ನನ್ನೊಲವ ಇನಿಯ

ನನ್ನೊಲವ ಇನಿಯ

ಮನವು ನಿನ್ನನೆ ಬಯಸುತಿದೆ
ಹೆಜ್ಜೆಗಳು ತನಗರಿಯದೆ
ನಿನ್ನತ್ತ ಬಳಿಸಾರುತಿವೆ ||

ವಿವೇಚನೆಗೇನು ತೋಚುತ್ತಿಲ್ಲ
ಅನಿರ್ವಚನೀಯ ಅನುಭವ
ನಿನ್ನ ಮಧುರ ನೆನೆಪು ||

ಮರೆವು ಹತ್ತಿರ ಸುಳಿಯುತ್ತಿಲ್ಲ
ನಿನ್ನ ಮರೆಯಬೇಕೆಂದರೆ
ಕರೆಯಬೇಕೆಂದರೆ ಬೇರೊಂದು
ಹೆಸರು ನೆನಪಾಗುತ್ತಿಲ್ಲ
ನಿನ್ನ ಹೆಸರೆ ಮನದಾಳದಿ
ಅಚ್ಚೊತ್ತಿದೆ ನಿಚ್ಚಳದಿ ||

ನಾಲಿಗೆ ನಿನ್ನ ನಾಮವನೆ
ಉಲಿಯುತಿದೆ ಎನ ಕಲಿಸಿದೆ ಅದಕೆ
ನಿನಗೆ ಮರುಳಾಗಿ ಮೈಮರೆತಿದೆ
ಮನವು ಮಾತು ಕೇಳದೆ
ಮಂಗನಾಟವಾಡುತಿದೆ ||

ಬಣ್ಣ ಬಣ್ಣದ ಕನಸು ಕಾಣುತ
ಒಕುಳಿಯನಾಡಬಯಸಿದೆ
ಕಣ್ಣ ತುಂಬ ನಿನೇ ತುಂಬಿ
ಕುಣಿದಾಡಬಯಸಿದೆ
ಎನು ಮೋಡಿಮಾಡಿದೆ ನನಗೆ ||

ಸವಿತಾ ಮಾಟೂರು, ಇಲಕಲ್

Don`t copy text!