e-ಸುದ್ದಿ, ಮಸ್ಕಿ
ಮಾ.29.ಸೋಮವಾರ ಕಾಂಗ್ರೆಸ್ ಅಭ್ಯಾರ್ಥಿ ಬಸನಗೌಡ ತುರ್ವಿಹಾಳ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ತಿಳಿಸಿದ್ದಾರೆ.
ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಸ್ಕಿ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.
ತೇರಿನ ಮನೆ ಹತ್ತಿರ ರ್ಯಾಲಿ ಮುಕ್ತಾಯವಾಗಿ ನಂತರ ಬಹಿರಂಗ ಸಭೆ ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ದೃವನಾರಯಣ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು, ಮಾಜಿ ಶಾಸಕರಾದ ಎನ್.ಎಸ್.ಬೋಸರಾಜ, ಹಂಪನಗೌಡ ಬಾದರ್ಲಿ ಹಾಗೂ ಮುಖಂಡರು ಮಾತನಾಡುವರು.
ಮದ್ಯಹ್ನಾ 2 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ನಾಮ ಪತ್ರ ಸಲ್ಲಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ತಿಳಿಸಿದ್ದಾರೆ.
——————–
ಸರಳ ನಾಮಪತ್ರ ಸಲ್ಲಿಕೆ
ಬಿಜೆಪಿಯಿಂದ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಸಂಪುಟದ ಸಹೊದ್ಯೋಗಿಗಳು ಬಹಿರಂಗ ಸಭೆ ನಡೆಸಿರುವದರಿಂದ ಬಿಜೆಪಿ ಬಹಿರಂಗ ಸಭೆಯನ್ನು ಕೈ ಬಿಟ್ಟಿದ್ದು ಸರಳವಾಗಿ ಬಿಜೆಪಿ ಕಚೇರಿಯಿಂದ ಚುನಾವಣಾ ಕಚೇರಿಗೆ ತೆರಳಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ರಾಜುಗೌಡ, ಡಾ.ಶಿವರಾಜ ಪಾಟೀಲ, ರವಿಕುಮಾರ, ಮಾಜಿ ಶಾಸಕ ನೇಮಿರಾಜ ನಾಯಕ, ಸಿದ್ದೇಶ ಯಾದವ ಸೇರಿದಂತೆ ಅನೇಕು ಮುಖಂಡರು ಭಾಗವಹಿಸುವರು ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ತಿಳಿಸಿದ್ದಾರೆ.
ಬಿಗಿ ಬಂದೋಬಸ್ತ್ ಃ ಮಾ.29 ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯಾರ್ಥಿಗಳು ಒಂದೇ ದಿನ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತಿರುವದರಿಂದ ಪೊಲೀಸ್ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಏರ್ಪಡಿಸಿದ್ದಾರೆ.
ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಮೆರವಣಿಗೆ, ಬಹಿರಂಗ ಸಭೆ ಹಾಗೂ ನಾಮಪತ್ರ ಸಲ್ಲಿಸಲಿರುವ ಚುನಾವಣಾ ಕಚೇರಿಯ ಮುಂಬಾಗದಲ್ಲಿ ಹೆಚ್ಚಿನ ಪೊಲೀಸರ್ ಕಣ್ಗಾವಲು ಹಾಕುತ್ತಿರುವದು ಕಂಡುಂದಿದೆ.