ನೀರು ಸಂರಕ್ಷಣೆ ನಮ್ಮೆಲ್ಲರ ಹೊಣೆ

ನೀರು ಸಂರಕ್ಷಣೆ, ನಮ್ಮಎಲ್ಲರ ಹೊಣೆ

ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅರಿವು ಮೂಡಿಸಲು ಶತಪ್ರಯತ್ನ ನಡೆಯುತ್ತಲೇ ಇದೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆಯಲಾಗಿದೆ
ಆದರೆ ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವ ಪ್ರಯತ್ನ ಇನ್ನೂ ನಿರೀಕ್ಷಿತ ಫ‌ಲ ಕಂಡಿಲ್ಲ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಜೀವಜಲ ಎಂದೇ ಭಾವಿಸಲಾಗಿದೆ. ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ. ಕಳೆದ 300 ವರ್ಷಗಳಲ್ಲಿ ನೀರಿನ ಬಳಕೆಯ ಪ್ರಮಾಣ ಶೇ.35ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಸುಮಾರು 650 ಕ್ಯುಬಿಕ್‌ ಕಿ.ಮೀ. ನೀರಿನ ಆವಶ್ಯಕತೆಯಿದ್ದು ಇದರ ಶೇ.60 ಭಾಗ ಕೃಷಿಗೆ, ಶೇ.30 ಕೈಗಾರಿಕೆಗಳ ನಿರ್ವಹಣೆಗೆ ಹಾಗೂ ಶೇ.10 ಇತರ ಉಪಯೋಗಕ್ಕೆ ಲಭ್ಯವಾಗುತ್ತಿದೆ. ಭೂಮಿಯ ಮೇಲೆ ಲಭ್ಯವಿರುವ ಶೇ.99 ನೀರು ಮಾನವನ ನೇರ ಬಳಕೆಗೆ ಸಾಧ್ಯವಿಲ್ಲದ್ದು. ಶೇ.1ರಷ್ಟು ನೀರು ಮಾತ್ರ ಮಾನವನ ಉಪಯೋಗಕ್ಕೆ ದಕ್ಕಬಹುದಾದದ್ದು ಎಂಬ ವಾಸ್ತವ ಆಧುನಿಕ ವಿಜ್ಞಾನದ ಉದಯದ ದಿನಗಳಿಂದ ಮನುಷ್ಯನ ಅರಿವಿಗೆ ಬಂದಿದ್ದರೂ ಮಾನವ ಆ ಜೀವಜಲದ ಸಂರಕ್ಷಣೆಗೆ, ಅದರ ಸದುಪಯೋಗಕ್ಕೆ ಮತ್ತು ಅದನ್ನು ಮುಂದಿನ ಪೀಳಿಗೆಗೆ ಕಾಪಾಡಿಕೊಳ್ಳುವಲ್ಲಿ ಮಾತ್ರ ಬದ್ಧತೆ ಮೆರೆದಿಲ್ಲ ಎಂಬುದೇ ತೀವ್ರ ವಿಷಾದದ ಸಂಗತಿ.

ಜೀವದ್ರವವೆನಿಸಿದ ನೀರನ್ನು ಮನುಷ್ಯ ಪ್ರಜ್ಞಾಪೂರ್ವಧಿಕಧಿವಾಗಿಯೇ ಕಲುಷಿತಗೊಳಿಸುತ್ತಿರುವುದಲ್ಲದೆ ಅದರ ಬಳಕೆ ಹಾಗೂ ಸಂರಕ್ಷಣೆಯಲ್ಲಿ ಸೂಕ್ತ ವಿವೇಚನೆ ಇಲ್ಲದೆ ಭವಿಷ್ಯದ ನಾಗಧಿರಿಧಿಕತೆಯನ್ನೂ ತಲ್ಲಣ, ಆತಂಕಗಳ ವಿಷವ್ಯೂಹಕ್ಕೆ ಸಿಲುಕಿಸುತ್ತಿದ್ದಾನೆ. ಜೀವನಾಧಾರವಾದ ನೀರು ಕಲುಷಿತಗೊಳ್ಳಲು, ಅನುಧಿಪಯುಕ್ತಧಿವಾಗಲು ಅಥವಾ ವ್ಯರ್ಥವಾಗಲು ಈ ಅಂಶಗಳು ಕಾರಣಧಿವಾಗಿವೆ. ನಾಗರಿಕತೆ ಮತ್ತು ಕೈಗಾರಿಕೀಕರಣದ ಶಾಪಗಳೆನಿಸಿದ ಬೃಹತ್‌ ಕಾರ್ಖಾನೆಗಳ ತ್ಯಾಜ್ಯಗಳು ಅನಿರ್ಬಂಧಿತವಾಗಿ ನದಿ, ಜಲಾಶಯ, ಕೆರೆ ಮೊದಲಾದ ಉಪಯುಕ್ತ ನೀರಿನ ಮೂಲಧಿಗಳನ್ನು ಸೇರುತ್ತಿರುವುದು, ಅಂತರ್ಜಲದ ಅತಿ ಬಳಕೆ, ಕೃಷಿ ರಾಸಾಯನಿಕ ತ್ಯಾಜ್ಯಗಳು ಬಳಕೆಯ ನೀರನ್ನು ಸೇರುತ್ತಿರುವುದು, ನಗರಗಳ ಚರಂಡಿ ನೀರು ಹಾಗೂ ತ್ಯಾಜ್ಯ ವಸ್ತುಗಳು ಜಲಮೂಲ ಸೇರುತ್ತಿರುವುದು, ಕೈಗಾರಿಕೆಗಳಿಂದ ನದಿ ನೀರಿನ ಅನಿಯಂತ್ರಿತ  ಬಳಕೆ, ಅವೈಜ್ಞಾನಿಕ ಕೃಷಿ ಪದ್ಧತಿ, ಸಾಗರ ಸಮುದ್ರಗಳ ಮಾಲಿನ್ಯ- ಇವು ನೀರು ಮಲಿನಗೊಳ್ಳಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿರುವ ಕೆಲವು ಪ್ರಮುಖ ಕಾರಣಗಳು. ಇದಲ್ಲದೆ ಭೌಗೋಳಿಕ ಅಂಶಗಳು, ಜನಸಾಂದ್ರತೆ, ಒಂದು ದೇಶದ ಆರ್ಥಿಕ ಚಟುವಟಿಕೆಗಳು, ಆಧುನಿಕತೆಯ ದುಷ್ಪರಿಣಾಮಗಳು ಮತ್ತು ಅಲ್ಲಿನ ಆಂತರಿಕ ಸಂಘರ್ಷಗಳ ಆಧಾರದ ಮೇಲೆ ಪ್ರದೇಶದಿಂದ ಪ್ರದೇಶಕ್ಕೆ, ದೇಶದಿಂದ ದೇಶಕ್ಕೆ ಈ ಕಾರಣಗಳು ಬದಲಾಗುತ್ತಲೂ ಹೋಗಬಹುದು.
ಶತ ಪ್ರಯತ್ನ ನಡೆದರೂ ಮೂಡದ ಜಾಗೃತಿ
ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತಂತೆ ಸುಮಾರು 50 ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇವೆ. ವಿಶ್ವಸಂಸ್ಥೆ, ಯುನಿಸೆಫ್, ಅಂತಾರಾಷ್ಟ್ರೀಯ ಸಮುದಾಯಗಳು ನೀರಿನ ಮೇಲಾಗುತ್ತಿರುವ ಆಕ್ರಮಣ ಮತ್ತು ಮಾಲಿನ್ಯವನ್ನು ತಡೆಗಟ್ಟಲು ಶತಾಯಗತಾಯ ಪ್ರಯತ್ನ ನಡೆಸಿವೆ. ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅವರಲ್ಲಿ ಅರಿವು ಮೂಡಿಸಲು ಹಲವು ತುರ್ತು ಕ್ರಮಗಳನ್ನು ಕೈಗೊಂಡಿವೆ. ಈ ಉದ್ದೇಶಕ್ಕೆಂದೇ ಮಾರ್ಚ್‌ 22ನ್ನು ವಿಶ್ವ ಜಲ ದಿನ ಎಂದು ಕರೆದು ಜಾಗತಿಕ ಮಟ್ಟದಲ್ಲಿ ಜನರಲ್ಲಿ ನೀರಿನ ಮಹತ್ವದ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ಆದರೆ ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ನೀರಿನ ಸಮಾನ ಹಂಚಿಕೆ ಮೂಲಭೂತ ಹಕ್ಕಾಗಿ ಉಳಿದಿಲ್ಲ. ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವಲ್ಲಿ ಸರಕಾರಗಳು ಮತ್ತು ಸಾಮಾಜಿಕ ಸಂಸ್ಥೆಗಳು ವಿಫ‌ಲವಾಗಿವೆ

Don`t copy text!