ಸುದ್ದಿ, ಮಸ್ಕಿ
ಪಟ್ಟಣದಲ್ಲಿ ಕೋವಿಡ್ ಪ್ರಕರಣಗಳು ಕಳೆದ ಐದಾರು ತಿಂಗಳಿನಿಂದ ಪತ್ತೆಯಾಗದೇ ಇರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಕರೊನಾ ಎರಡನೇ ಅಲೆ ಆರಂಭಗೊಂಡ ನಂತರ ಇದೀಗ ಕೋವಿಡ್ ಪಾಸೀಟಿವ್ ಪ್ರಕರಣ ಪತ್ತೆಯಾಗಿದೆ.
ಮಸ್ಕಿಯ ಬಳಗಾನೂರು ಕ್ರಾಸ್‍ನಲ್ಲಿರುವ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ತೀರ್ವ ಜ್ವರದಿಂದ ಬಳಲುತ್ತಿದ್ದರಿಂದ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ಅವರ ವರದಿ ಪಾಸೀಟಿವ್ ಎಂದು ಬಂದಿರುವುದರಿಂದ ಸೊಂಕಿತ ವ್ಯಕ್ತಿ ಹಾಗೂ ಅವರ ಕುಟುಂವನ್ನು 15 ದಿನಗಳವರೆಗೆ ಐಸೋಲೇಶನ್ ಮಾಡಲಾಗಿದೆ ಎಂದು ವೈದ್ಯಾದಿಕಾರಿ ಡಾ. ಮೌನೇಶ ಪೂಜಾರಿ ತಿಳಿಸಿದ್ದಾರೆ.
ಮಸ್ಕಿಯಲ್ಲಿ ಉಪಚುನಾವಣೆ ಇರುವ ಹಿನ್ನೆಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಭೆ ಸಮಾರಂಭಗಳು ನಡೆಯುತ್ತಿರುವದು. ಸಾರ್ವಜನಿಕರಲ್ಲಿ ತೀರ್ವ ಆತಂಕವನ್ನುಂಟು ಮಾಡಿದೆ.