e-ಸುದ್ದಿ, ಮಸ್ಕಿ
ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದ ನಾನು ನನ್ನ ಹೃದಯದ ಮಾತು ಕೇಳಿ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದೇನೆ ಆಗಲಿ ಯಾವುದೆ ಹಣ ಅಧಿಕಾರದ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಭಾವೋದ್ವೇಗದಿಂದ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಹತ್ತಿರದ ಬಯಲು ಜಾಗದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮಿಶ್ರ ಸರ್ಕಾರ ಅಭಿವೃದ್ದಿಯನ್ನು ಕಡೆಗಣಿಸಿದ ಪರಿಣಾಮ ನಾನು ನನ್ನ ಮಾತೃಪಕ್ಷವಾದ ಬಿಜೆಪಿ ಸೇರಿ ರೈತರ ಕಣ್ಮಣಿ, ಹೋರಾಟಗಾರ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳಿಸಿದ ಧಿಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಬೇಕು ಎಂಬ ಆಸೆಯಿಂದ ಮತ್ತು ಮಸ್ಕಿ ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗಾಗಿ ಕಾಂಗ್ರಸ್ ತೊರೆದು ಬಿಜೆಪಿ ಸೇರಿರುವುದಾಗಿ ತಮ್ಮನ್ನು ಟೀಕಿಸುವವರಿಗೆ ಪ್ರತಾಪಗೌಡ ಪಾಟೀಲ ಬಹಿರಂಗ ಸಭೆಯಲ್ಲಿ ಉತ್ತರಿಸಿದರು.
ರಾಜ್ಯದಲ್ಲಿ ರೈತರ ಸಂಕಷ್ಟ ನಿವಾರಣೆ ಆಗಬೇಕು, ಮಸ್ಕಿ ಕ್ಷೇತ್ರ ಸಂಪೂರ್ಣವಾಗಿ ನೀರಾವರಿ ಮಾಡುವ ಪಣ ತೊಟ್ಟಿದ್ದೇನೆ. 5ಎ ಕಲುವೆ ಹೊರಾಟಗಾರರನ್ನು ಮುಖ್ಯಮಂತ್ರಿಗಳಾದಿಯಾಗಿ ಎಲ್ಲರನ್ನು ಭೇಟಿ ಮಾಡಿಸಿ ಯೋಜನೆಯ ಸಾಧಕ ಬಾಧಕ ಮನವರಿಕೆ ಮಾಡಿದರು ಕಾಂಗ್ರೆಸ್‍ನವರ ಕುಮಕ್ಕಿನಿಂದ ಪ್ರತಿಭಟನೆ ನಿರಂತರವಾಗಿ ಮಾಡುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರತಾಪಗೌಡ ಪಾಟೀಲ ಕಾಂಗ್ರೇಸ್ ನಾಯಕರಿಗೆ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಸ್ಕಿ ಕ್ಷೇತ್ರಕ್ಕೆ ನಂದವಾಡಗಿ ಏತ ನೀರಾವರಿ ಯೋಜನೆಗಾಗಿ 1800 ಕೋಟಿ ಮಂಜೂರು ಮಾಡಿದ್ದಾರೆ. ಕೆರೆ ತುಂಬುವ ಯೋಜನೆಗೆ 480 ಕೋಟಿ ರೂ, ಮಸ್ಕಿ ನಾಲ ಯೋಜನೆಯ ಕಾಲುವೆ ಆಧುನಿಕರಣಕ್ಕೆ 52 ಕೋಟಿ ರೂ, ರಸ್ತೆ ಸುಧಾರಣೆಗೆ 125 ಕೋಟಿ ರೂ ಮಸ್ಕಿ ಕ್ಷೇತ್ರದಲ್ಲಿ ಬಡವರಿಗಾಗಿ 7500 ಮನೆಗಳ ಮಂಜೂರಾತಿ ನೀಡಲಾಗಿದ್ದು ಅಭಿವೃದ್ದಿಯ ಪರ್ವ ಆರಂಭವಾಗಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ನನ್ನ ಗುಣ ನನ್ನ ವ್ಯಕ್ತಿತ್ವ ನೋಡಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ದ್ರೋಹಿ ಬಸನಗೌಡಃ ಬಸನಗೌಡ ತುರ್ವಿಹಾಳ ಈ ಹಿಂದೆ ಜಿ.ಪಂ.,ಸದಸ್ಯರಾಗಿದ್ದಾಗ ಪಕ್ಷದ ಅಭ್ಯಾರ್ಥಿಗೆ ಮತ ಹಾಕದೆ ಹಣ ಪಡೆದು ಹಿಂಬಾಗಿಲಿನಿಂದ ಬೇರೆಯವರಿಗೆ ಮತ ಹಾಕಿದ್ದು ಜನ ಮರಿತಿಲ್ಲ ಎಂದು ಪ್ರತಾಪಗೌಡ ಪಾಟೀಲ ಟೀಕಿಸಿದರು. ಮಸ್ಕಿ ಕ್ಷೇತ್ರದ ಮತದಾರರು ಬಿಜೆಪಿ ಪಕ್ಷಕ್ಕಾಗಿ ಮತ ನೀಡಿದ್ದಾರಗಲಿ ಬಸನಗೌಡರಿಗಾಗಿ ಅಲ್ಲ ಎಂದು ಪ್ರತಾಪಗೌಡ ಪಾಟೀಲ ಹೇಳಿದರು.