e-ಸುದ್ದಿ, ಮಸ್ಕಿ
ಹುಟ್ಟು ಹಬ್ಬದ ಹೆಸರಿನಲ್ಲಿ ಹಲವರು ದುಂದುವೆಚ್ಚ ಮಾಡಿ ಆಡಂಬರ ಆಚರಣೆ ಮಾಡಿಕೊಳ್ಳುವದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಶಿಕ್ಷಕರು ತಮ್ಮ ಮಗಳ ಹುಟ್ಟು ಹಬ್ಬದ ಸವಿ ನೆನಪಿಗೆ ಸರ್ಕಾರಿ ಶಾಲೆಗೆ ಹಣ ದೇಣಿಗೆ ನೀಡುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.
ತಾಲೂಕಿನ ದಿಗ್ಗನಾಯಕನಬಾವಿ ಶಾಲೆಗೆ ಶಿಕ್ಷಕ ಸುರೇಶ ಇತ್ತೀಚಿಗೆ ತಮ್ಮ ಮಗಳು ಸಾನಿ ಹುಟ್ಟು ಹಬ್ಬದ ನೆನಪಿಗೆ 7 ಸಾವಿರ ರೂ.ದೇಣಿಗೆ ನೀಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮಸ್ಕಿ ತಾಲೂಕಿನ ಗೊಲ್ಲರಹಟ್ಟಿ ತಾಂಡದ ಶಿಕ್ಷಕರಾದ ಇವರು ತಮ್ಮ ಪತ್ನಿ ಹಾಗೂ ಮಗಳೊಂದಿಗೆ ದಿಗ್ಗನಾಯಕನಬಾಯಿ ಶಾಲೆಗೆ ಆಗಮಿಸಿ ದೇಣಿಗೆ ನೀಡಿದರು.
ನಂತರ ಮಾತನಾಡಿದ ಶಿಕ್ಷಕ ಸುರೇಶ ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಆದರೆ ದಿಗ್ಗನಾಯಕಬಾವಿ ಶಾಲೆಯ ಮುಖ್ಯೋಪಾಧ್ಯಯರ ಪ್ರಯತ್ನದಿಂದ ಶಾಲೆಗೆ ಅಲಂಕಾರಿವಾಗಿ ಬಣ್ಣ ಬಳಿದು ಶಾಲೆಯ ಅಂದ ಚಂದವಾಗಿಸಿದ್ದಾರೆ ಎಂದು ಖುಷಿ ಪಟ್ಟರು.
ಸುರೇಶ ಅವರು ತಮ್ಮ ಮಗಳ ಹುಟ್ಟು ಹಬ್ಬಕ್ಕೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕಾಶಿಂಸಾಬ ಹಾಗೂ ಮುಖ್ಯಗುರು ವರದೇಂದ್ರ ಅವರಿಗೆ ಚೆಕ್ ನೀಡಿದರು.
ಮುಖ್ಯಗುರು ವರದೇಂದ್ರ ಮಾತನಾಡಿ ಮಕ್ಕಳ ಮನಸ್ಸನ್ನು ಅರಳಿಸುವದು ಶಿಕ್ಷಕರ ಕೆಲಸ ಅದನ್ನು ಮಾಡಿದ ಪ್ರತಿಫಲವಾಗಿ ನಮ್ಮ ಸರ್ಕಾರಿ ಶಾಲೆಗೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬಂದು ದೇಣಿಗೆ ನಿಡುತ್ತಿದ್ದಾರೆ. ಎಂದರು. ಶಿಕ್ಷಕರು ಹಾಜರಿದ್ದರು.