ದೇಶದ ಕಾನೂನು ಎಲ್ಲರಿಗೂ ಒಂದೇ 

ದೇಶದ ಕಾನೂನು ಎಲ್ಲರಿಗೂ ಒಂದೇ 

e-ಸುದ್ದಿ ವಿಶೇಷ

ಒಮ್ಮೆ ಗೋವಾದಲ್ಲಿ ಕಮೀಷನರ್ ಒಬ್ಬರ ಮಗ ಐಷಾರಾಮಿ ಕಾರಿನಲ್ಲಿ ರಾಂಗ್ ಸೈಡ್ ನಲ್ಲಿ ಬರುತ್ತಿದ್ದನಂತೆ. ಆಗ ಸ್ಕೂಟಿಯಲ್ಲಿ ಬಂದ ವ್ಯಕ್ತಿ ಇದು ರಾಂಗ್ ಸೈಡ್ ಕಣಪ್ಪಾ… ಹೀಗೆಲ್ಲಾ ಬರಬಾರದು ಅಂತ ಬುದ್ಧಿ ಹೇಳಿದರಂತೆ. ಅದಕ್ಕೆ ಕೋಪಗೊಂಡ ಆ ಹುಡುಗ ಕಾರಿಂದ ಇಳಿದು ನಾನು ಯಾರು ಗೊತ್ತಾ…? ಕಮೀಷನರ್ ಮಗ… ನನಗೆ ರೂಲ್ಸ್ ಹೇಳ್ತೀಯಾ ಅಂತ ದರ್ಪದಲ್ಲೇ ಮಾತನಾಡಿದನಂತೆ… ಆಗ ಎದುರಿಗಿದ್ದ ವ್ಯಕ್ತಿ ತನ್ನ ಹೆಲ್ಮೆಟ್ ತೆಗಿಯುತ್ತಾ ರೂಲ್ಸ್‌ ಎಂದ ಮೇಲೆ ಕಮೀಷನರ್ ಮಗನಿಗೂ ಅಷ್ಟೇ ಮುಖ್ಯಮಂತ್ರಿ ಮಗನಿಗೂ ಅಷ್ಟೇ ಎಂದು ನಗುತ್ತಾ ಹೇಳಿದರಂತೆ..ಅವರು ಬೇರೆ ಯಾರೂ ಅಲ್ಲ..ಗೋವಾದ ಮುಖ್ಯಮಂತ್ರಿ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್..
ಮುಖ್ಯಮಂತ್ರಿಯೊಬ್ಬ ಸ್ಕೂಟಿಯಲ್ಲಿ ಓಡಾಡುವಷ್ಟು ಸರಳತೆಯನ್ನು ನಾವು ಸಾಮಾನ್ಯರಲ್ಲಿ ಕಾಣಲು ಸಾಧ್ಯವೇ???
ಸಾವನ್ನು ಬಗಲಲ್ಲಿ ಕಟ್ಟಿಕೊಂಡು ತನ್ನ ಜನರಿಗಾಗಿ ಕೊನೆಯ ತನಕ ವಿಧಿಗೆ ಸೆಡ್ಡು ಹೊಡೆದು ಕೆಲಸ ಮಾಡಿದ ಮುಖ್ಯಮಂತ್ರಿಯೊಬ್ಬರನ್ನು ಈ ದೇಶ ಮೊದಲ ಬಾರಿಗೆ ಕಂಡಿತ್ತು… ದೇವರಿಗೆ ತುಂಬಾ ಅಸೂಯೆ ಅನ್ನಿಸುತ್ತೆ ತನ್ನಂತೆ ಕೆಲಸ ಮಾಡುವವರನ್ನ ಬಹುಬೇಗ ತನ್ನ ಬಳಿ ಕರೆಸಿಕೊಂಡು ಬಿಡುತ್ತಾನೆ.

Don`t copy text!