ವೇಷ —-ಹಸಿವು –ಆಡಂಬರ
ಉದರ ನಿಮಿತ್ತಂ ಬಹುಕೃತ ವೇಷಂ
ಪ್ರತಿಯೊಂದು ಜೀವಿಗೂ ಸಾವು ಕಟ್ಟಿಟ್ಟ ಬುತ್ತಿ. ಇಷ್ಟೆಲ್ಲಾ ಗೊತ್ತಿದ್ದರೂ ಕೂಡ ಉಳಿದ ಜೀವಿಗಳಿಗಿಂತ ಮನುಷ್ಯ ಪ್ರಾಣಿ ಹಲವಾರು ರೀತಿಯ ಮುಖವಾಡ, ವೇಷಗಳನ್ನು ಧರಿಸುತ್ತ ಬದುಕುತ್ತಿದ್ದಾನೆ. ಸಾಯುವ ಕೊನೆ ಹಂತದಲ್ಲಿ ಇದ್ದಾಗ ಕೂಡ ಆಸೆ ಆಮಿಷಗಳನ್ನು ಬಿಡುವುದಿಲ್ಲ.
*ಒಬ್ಬ ಆಗರ್ಭ ಶ್ರೀಮಂತ ಇನ್ನೇನು 5 ನಿಮಿಷಗಳಲ್ಲಿ ಸಾಯಲಿದ್ದಾನೆ ಆತನನ್ನು ನೋಡಲು ಬಂಧುಬಳಗದವರು ಅಕ್ಕಪಕ್ಕದ ಹಿರಿಯರು ಹಾಗೂ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ. ಆಗ ಸಾಯುವ ವ್ಯಕ್ತಿಯ ದನದ ಕೊಟ್ಟಿಗೆ ಕಡೆಗೆ ಕೈ ಮಾಡಿ ತೋರಿಸುತ್ತಿರುತ್ತಾನೆ. ಅಲ್ಲಿ ಸೇರಿದ ಪ್ರತಿಯೊಬ್ಬರೂ ಒಂದೊಂದು ಅರ್ಥ ಮಾಡಿಕೊಳ್ಳುತ್ತಾರೆ ಸಾಯುವ ವ್ಯಕ್ತಿಯನ್ನು ಅಲ್ಲಿ ತಾನು ಕೂಡಿಟ್ಟ ಹಣ ಬಂಗಾರ ಹುಗಿದಿದ್ದಾನೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವಿಕವಾಗಿ ಅಲ್ಲಿ ದನಾ ಕಸಬರಿಗೆಯನ್ನು ತಿನ್ನುತ್ತಿರುತ್ತದೆ ಅದನ್ನು ತೋರಿಸಿ ಆತ ಸತ್ತು ಹೋಗುತ್ತಾನೆ.*
ಸಂಸಾರವೆಂಬ ಹೆಣ ಬಿದ್ದಿರೆ ತಿನಬಂದ ನಾಯ ಜಗಳವ ನೋಡಿರೇ! ನಾಯ ಜಗಳವ ನೋಡಿ ಹೆಣನೆದ್ದು ನಗುತಿದ.ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ
ಇಂದು ಸಮಾಜದ ಗಣ್ಯಾತಿಗಣ್ಯ ರಾಜಕಾರಣಿಗಳ, ಶ್ರೀಮಂತರ, ಮಠಾಧೀಶರ, ಶಿಕ್ಷಕರು ಹಾಕಿಕೊಂಡಿರುವ ಮುಖವಾಡಗಳು ಹಲವಾರು ರೀತಿಯ ವೇಷಗಳು ಕಳಚಿ ಬೀಳುತ್ತಿವೆ.
ವೇಷ–ಹಸಿವು-ಚೋಟು ಹೊಟ್ಟೆಗಾಗಿ ಗೇನು ಬಟ್ಟೆಗಾಗಿ
ಬಡವರು ಸಾಮಾನ್ಯರು ಕಡುಬಡವರು ಏನಾದರೂ ಒಂದು ಅಪರಾಧಗಳನ್ನು ಮಾಡಿ ತಮ್ಮ ವೇಷವನ್ನು ಬದಲಿಸಿಕೊಂಡು ಬದುಕುತ್ತಿದ್ದಾರೆ. ಅವರು ಬೇಗನೆ ಸಮಾಜದಲ್ಲಿ ಕೆಟ್ಟವರಾಗಿ ಕಾಣಿಸಿಕೊಳ್ಳುತ್ತಾರೆ. ಬಹು ಬೇಗನೆ ಶಿಕ್ಷೆಯನ್ನು ಅನುಭವಿಸುತ್ತಾರೆ. ಆದರೆ ಪ್ರಭಾವಿಗಳು ಅತ್ಯಂತ ಭೀಕರ ಭಯಂಕರ ಕುಕೃತ್ಯವನ್ನು ಮಾಡಿದರು ಸಮಾಜ ಅವರನ್ನು ದ್ವೇಷಿಸುಕ್ಕಿಂತಲೂ ಪ್ರೀತಿಸುವವರು ಹೆಚ್ಚಾಗಿ ಕಾಣುತ್ತಾರೆ.
ಗುಣದೋಷ ಸಂಪಾದನೆಯ ಮಾಡುವನ್ನಕರ ಕಾಮದ ಒಡಲು, ಕ್ರೋಧದ ಗೊತ್ತು, ಲೋಭದ ಇಕ್ಕೆ, ಮೋಹದ ಮಂದಿರ, ಮದದಾವರಣ, ಮಸ್ಸರದ ಹೊದಿಕೆ. ಆ ಭವವರತಲ್ಲದೆ ಚೆನ್ನಮಲ್ಲಿಕಾರ್ಜುನಯ್ಯನನರಿವುದಕೆ ಇಂಬಿಲ್ಲ ಕಾಣಿರಯ್ಯಾ
ಹಸಿವು ಕೃಷಿಯ ವ್ಯಸನಕ್ಕೆ ಕುದಿ ಕುದಿದು, ಚರಾಚರದೊಳಗೆ ಲಯವಾಗಿ ಹೋದರಲ್ಲ! ಕೋಟಿ ವೇಷಧಾರಿಗಳೆಲ್ಲ ಜಂಗಮವಪ್ಪರೆ?ಅಲ್ಲ ಲಿಂಗ ಸ್ಥವನರಿಯರು ಜಂಗಮಸ್ಥಲವನರಿಯರು ಇಂತೀ ತ್ರಿವಿಧಸ್ಥಲವನರಿಯದ ಕಾರಣ ಅವರ ಗಾವಿಲರ ಮಕ್ಕಳೆಂಬೆ ಕಲಿದೇವಾ
ತಿಳಿಯದೇ ಮಾಡುವ ತಪ್ಪನ್ನು ಸುಧಾರಿಸಿಕೊಳ್ಳಬಹುದು. ಆದರೆ ತಿಳಿದು ತಿಳಿದು ತಪ್ಪು ಮಾಡುವವರು ಈ ಜಗದಲ್ಲಿ ಅವರೇ ಹೆಚ್ಚಾಗಿದ್ದಾರೆ.ಆದರೆ ಆತ್ಮ ಪ್ರಜ್ಞೆ ಅವರನ್ನು ಕಾಡದೇ ಬಿಡದು.
ಹಸಿವಿನಾಸೆಗೆ ಅಶನವ ಕೊಂಬರು. ವಿಷಯದಾಸೆಗೆ ಹುಸಿಯ ನುಡಿಯುವರು. ಹಸನಾಗಿ ವ್ಯಸನವ ಹೊತ್ತು, ಭಸಿತ ವಹಿಸಿ ವಿಶ್ವ ತಿರುಗಿದರು. ಹುಸಿಯ ಬಿಟ್ಟು ಮಾಯೆಯ ಮಸಕವ ಮಾಣ್ದಲ್ಲದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣನ ಕೂಡಾ
ಇಂದು ಸಮಾಜ ಹೇಗಿದೆಯೆಂದರೆ ಸತ್ಯ ನಡೆಯುವುದಕ್ಕಿಂತ ನಿತ್ಯ ನಡೆಯುವ ಹೆಚ್ಚಾಗಿದ್ದಾರೆ ತಂದೆ-ತಾಯಿಗಳ ಔಷಧಿಗಳಿಗಾಗಿ ತಂದೆತಾಯಿಗಳ ಶವಸಂಸ್ಕಾರಕ್ಕಾಗಿ ಹಣಬೇಕೆಂದು, ಹೇಳುವವರು ಇದ್ದಾರೆ ಸಭೆ-ಸಮಾರಂಭಗಳಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುತ್ತ ತಮ್ಮ ಹೆತ್ತ ತಂದೆ ತಾಯಿಗಳನ್ನು ಅತ್ಯಂತ ಕನಿಷ್ಠವಾಗಿ ನೋಡುವವರಿದ್ದಾರೆ.
ವೇಷವೇನು ವೇಶಿಯನು ಸರಿಯೆಂಬೆ, ವೇಷವು ಲೋಕವ ಹಾರುವದು, ವೇಶಿಯೂ ಲೋಕವ ಹಾರುವಳು. ವೇಷ ಹೊತ್ತು ಲೋಕವ ಹಾರದಿದ್ದರೆ, ಆತನು ಈಶ್ವರನೆಂಬೆ ರಾಮನಾಥ*
ಹಸಿವು, ದಾರಿದ್ರ್ಯ ,ರೋಗ ಕಾಯಿಲೆಗಳಿಂದ ಬಳಲುತ್ತಿರುವ ಕಡು ಕುಟುಂಬಗಳಿಗೆ ವೇಶ್ಯಾವಾಟಿಕೆ ಅನಿವಾರ್ಯವಾಗುತ್ತದೆಯೇನೋ?
ಇಂದು ಸ್ಟಾರ್ ನಟ ನಟಿಯರು ಧಿಡೀರನೆ ಕೋಟ್ಯಾಧೀಶರ ಆಗಬೇಕೆಂದೂ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ ಅವರು ಸಮಾಜದಲ್ಲಿ ಒಳ್ಳೆಯವರಾಗಿಯೇ ಕಾಣಿಸಿಕೊಳ್ಳುತ್ತಾರೆ.
*ಸತ್ತು ಮುಂದೆ ದೇವರ ಕೂಡಿಹೆವೆಂಬವೆಂಬಿರಿ ಸಾಯುವ ಮುನ್ನ ಸತ್ತಿದ್ದರೆ ಎಂತಯ್ಯ ? ನಿಮ್ಮ ಲಿಂಗೈಕ್ಯದ ಪರಿಯೆಂತಯ್ಯ? ನಿಮ್ಮ ಪ್ರಮಥರ ಪರಿ ಅಂಗದ ಅವಸ್ಥೆಯಲ್ಲದೆ ಲಿಂಗಾವಸ್ಥೆ ಆರಿಗೂ ಇಲ್ಲಾ ಗುಹೇಶ್ವರ*
ಹಸಿವಿಗಾಗಿ ವೇಷ ಹೊತ್ತವರನ್ನು ಕ್ಷಮಿಸಬಹುದು. ಆದರೆ ಪ್ರತಿಷ್ಠೆಗಾಗಿ,ಮತ್ತು ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು ಮಾಡುವ ಕುಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಆದರೂ *”ಜನಮರುಳೋ ಜಾತ್ರೆ ಮರುಳೋ”* ಎಂಬುವಂತೆ ಇಡೀ ವಿಶ್ವವೇ ಕಣ್ಣಾರೆ ಕಂಡೆ ದೃಶ್ಯಗಳನ್ನು ಅಲ್ಲಗಳಿಯುವ ಪ್ರಚಂಡರು, ಬಂಗಾರದ ಕಿರೀಟ, ಬಂಗಾರದ ಆಸನ ಬಂಗಾರದ ಪಲ್ಲಂಗದಲ್ಲಿ ಹೊರಳಾಡುವ, ಆಡಂಬರದ ಜೀವನ ಸಾಗಿಸುವವರು ವೇಶ್ಯೆಗಿಂತ ಕೀಳು.
ರವೀಂದ್ರ ರುದ್ರಪ್ಪ ಪಟ್ಟಣ
ಮುಳಗುಂದ —ರಾಮದುರ್ಗ
9481931842*