಮಯ ವ್ಯರ್ಥ ಮಾಡಬಾರದು.
ಶಿವನ ನೆನೆದು ನಮ್ಮ ನಮ್ಮ
ಕಾಯಕದಲ್ಲಿ ತೊಡಗಬೇಕು,
ಕಾಯಕವೇ ಪೂಜೆ ಪ್ರಾರ್ಥನೆಯಾಗಬೇಕು,
ಸಮಯಕ್ಕೆ ಕಾದು ಕೂಡಬಾರದು.
ಇರುವ ಸಮಯದಲ್ಲೇ ಸಾಧಿಸಬೇಕು..
ಎಂಬುದೇ ಮೇಲಿನ ವಚನ ಭಾವಾರ್ಥ,


ಲೋಕೇಶ್_ಎನ್_ಮಾನ್ವಿ•

Don`t copy text!