ಹೊಗರನಾಳ ಅರಣ್ಯ ಪ್ರದೇಶಕ್ಕೆ ಬೇಂಕಿ


e-ಸುದ್ದಿ ಮಸ್ಕಿ
ತಾಲೂಕಿನ ಹೊಗರನಾಳ ಗ್ರಾಮದ ಹೊರವಲದಲ್ಲಿರುವ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ಬಿದ್ದು ಭಾಗಷ್ಯಃ ಸುಟ್ಟು ಹೋದ ಘಟನೆ ಮಂಗಳವಾರ ಜರುಗಿದೆ.
ಹೊಗರನಾಳ ಗ್ರಾಮದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅರಣ್ಯವಿದ್ದು 3500 ಕ್ಕೂ ಗಿಡಗಳು ಸುಟ್ಟು ಬೆಂಕಿಗೆ ಆಹುತಿ ಆಗಿವೆ. ಸಮಾಜಿಕ ಅರಣ್ಯವಲಯ ಇದಾಗಿದ್ದು ಬೆಳಿಗ್ಗೆ 10-30 11 ಗಂಟೆಯ ಮದ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅರಣ್ಯ ರಕ್ಷಕ ರಾಜಶೇಖರ ಮತ್ತು ಕಾವಾಲುಗಾರರು ಮಾತ್ರ ಇದ್ದು ಗಿಡಗಳಿಗೆ ನೀರುಣಿಸುವಾಗ ಬೆಂಕಿ ಹತ್ತಿದ್ದನ್ನು ನೋಡಿ ತಕ್ಷಣ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಅವರಿಗೆ ಮಾಹಿತಿ ತಿಳಿದು ಇಪ್ಪತ್ತುಕ್ಕೂ ಹೆಚ್ಚು ಯುವಕರು ಅರಣ್ಯ ಪ್ರದೇಶಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು ಮುಕ್ಕಾಲು ಭಾಗ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ ಆಗಿದೆ ಎಂದು ಅರಣ್ಯ ರಕ್ಷಕ ರಾಜಶೇಖರ ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ಯಾರು ಬರದಂತೆ ನಿಷೇಧವಿದೆ. ಆದರೆ ಬೆಂಕಿ ಹೇಗೆ ಹತ್ತಿಕೊಂಡಿದೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

Don`t copy text!