e- ಸುದ್ದಿ ಮಸ್ಕಿ
ಮಸ್ಕಿ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚುನಾವಣೆ ಮುಗಿಯುವವರೆಗೂ ರೌಡಿ ಶೀಟರ್‍ಗಳನ್ನು ಗಡಿ ಪಾರು ಮಾಡಲಾಗುವದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಪಟ್ಟಣದ ದೇವನಾಂಪ್ರಿಯ ಸರ್ಕಾರಿ ಪದವಿ ಮಹಾವಿದ್ಯಾಲಕ್ಕೆ ಮಂಗಳವಾರ ಭೇಟಿ ನಿಡಿ ಮತಪೆಟ್ಟಿಗೆ ಭದ್ರತಾ ಕೊಠಡಿಯವನ್ನು ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮಸ್ಕಿ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಅಂದಾಜು 60-70 ಸೂಕ್ಷ್ಮ, ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. ಆ ಕೇಂದ್ರಗಳಲ್ಲಿ ಮತದಾರರು ನಿರ್ಭಿತಿಯಿಂದ ಮತಗಟ್ಟೆ ಬಂದು ಮತದಾನ ಮಾಡುವಂತೆ ಮಾಡಲು ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲಾಗುವದು ಎಂದರು.
ಚುನಾವಣೆಯಲ್ಲಿ ಗಲಾಟೆ ಗದ್ದಲ ಮಾಡುವ ವ್ಯಕ್ತಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು 107 ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗುವದು. ಹಾಗು ರೌಡಿ ಶೀಟರ್‍ಗಳನ್ನು ಗಡಿ ಪಾರು ಮಾಡಲು ಪೋಲಿಸರಿಗೆ ಸೂಚನೆ ನಿಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಮತದಾನ ಸಮಯವನ್ನು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಚುನಾವಣಾ ಆಯೋಗ ನಿಗದಿ ಮಾಡಿದೆ. ಕರೊನಾ ಸೋಕಿಂತರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಪೊಸ್ಟಲ್ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಈಗಾಗಲೇ ಅಂದಾಜು 2500 ಜನ ಗುರುತಿಸಲಾಗಿದೆ. ಅವರು ಅರ್ಜಿ ಸಲ್ಲಿಸಿ ಮತದಾನಕ್ಕೆ ಮುಂದಾಗಬೇಕು. ಚುನಾವಣ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಿ ಕರೊನಾ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಹೇಳಿದರು.
ಚುನಾವಣಾಧಿಕಾರಿ ಹಾಗೂ ಎಸಿ ರಾಜಶೇಖರ ಡಂಬಳ, ತಹಸೀಲ್ದಾರ ಮಹೇಂದ್ರ ಎ.ಎಚ್. ಡಿವೈಎಸ್‍ಪಿ ಕುಲಕರ್ಣಿ, ಸಿಪಿಐ ದೀಪಕ್ ಬೂಸರಡ್ಡಿ, ಶಿರಸ್ತೆದಾರ ಸೈಯದ್ ಅಕ್ತರ ಅಲಿ ಇದ್ದರು.