ಮೆದಿಕಿನಾಳ ಜಿಪಂ ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲು ಪ್ರಚಾರ

e-ಸುದ್ದಿ, ಮಸ್ಕಿ
ಏಪ್ರಿಲ್ 17 ರಂದು ನಡೆಯುವ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರ ಪರವಾಗಿ ಮಂಗಳವಾರ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಕ್ಷೇತ್ರದ ಮೆದಿಕಿನಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಬೆಳಿಗ್ಗೆ ಛತ್ತರ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಚಾರದ ಅಖಾಡಕ್ಕೆ ಇಳಿದ ಸಚಿವ ಬಿ. ಶ್ರೀರಾಮುಲು ಕನ್ನಾಳ, ತಿಮ್ಮಾಪೂರ, ಮೆದಿಕಿನಾಳ, ನಾಗರಬೆಂಚಿ, ಮ್ಯಾದ್ರಾಳ, ಅಂತರಗಂಗಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸುಡುವ ಬಿಸಿಲಿನಲ್ಲೂ ಮನೆ ಮನೆಗೆ ತೆರಳಿ ಪ್ರತಾಪಗೌಡ ಪಾಟೀಲರಿಗೆ ಮತ ನೀಡುವ ಮೂಲಕ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.
ಮೆದಕಿನಾಳ ಗ್ರಾಮದಲ್ಲಿ ಮಾತನಾಡಿದ ಬಿ.ಶ್ರೀರಾಮುಲು ಪ್ರತಾಪಗೌಡ ಪಾಟೀಲರ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ, ನಾನು ಸಚಿವನಾಗಿದ್ದೇನೆ ಎಂದರು.
ಮತದಾರರು ಪ್ರತಾಪಗೌಡ ಪಾಟೀಲರಿಗೆ ಮತ ನೀಡಿ ಆಯ್ಕೆ ಮಾಡಿದರೆ ಅವರು ಸಚಿವರಾಗಿ ಜಿಲ್ಲೆಗೆ ಬರುತ್ತಾರೆ. ಇದನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಸಚಿವರು ಹಳ್ಳಿ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕರ್ತರು ಡೊಳ್ಳು ಕುಣಿತದೊಂದಿಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಶಾಸಕರ ಪುತ್ರ ಪ್ರಸನ್ನ ಪಾಟೀಲ್,ಅಮರೇಶ ರಾಠೋಡ, ಮಲ್ಲಿಕಾರ್ಜುನ ಪರಡ್ಡಿ, ರಾಜಣ್ಣ ಪರಡ್ಡಿ ರಾಚಪ್ಪ ಹಾಗೂ ಇತರರು ಇದ್ದರು.

ಬಿಜೆಪಿಯಿಂದ ಸರಣಿ ಸಭೆ
ಪ್ರತಾಪಗೌಡ ಪಾಟೀಲರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಬೇಕು ಎಂದು ಗಟ್ಟಿ ನಿರ್ಧಾರ ಮಾಡಿರುವ ಬಿಜೆಪಿ ಮಂಗಳವಾರ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿವಾರು ಸರಣಿ ಸಭೆಗಳನ್ನು ನಡೆಸಲಾಯಿತು.
5 (ಂ) ಕಾಲುವೆ ವ್ಯಾಪ್ತಿಯ ನಾಲ್ಕು ಪಂಚಾಯಿತಿಗಳ ಮುಖಂಡರ ಸಭೆ ನಡೆಸಲಾಯಿತು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ಹೆಚ್ಚಿನ ಮತ ಕೊಡುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಭರವಸೆ ನೀಡಿದರು.
ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ರಾಮಾನಂದ ಯಾದವ್, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮನವಳ್ಳಿ, ಡಾ. ಶಿವರಾಜ ಪಾಟೀಲ, ಪ್ರತಾಪಗೌಡ ಪಾಟೀಲ್, ನೇಮಿರಾಜ ನಾಯ್ಕ, ಸಿದ್ದೇಶ ಯಾದವ್, ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Don`t copy text!