ಮಸ್ಕಿ ಉಪಚುನಾವಣೆ, ರಣ ಕಹಳೆ ಊದಿದ ಬಿಜೆಪಿ


e-ಸುದ್ದಿ, ಮಸ್ಕಿ
ಮಸ್ಕಿ ಉಪಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಬಿಜೆಪಿ ಶನಿವಾರ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ತೊರಿಸಿತು.
ಬಸವೇಶ್ವರ ನಗರದ ಬಸವೇಶ್ವರ ವೃತ್ತದಿಂದ ತೆರದ ವವಾಹನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ ಕುಮಾರ ಕಟೀಲ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಪ ಮುಖ್ಯಮಂತ್ರಿಗಳಾದ ಗೊವಿಂದ ಕಾರೋಜಳ, ಲಕ್ಷ್ಮಣ ಸವದಿ, ಸಚಿವರಾದ ಬಿ.ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ ಸಂಸದ ಕರಡಿ ಸಂಗಣ್ಣ, ಅಮರೇಶ್ವರ ನಯಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಪಕ್ಷದ ಮುಖಂಡರನ್ನು ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆ ತರಲಾಯಿತು.
ಕಹಳೆ, ಕಣಿ ಹಲಗೆ, ಡೊಳ್ಳು ಕುಣಿತ, ಸಿಂಗಾರ ಮೇಳ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ನೂರಾರು ಮಹಿಳೆಯರು ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯ ಘಟಕ ಅಧ್ಯಕ್ಷರಿಗೆ ಪೂರ್ಣಕುಂಭ ಸ್ವಾಗತ ನೀಡಿದರು.
ಬಿಜೆಪಿಯ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ದಾರಿಯುದ್ದಕ್ಕೂ ಮುಖಂಡರುಗಳಿಗೆ ಹೂವಿನ ಮಳೆ ಸುರಿಸಲಾಯಿತು.
ಯುವಕರ ಐಕಾನ್ ವಿಜೆಯೇಂದ್ರ ಃ ಮೆರವಣಿಗೆ ಯುದ್ದಕ್ಕೂ ಯುವಕರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಸ್ಕಿ ಕ್ಷೇತ್ರದ ಉಸ್ತುವಾರಿ ನಾಯಕ ವಿಜಯೇಂದ್ರ ಯುವಕರ ಐಕಾನ್ ಆಗಿದ್ದರು. ಮೆರವಣಿಗೆ ಉದ್ದಕ್ಕೂ ಯುವಕರು ವಿಜಯೇಂದ್ರನಿಗೆ ಜೈಕಾರ ಹಾಕುವ ದೃಶ್ಯ ಸಾಮಾನ್ಯವಾಗಿತ್ತು. ಇದೇ ಮೊದಲ ಬಾರಿಗೆ ಮಸ್ಕಿಗೆ ಆಗಮಿಸಿದ ವಿಜಯೇಂದ್ರ ಯುವಕರ ಮನಗೆದ್ದು ತನ್ನ ಚಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವದು ಕಂಡು ಬಂದಿತು.
——————————-

ಕಳ್ಳರ ಕೈ ಚಳಕ ಹಣ ಮೊಬೈಲ್ ಕಳವು
ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಸುಮಾರು 20ಕ್ಕೂ ಅಧಿಕ ಜನರ ಪರ್ಸ ಮತ್ತು ಮೊಬೈಲ್ ಕಳುವಾದ ಘಟನೆ ನಡೆದಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟದ ಸಚಿವರು ಆಗಮಿಸಿದ್ದ ಸಭೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಣೆಯಲ್ಲಿ ಮಗ್ನರಾಗಿದ್ದರೆ ಕಳ್ಳರು ತಮ್ಮ ಕೈ ಚಳಕ ತೊರಿಸಿ ಲಕ್ಷಾಂತರ ಬೆಲೆ ಬಾಳುವ ಮೋಬೈಲ ಹಾಗೂ ಸಾವಿರಾರು ರೂಪಾಯಿಗಳು ಇದ್ದ ಪರ್ಸಗಳನ್ನು ಕಳ್ಳರು ಪಾಟಯಿಸಿದ್ದಾರೆ.

 

Don`t copy text!