ಬಸವತತ್ವದಲ್ಲಿ ಪಾದಪೂಜೆ
ದಿನಾಂಕ 28/3/2021 ರಂದು ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ- 21 ಹಮ್ಮಿಕೊಳ್ಳಲಾಗಿತ್ತು..
*ವಿಷಯ* :- *ಬಸವತತ್ವದಲ್ಲಿ ಪಾದಪೂಜೆ*
ವಚನ ಪ್ರಾರ್ಥನೆ: *ಕುಮಾರಿ* *ಗ್ರೀಷ್ಮ*
ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು…
*ಶರಣ ರುದ್ರಮೂರ್ತಿ ಪ್ರಭುಗಳು ಪ್ರಾಸ್ತಾವಿಕ ಮಾತನಾಡಿ
ಕಳೆದ ಎಲ್ಲಾ ಗೂಗಲ್ ಮೀಟ್ ನಲ್ಲಿ ಬಂದಂತ ವಿಚಾರಗಳನ್ನು ಮತ್ತೊಮ್ಮೆ ನೆನಪಿಸಿ,ಈ ವಾರದ ವಿಷಯವನ್ನು ಪ್ರಸ್ತುತ ಪಡಿಸಲು ವಿಶೇಷವಾಗಿ ಕೂಡಲಸಂಗಮದ ಬಸವ ಪ್ರಭು ಸ್ವಾಮೀಜಿಗಳು ಪ್ರಥಮವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಇವರು ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದಾರೆ, ” ಕೂಡಲ ಸಂಗಮದಲ್ಲಿ ಬಸವಣ್ಣನ ಕಾಲದ ರಾಜಕೀಯ ಮತ್ತು ಸಾಮಾಜಿಕತೆಯ ಬಗ್ಗೆ Phd ಅಧ್ಯಯನದಲ್ಲಿ ನಿರತರಾಗಿದ್ದಾರೆ,ಶರಣ ತತ್ವದಲ್ಲಿ ಪಾದಪೂಜೆಯ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ, ಎಂದು ಹೇಳಿದರು…
*ಬಸವ ಪ್ರಭು ಸ್ವಾಮೀಜಿಗಳು*
*ಕೂಡಲಸಂಗಮ*
ಬಸವಾದಿ ಪ್ರಮಥರು ಹಾಗೂ ಸರ್ವ ಶರಣ ಶರಣೆಯರಿಗೆ ವಂದಿಸಿ, ಹಾಗೂ ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ರುದ್ರಮೂರ್ತಿ ಹಾಗೂ ಪಟ್ಟಣ ಸರ್ ರವರಿಗೂ ವಂದಿಸಿ …
ಬಸವ ತತ್ತ್ವವು ವೈಜ್ಞಾನಿಕ ಮತ್ತು ವೈಚಾರಿಕ ತತ್ವಗಳನ್ನು ಒಳಗೊಂಡಿದೆ, ಪಂಚಭೂತಗಳನ್ನು ಒಳಗೊಂಡಿದೆ ಅಂದರೆ ತಪ್ಪೇನಿಲ್ಲ.ಪಂಚಭೂತಗಳಲ್ಲಿ
ಭೇಧ ಇಲ್ಲದೇ ಇರುವುದು ಮಾನವ ಜೀವಿಗಳಲ್ಲಿ ಏಕೆ ಬಂತು ಎನ್ನುವ ವಿಚಾರವನ್ನು ಶರಣರ ವಚನಗಳಲ್ಲಿ ತಿಳಿದು ಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು…
ವೈದಿಕ ಹಾಗೂ ಆಗಮ ವಿಚಾರಗಳು ನಮ್ಮ ಬುದ್ಧಿಮತ್ತೆಯನ್ನು ಬದಲಾಯಿಸಿವೆ, ಅನೇಕ ಧರ್ಮಗಳು ಜಗತ್ತಿನಲ್ಲಿ ಇವೆ.ಅವುಗಳು ತಮ್ಮದೇ ವಿಚಾರಗಳ ಆಚರಣೆಗೆ ಹೊಂದಿಕೊಂಡಿವೆ, ಧರ್ಮ ಒಂದೇ ” ದಯವೇ ಧರ್ಮದ ಮೂಲ” ಶರಣ ಧರ್ಮವು ಮಾನವ ಧರ್ಮ, ಇದು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಧರ್ಮವಾಗಿದೆ.” ಇದು ರಾಷ್ಟ್ರ ಮತ್ತು ವಿಶ್ವದ ಎಲ್ಲಾ ಜೀವಿಗಳಿಗೂ ಸಮಾನತೆಯನ್ನು ಹೇಳಿ ಕೊಡುವ ಧರ್ಮವಾಗಿದೆ ಎಂದು ಹೇಳಿದರು..
ಇದರಲ್ಲಿ ಅನಿಷ್ಟ ಹಾಗೂ ಮೌಢ್ಯ ಆಚರಣೆಗಳು ತುಂಬಿಕೊಂಡಿವೆ,ಶೈವದ ಮೇಲೆ ವೈದಿಕ ಮತಗಳು ದಬ್ಬಾಳಿಕೆ ಮಾಡಿವೆ ಎಂದು ತಿಳಿಸಿ,
ಸರಳವಾಗಿ ಆಚರಣೆ ಮಾಡಬಲ್ಲಂಥ ತತ್ವ ಸಿದ್ಧಾಂತಗಳನ್ನು ಅಂದಿನ ಶರಣರು ನಿರ್ಧರಿಸಿದ್ದರು. ಪಾದಪೂಜೆ ಎನ್ನುವ ಅರ್ಥವನ್ನು ತಪ್ಪಾಗಿ ತಿಳಿದಿದ್ದಾರೆ.ಜಂಗಮ ದ್ರೋಹಿಗಳೇ ಈ ಕೆಲಸ ಮಾಡುತ್ತಿರುವುದು.ಅವರೇ ನಿಜವಾದ ದ್ರೋಹಿಗಳು ಎಂದು ತಿಳಿಸಿ,ಬಸವ ತತ್ತ್ವದಲ್ಲಿ ಪಾದ ಎನ್ನುವುದು ಪಾರಿಭಾಷಿಕ ಪದ, ಪಾದ ಎಂದರೆ ಫಥ, ಇದು ಅರಿವಿನ ಮಾರ್ಗ, ಪಾದ ಪೂಜೆ ಮಾಡುವುದು , ಕಾಲು ತೊಳೆಯುವುದು, ಕೆಟ್ಟ ಸಂಪ್ರದಾಯ ಪಾದಪೂಜೆ ಮಾಡಿದ ನೀರನ್ನು ತಮ್ಮ ಲಿಂಗದ ಮೇಲೆ ಹಾಕಿ, ಮತ್ತೆ ಮತ್ತೊಂದು ಲಿಂಗದ ಮೇಲೆ ಹಾಕುವುದು ಅನಿಷ್ಟ ಪದ್ಧತಿ ಎಂದು ತಿಳಿಸಿದರು..
ಬಸವಣ್ಣನವರು ನಿಮ್ಮ ಪಾದಕ್ಕೆ ನಮೋ ನಮೋ ಎಂದು ಹೇಳಿದ್ದಾರೆ ಹೊರೆತು, ಪಾದಪೂಜೆಯ ಬಗ್ಗೆ ಎಲ್ಲೂ ಹೇಳಿಲ್ಲ, ಎಂದು ತಿಳಿಸಿ, ಅರಿವಿನ ಪ್ರಜ್ಞೆಯ ಸಂಕೇತವೇ ಪಾದ, ಹಾಗಾಗಿ ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಬಸವಣ್ಣನವರು ಎಂದೂ ಶಿಷ್ಯರನ್ನು ತಮ್ಮ ಜೊತೆ ಇರಿಸಿಕೊಂಡಿಲ್ಲ, ಅವರು ನನಗೆ ನಾನೇ ಹಗೆ,ನನಗೆ ನಾನೇ ಕೆಳೆ ಎಂದು ಹೇಳಿಕೊಂಡಿದ್ದಾರೆ. ಶರಣು ಶರಣಾರ್ಥಿಗಳು ಎಂದು ಬಸವಣ್ಣನವರು ಹೇಳಿದ್ದಾರೆ,..
*ಬಾಗಿದ ತಲೆ ಮುಗಿದ ಕೈ* ಅವರ ಕೊಡುಗೆಯಾಗಿದೆ. ಕೆಲವು ವಚನಗಳನ್ನು ನೋಡಿದಾಗ ಅವುಗಳನ್ನು ಪರಿಶ್ಕರಣೆ ಮಾಡುವ ಅಗತ್ಯತೆ ಇದೆ.ಅಂದಿನ ಶರಣರು ಸೈದ್ಧಾಂತಿಕ, ವೈಜ್ಞಾನಿಕ ಹಾಗೂ ವೈಚಾರಿಕ ತತ್ವಗಳ ಆಧಾರದ ಮೇಲೆ ವಚನಗಳನ್ನು ಬರೆದಿದ್ದಾರೆ,ಆದರೆ ವೈದಿಕರು ಅವುಗಳನ್ನು ಬದಲಾಯಿಸಿದ್ದಾರೆ ಎಂದು ತಿಳಿಸಿ, ಅನೇಕ ಸ್ವಾಮೀಜಿಗಳು ಪಾದ ಪೂಜೆಯನ್ನು ಕಾರ್ಯಕ್ರಮಕ್ಕೆ ಹೋದಾಗ ವೈಭವವಾಗಿ ಮಾಡಿ ಕೊಂಡು ಬರುತ್ತಾರೆ, ಇದು ತಪ್ಪು ನಾವು ಗುರು ಮುಟ್ಟಿದ ಗುರುವಿನಂತಾಗಬೇಕು ಎಂದು ತಿಳಿಸಿದರು…
ಬಸವಣ್ಣನವರು ಅರಿವಿನ ಪ್ರಜ್ಞೆಯಲ್ಲಿ ಗುರುವಾದವರು,
ಮಜ್ಜಿಗೆ ಕಡೆದಾಗ ಬೆಣ್ಣೆ ಬರುವಂತೆ ನಾವು ಇರಬೇಕು ಎಂದು ತಿಳಿಸಿ ಹೇಳಿ,” ಲಿಂಗ ಯೋಗದಲ್ಲಿ ಸಂಪೂರ್ಣ ತಲ್ಲೀನನಾಗಿ ತ್ರಾಟಕ ಯೋಗದಲ್ಲಿ ನಿಜವಾದ ಪಾದೋದಕವನ್ನು ಕಾಣಬೇಕು” ಎಂದು ತಿಳಿಸಿದರು…
ಜಂಗಮದ ಪರಮಾನಂದವೇ *ಪಾದೋದಕ* ಮತ್ತು ಸುಪ್ತ ವ್ಯಸನಗಳು ಕಳೆದು ಕೊಂಡು ಲಿಂಗಾನುಸಂಧದಲ್ಲಿ ಸ್ವೀಕಾರ ಮಾಡುವುದೇ ಪಾದೋದಕ ಹಾಗೂ ಪರಸ್ಪರ ವಸ್ತುವಿನ ಚೈತನ್ಯವೇ ಪಾದೋದಕ ಎಂದು ತಿಳಿಸಿ ಹೇಳಿ, ಶರಣ ಸಂಸ್ಕೃತಿಯು ಪಾದೋದಕ್ಕೆ ಸಂಪೂರ್ಣ ನಿಷೇಧವನ್ನು ಹೇರಿದೆ ಎಂದು ತಿಳಿಸಿ,ಶರಣ ಧರ್ಮಕ್ಕೆ ಸ್ವಾಮಿಗಳೇ ಬೇಡ,ಈ ನಿಜ ಸಂಗತಿಯನ್ನು ಇಂದಿನ ಸ್ವಾಮಿಗಳಿಗೆ ಹೇಳಬೇಕಾಗಿದೆ ಎಂದು ತಿಳಿಸಿದರು..
ಡಾ.ಶಶಿಕಾಂತ್ ಪಟ್ಟಣ
ಬಸವಪ್ರಭು ಸ್ವಾಮೀಜಿಗಳ ಮಾತುಗಳನ್ನು ಅತ್ಯಂತ ಗೌರವಪೂರ್ವಕವಾಗಿ ಸಮ್ಮತಿಸಿ, ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನೀವು ಪಾದಪೂಜೆಯ ಬಗ್ಗೆ ತಿಳಿಸಿದ್ದೀರಿ ಎಂದು ಹೇಳಿ, ಬಸವಣ್ಣ ಪ್ರಗತಿಪರ,ಆದರೆ ನಾವುಗಳು ಸಂಪ್ರದಾಯವಾದಿಗಳು, ನಾವು ಸ್ಥಾವರದ ಹೆಸರಿನಲ್ಲಿ ದುಡ್ಡು ಎತ್ತುತ್ತೇವೆ, ಅದಕ್ಕೆ ಬೇಕಾಗುವ Password ಎಂದರೆ ಈ ಪಾದಪೂಜೆ They want money. ಜನರನ್ನು ಸುಲಿಯಲು ಈ ಅಸ್ತ್ರವನ್ನು ಉಪಯೋಗಿಸುತ್ತಾರೆ ಎಂದು ತಿಳಿಸಿ, ನಾವು ವೈಚಾರಿಕವಾಗಿ ಬಸವಣ್ಣನವರ ಗಟ್ಟಿ ತತ್ವವನ್ನು ಒಪ್ಪಿಕೊಳ್ಳಬೇಕಾಗಿದೆ, ಬೇರೆ ಬೇರೆ ರಾಷ್ಟ್ರದ ಜನರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಾರೆ, ನಿಜವಾದ ಬಸವ ತತ್ತ್ವಕ್ಕೆ ಸ್ಪಂದಿಸುವ ಅಗತ್ಯವಿದೆ.ನಾವು ಬಸವಣ್ಣನೇ ವಿರುದ್ಧ ನಿಂತಿದ್ದೇವೆ ಎಂದು ತಿಳಿಸಿದರು…
ಮುಂದುವರೆದು ಅವರು ಬೇಸರದಿಂದ ಗುಡಿಯೊಳಗೆ ಸ್ಥಾವರ ಲಿಂಗವನ್ನು ಪೂಜಿಸಿ ಹೊರಗಡೆ ಇಷ್ಟಲಿಂಗವನ್ನು ಮಾರುತ್ತಿರುವುದು ಮೌಢ್ಯತೆಯ ಪರಮಾವಧಿ ಎಂದು ತಿಳಿಸಿ ಹೇಳಿ,
ಪಾದಪೂಜೆ ಎನ್ನುವುದು ವ್ಯಕ್ತಿ ಚೈತನ್ಯ, ಮೆದುಳಿನಿಂದ ಊರ್ಧ್ವ ಮುಖವಾಗಿ ಹರಿಯುವ ಪ್ರಕ್ರಿಯೆ ಎಂದು ತಿಳಿಸಿದರು…
ಶ್ರೇಣೀಕೃತವಾದ ವ್ಯವಸ್ಥೆಯನ್ನು ಶರಣರು ಶರಣರು ಮಾಡಿಲ್ಲ, ಭ್ರಮೆ ಭ್ರಾಂತಿಯನ್ನು ಹುಟ್ಟು ಹಾಕಿದ ಕೃತಿಮ ವಚನಗಳನ್ನು ಚೆನ್ನಬಸವಣ್ಣನವರ ವಚನದಲ್ಲಿ ಕಾಣುತ್ತೇವೆ ಎಂದು ತಿಳಿಸಿ, *ದೀಪದಿಂದ ದೀಪ ಹಚ್ಚುವ* ಕೆಲಸವನ್ನು ಶರಣರು ಮಾಡಿದ್ದಾರೆ, ಆಷಾಢಭೂತಿತನ ನನ್ನು ಅವರು ಒಪ್ಪಲಿಲ್ಲ ಎಂದು ತಿಳಿಸಿ, ಮೂಲಭೂತವಾಗಿ ನಾವು ಅವರ ತತ್ವಗಳನ್ನು ತಿಳಿದುಕೊಳ್ಳಲು ವಿಫಲರಾಗಿದ್ದೇವೆ ಎಂದು ತಿಳಿಸಿದರು…
ಅದಕ್ಕೆ ಸ್ವಾಮೀಜಿಗಳು ದಕ್ಷಿಣ ಕರ್ನಾಟಕದಲ್ಲಿ ತುಂಬಾ ದೇವರುಗಳ ಪೂಜೆ ಮಾಡುತ್ತಾರೆ ಎಂದು ತಿಳಿಸಿ, ಗುರು ಎನ್ನುವುದು ಅರಿವಿನ ಸಂಕೇತ, *ಲಿಂಗಾಯತ* ಮತ್ತು *ಶರಣ* ಎನ್ನುವ ಪದಗಳೇ ಪರಮ ಪದವಿ ಎಂದು ತಿಳಿಸಿದರು..
ಅದಕ್ಕೆ ರುದ್ರಮೂರ್ತಿ ಸರ್ ಮಾತನಾಡಿ ಇದು ಹಣ ಮಾಡುವ ಮಾರ್ಗ, ಮೌಢ್ಯ ಚಿಂತನೆಗಳನ್ನು ಬಿಡಿಸಬೇಕಾದರೆ, ವಚನಗಳ ಆಶಯಗಳನ್ನು ಜನರಿಗೆ ಮುಟ್ಟಿಸುವ ಸಣ್ಣ ಪ್ರಯತ್ನ ಇದುವರೆಗೂ ನಡೆದಿಲ್ಲ, ಆ ಪ್ರಯತ್ನ ನಿಮ್ಮಿಂದ ನಡೆದಿದೆ ಎಂದು ತಿಳಿಸಿದರು…
ಉಮೇಶ್ ಮಂಠಾಳೆ
ಇದು ಪಾದಪೂಜೆಯಲ್ಲ ಇದು ಧೂಳ್ ಪಾದ ಎಂದು ಒಂದು ಉದಾಹರಣೆ ಕೊಟ್ಟು ಪ್ರತಿ ಸೋಮವಾರ ಸ್ವಾಮೀಜಿಗಳನ್ನು ಕರೆಸಿ ಕಾಲು ತೊಳೆದು ಮನೆಯೊಳಗೆ ಸಿಂಪಡಿಸುವ ಪದ್ಧತಿ ಇದೆ, ಇದು ಸಲ್ಲದು ಎಂದು ತಿಳಿಸಿ ಹೇಳಿ, ಗುರುಗಳ ಪಾದ ತೊಳೆದು ಕುಡಿಯುವ ಪದ್ಧತಿಯೂ ಇದೆ ಎಂದು ತಿಳಿಸಿದರು. ಅನಿಷ್ಟತೆಯನ್ನು ಹೋಗಲಾಡಿಸುವ ವಿಚಾರಕ್ಕೆ ನನ್ನ ಸಹಮತವಿದೆ ಎಂದು ತಿಳಿಸಿದರು.
*ಪ್ರವಚನ* ಎನ್ನುವ ಪದ ವಚನಗಳಿಂದ ಬಂದಿದೆ,ಪರವಾಗಿ ಮಾಡುವ ವಿಮರ್ಶೆಯೇ *ಪರಾಮರ್ಶೆ* ಎಂದು ತಿಳಿಸಿ ಹೇಳಿ ಎಲ್ಲಾ ಮಠಗಳ ಮುಂದೆ *ಪಾದಪೂಜೆಯನ್ನು* *ನಿಷೇಧಿಸಲಾಗಿದೆ* ಎನ್ನುವ ನಾಮಫಲಕಗಳನ್ನು ಹಾಕಬೇಕು ಎಂದು ತಿಳಿಸಿದರು…
*ಕುಮಾರ್ ರಾಜಣ್ಣ* :-
ಅರಿವೇ ಗುರು ಆಚಾರವೇ ಲಿಂಗ ಹಾಗೂ ಅನುಭಾವವೇ ಜಂಗಮ ಎಂದು ತಿಳಿಸಿ ಹೇಳಿ, ಪಾದಪೂಜೆ ಮಾಡಿಸಿಕೊಳ್ಳುವವರಿಗಿಂತ ಮಾಡುವುದು ಇನ್ನೂ ತಪ್ಪು ಎಂದು ತಿಳಿಸಿದರು…
*ಸೋಮಶೇಖರ್* *ಮುಗ್ಧುಮ್* :-
ಪಾದಪೂಜೆಯ ಬಗ್ಗೆ ಸವಿವರವಾಗಿ ಎಲ್ಲವನ್ನೂ ಗುರುಗಳು ತಿಳಿಸಿದ್ದಾರೆ,ಅವರ ಬಾಯಿಂದಲೇ ಈ ವಿಚಾರವನ್ನು ಹೇಳಿಸಿದರೆ ಈ ವಿಷಯಕ್ಕೆ ಮಹತ್ವ ಬರುತ್ತದೆ ಎನ್ನುವ ಅಭಿಪ್ರಾಯ.ಅದಕ್ಕೆ ಪೂರಕವಾಗಿ ಇಂದಿನ ಕಾರ್ಯಕ್ರಮ ನಡೆದಿದೆ, ನಾವು ಅದನ್ನು ಒಪ್ಪಬೇಕು ಎಂದು ತಿಳಿಸಿದರು…ಹೂಂ
*ಚೆನ್ನಬಸಪ್ಪ* *ಝಳಕಿ* :-
ಇನ್ನೂ ಹೆಚ್ಚಿನ ಸ್ವಾಮೀಜಿಗಳು ಜ್ಞಾನವನ್ನು ತಿಳಿದುಕೊಂಡಿಲ್ಲ, ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಈ ವಿಷಯವನ್ನು ತಿಳಿಸಬೇಕು ಎಂದು ತಿಳಿಸಿ ಹೇಳಿದರು..
*ಗೀತಾ ಜಿ ಎಸ್* :-
ನಮ್ಮ ಭಾಗದಲ್ಲಿ ಗುರುಗಳು ಬಂದಾಗ ಪಾದ ಪೂಜೆಯನ್ನು ಇಂದಿಗೂ ಕೂಡ ಮಾಡುತ್ತಾರೆ.ಆದರೆ ಕಾಲು ತೊಳೆದು ಯಾರೂ ನೀರನ್ನು ಕುಡಿಯುವುದಿಲ್ಲ, ಮನೆಗೆ ಸಂಪಡಿಸುತ್ತಾರೆ,ಇದೂ ಕೂಡ ಮೌಢ್ಯವೇ ಸರಿ ಎಂದು ತಿಳಿಸಿ, ಎಲ್ಲಾ ಸ್ವಾಮೀಜಿಗಳು ಜನರ ದುಡ್ಡನ್ನು ತಿಂದು ಹಾಳುಮಾಡಿದಂತೆ, ಕೆಲಸರ್ರವಮಠಗಳಲ್ಲಾದರೂ ಲೋಕ ಕಲ್ಯಾಣಕ್ಕಾಗಿ ಹಣವು ಸದ್ವಿನಿಯೋಗ ಆಗುತ್ತಿದೆ ಎಂದು ತಿಳಿಸಿದರು…
*ರವಂದರ್ ಶಿವಕುಮಾರ್*
ಇಲ್ಲಿಗೆ ಗುರುಗಳು ಬಂದಾಗ ಪಾದಪೂಜೆ ನಡೆಯುತ್ತದೆ. ಆದರೆ ಅದು ಗುಪ್ತವಾಗಿ ಒಂದು ಮನೆಗೆ 100 ಡಾಲರ್ ಆದರೂ ಹತ್ತು ಮನೆಗೆ 1000 ಡಾಲರ್ ಗಳನ್ನು ಅವರು ಸಂಗ್ರಹಿಸುತ್ತಾರೆ, ಖಂಡಿತಾ ಪಾದ ಪೂಜೆ ನಿಷೇಧದ ಬೋರ್ಡ್ ಹಾಕಬೇಕು ಎಂದು ತಿಳಿಸಿದರು..
*ರಾಜಶ್ರೀ* *ಥಳಂಗೆ* :- ಗುರುಗಳನ್ನು 5 ಸಲ ಭೇಟಿಯಾಗಿದ್ದೇನೆ,ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರುತ್ತಾರೆ ಎಂದು ತಿಳಿಸಿ, ಅವರು ಬಸವ ತತ್ವದ ನಿಜವಾದ ಅನುಯಾಯಿಗಳು ನನ್ನ ಚಲನಚಿತ್ರಕ್ಕೆ ತಾವಾಗಿಯೇ ಬಂದು ಆಶೀರ್ವಾದ ಮಾಡಿ ಹೋದರು, ಅವರು ಎಲ್ಲರೊಳಗೊಂದಾಗಿ ಇರುತ್ತಾರೆ ಎಂದು ತಿಳಿಸಿದರು…
*ಡಾ.ಶುಭಾರಾಣಿ ಕಡಪಟ್ಟಿ*
ತುಂಬಾ ಒಳ್ಳೆಯ ಚರ್ಚೆ ನಡೆದಿದೆ.ಆದರೆ ಇದು ಜನರಿಗೆ ಮುಟ್ಟಿಸಲು ಸ್ವಲ್ಪ ತಡವಾಗಬಹುದು, ಸಂಪೂರ್ಣ ಪ್ರಚಾರ ಕೈಗೊಳ್ಳಬೇಕು ಎನ್ನುವ ಉತ್ತಮ ಸಲಹೆ ನೀಡಿದರು..
*ವಚನ ಮಂಗಳ*
*ವಿದ್ಯ ಮುಗ್ದಮ್*
ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನಾ ನೆನೆವುದು ಎನ್ನುವ ವಚನವನ್ನು ಸುಶ್ರಾವ್ಯವಾಗಿ ಹಾಡಿದರು…
ರುದ್ರಮೂರ್ತಿ ಸರ್ ರವರು ಬಸವ ಪ್ರಭು ಸ್ವಾಮೀಜಿಗಳಿಗೆ ಗೌರವ ನಮನಗಳನ್ನು ಸಲ್ಲಿಸಿ, ಭಾಗವಹಿಸಿದ ಸರ್ವರೆಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು..
*ವರದಿ ಮಂಡನೆ* :-
*ಗೀತಾ ಜಿ ಎಸ್*
*ಹರಮಘಟ್ಟ ಶಿವಮೊಗ್ಗ*