ಪುಸ್ತಕ ಪರಿಚಯ
ನೋವೂ ಒಂದು ಹೃದ್ಯ ಕಾವ್ಯ- ಹನಿಗವನಗಳ
ಸಂಕಲನ
ಲೇಖಕಿ..ರಂಗಮ್ಮ ಹೊದೇಕಲ್,
ಅಂಚೆ… ಬ್ಯಾತ ೫೭೨೧೪೦
ಜಿಲ್ಲಾ..ತುಮಕೂರು
ಮೊ.೯೬೩೨೭೬೫೪೯೧
ರಾಷ್ಟ್ರಕವಿ ಜಿ ಎಸ್ ಎಸ್ ಅವರು “ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ” ಎಂದು ಹೇಳಿದರು.ನಾನು ರಂಗಮ್ಮ ನವರ *ನೋವೂ ಒಂದು ಹೃದ್ಯ ಕಾವ್ಯ * ಸಂಕಲನದ ಹನಿ ಗವನ ಗಳನ್ನು ಓದುತ್ತಾ ಹೋದಾಗ ನನಗೆ ಅನಿಸಿದ್ದು “ನೋವಿ ನಿಂದಲೇ ಕಾವ್ಯ ಹುಟ್ಟಿದೆಂದು ಅನಿಸಿತು.” ಚಿಕ್ಕ ಹನಿಗವನದಲ್ಲಿ ಹಿರಿದಾದ ವಿಚಾರ ಮನಕೆ ತಾಕುವಂತೆ ಹೃದಯ ತಟ್ಟುಹಚ್ಚುವಾವ ತುಂಬಿದ್ದಾರೆ.
ರಂಗಮ್ಮ ಹೊದೇಕಲ್ ಅವರು ವೃತ್ತಿಯಿಂದ ಶಿಕ್ಷಕಿಯಾಗಿ ಕಾರ್ಯ ನಿವ೯ಹಿಸುತ್ತಿದ್ದರೂ ಸಾಹಿತಿಯಾಗಿ ,ಕವಯತ್ರಿಯಾಗಿ, ಸಮಾಜಸೇವಕಿ, ಯಾಗಿ ಸಮಾಜದಲ್ಲಿಯ ನೋವುಗಳನ್ನು ದಾಟುತ್ತಾ ಪ್ರೀತಿ ಹಂಚುತ್ತಾ ಬೆರಗು ಮೂಡಿಸುತ್ತಾ ನಡೆದವರು.”ನೋವೂ ಒಂದು ಹೃದ್ಯ ಕಾವ್ಯ”ಸಂಕಲನವನ್ನು ಓದುತ್ತಾ ಹೋದಂತೆ ಪ್ರತಿ ಹನಿಗವನವು ಹೃದಯ ತಟ್ಟುತ್ತದೆ.ಜೀವನದಲ್ಲಿ ಎದುರಾದಗುವ ನೋವುಗಳುನು ಸ್ವೀಕರಿಸಿದ ಹೃದಯ ಜೀವಪರ ಕಾವ್ಯ ಬರೆಸಿದೆ.ನೋವುಗಳಲ್ಲಿಯೇ ವಿಭಿನ್ನವಾದ ನೋವುಗಳಿವೆ ಎಲ್ಲವನ್ನು ಮೆಟ್ಟಿ ನಿಂತು ಕಾವ್ಯ ರಚಿಸುವ ಹೃದಯ ಒಂದು ರಂಗಮ್ಮನವರ ಬಳಿಯ ಲ್ಲಿದೆ,ಹೊಸಲೋಕವನ್ನು ತೋರಿಸುತ್ತದೆ .ನೋವು ನುಂಗಿ ನಗುತ ತಾಯಿ ಪ್ರೀತಿ,ಜೀವ ಪ್ರೀತಿ,ಅಂತಃ ಕರಣ ಹೃದ್ಯ ಕಾವ್ಯ ದಲ್ಲಿ ಜೇನಾಗಿ ಜಿನುಗುತಿದೆ .ನೋವು ಎಂಬುದು ಅಳುವಿನ ಕ್ರಿಯೆ ಅಲ್ಲ,ಜೀವನ ಪ್ರೀತಿಯನು ಹೆಚ್ಚಿಸುವ ಕ್ರಿಯೆ ಎಂದು ತಮ್ಮ ಹೃದ್ಯ ಕಾವ್ಯ ದಲ್ಲಿ ರಂಗಮ್ಮ ಅವರು ತೋರಿಸಿ ಕೊಟ್ಟಿದ್ದಾರೆ.
*ನನಗೆ ಮೆಚ್ಚಿಗೆ ಆದ ಕೆಲವು ಹನಿಗವನಗಳು*
“ಒಂದು ನೋವಿತ್ತು
ನೇವರಿಸಿದೆ
ಕವಿತೆಯಾಯಿತು!”
“ಹೂ ವರಳುವ
ಸದ್ದಾಲಿಸುವ
ಜಗಕೆ
ಎದೆ ಬಿರಿದ ಸದ್ದು
ಕೇಳುವುದಿಲ್ಲ!”
ಹೃದಯದ ಭಾಷೆ
ಬಲ್ಲವನಿಗೆ
ಹೂವಿನ ಭಾಷೆ
ವಿವರಿಸ ಬೇಕಾಗಿಲ್ಲ!”
“ಏನನ್ನೂ ಕೂಡಿಡದ
ಅಪ್ಪ
ಅಕ್ಷರ ಕಲಿಸಿ
ಅಕ್ಷಯವಾಗೆಂದ!”
“ಯಾವ ಹೂವೂ
ಮೆಚ್ಚುಗೆ ಗೆಂದೇ ಅರಳುವುದಿಲ್ಲ!
ಯಾವ ನೋವೂ
ಕರುಣೆಗಾಗಿ ಕವಿತೆಯಾಗುವುದಿಲ್ಲ!”
“ಮೌನದ ಬಯಲನು
ಹಾದು ಬರುವುದೆಂದರೆ
ಹೂ ಗಂಧವನ್ನು
ಎದೆಗೆ ತುಂಬಿಕೊಂಡಹಾಗೆ!”
“ದ್ರೋಹಿಗಳ ನೆನೆದು
ಮರುಗುವಾಗ
ಕಣ್ಣೆದುರಿನ ಹಣತೆ
ಪಾಠ ಹೇಳುತ್ತದೆ!”
“ನಾವು ಮಸೆಯುವುದಿಲ್ಲ
ನೀವು ಹಿಂಡಿದರೂ
ಹಿಡಿಶಾಪ ಹಾಕುವುದಿಲ್ಲ!
ತುಳಿದ ಕಾಲಿನ ಕೆಳಗೆ
ನಮಗೆ ಮರುಹುಟ್ಟು!”
“ಒಳಗೆ
ಎಂದೂ ಆರದ ಬೆಳಕಿದೆ
ಜೀಯ …
ಗೋಡೆ ಕಟ್ಟಿ ಬಂಧಿಸುತ್ತಿದ್ದಾರೆ!”
“ನೋವೂ
ಹೂವಾಗಲಿ
ತೊಟ್ಟು ಕಳಚಿ
ಬೀಳುತ್ತದಲ್ಲ!”
“ಗಾಯಗಳನ್ನು
ತೋರಬಾರದು
ಉಪ್ಪು ಸವರುವ
ಲೋಕವಿದು!”
ಹೀಗೆ ಅನೇಕ ಹನಿಗವನಗಳು ಮನ ತಟ್ಟುವ ಕಾಡುವ ಚಿಂತನೆಗೆ ಹಚ್ಚುವ ಇನ್ನೂ ಅನೇಕ ಹನಿಗವನಗಳು ಇವೆ.ಈ ಸಂಕಲನದಲ್ಲಿ ಸುಮಾರು
೨೦೦ ಹನಿಗವನಗಳು ಇವೆ.
“ನೋವೂ ಒಂದು ಹೃದ್ಯ ಕಾವ್ಯ” ಇಡೀ ಸಂಕಲನದ ಇನ್ನೊಂದು ವಿಶೇಷ ವೆಂದರೆ ಈ ಸಂಕಲವು ರಂಗಮ್ಮ ಅವರ ಕೈ ಬರಹದಲ್ಲಿ(ಹಸ್ತ ಪ್ರತಿ) ಅಚ್ಚಿನ ರೂಪ ತಾಳಿ ಪ್ರಕಟವಾಗಿದ್ದು ಒಂದು ಸೋಜಿಕ ಸಂಗತಿ.
ರಂಗಮ್ಮ ಹೊದೇಕಲ್ ಅವರ ಸಾಹಿತ್ಯ ಸೇವೆ ಹೀಗೆ ನಿರಂತ ಸಾಗಲೆಂದು ಹಾರೈಸುತ್ತಾ ನನ್ನ ಮಾತಿಗೆ ವಿರಾಮ ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ