ಕಾಂಗ್ರೆಸ್ ಸಮಾವೇಶ ಕೊವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲು

e-ಸುದ್ದಿ, ಮಸ್ಕಿ
ಮಸ್ಕಿ ಉಪಚುನಾವಣೆ ಹಿನ್ನಲೆಯಲ್ಲಿ ಮಾ.29. ಸೋಮವಾರದಂದು ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದಕ್ಕಾಗಿ ಬ್ಲಾಕ್ ಕಾಂಗ್ರೆಸ್ ಮಸ್ಕಿ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಸೇರಿದಂತೆ ಇತರರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ಆಯೋಗದ ಸೆಕ್ಟರ್ ಅಧಿಕಾರಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ದೀಪಕ್ ಬೂಸರಡ್ಡಿ ತಿಳಿಸಿದ್ದಾರೆ. ಕೊವಿಡ್ ನಿಯಮದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ 500 ಜನರಿಗಿಂತ ಹೆಚ್ಚಿಗೆ ಸೇರಿಸಬಾರದು. ಸೋಮವಾರದ ಸಮಾವೇಶದಲ್ಲಿ ಕರೊನಾ ನಿಯಮ ಪಾಲನೆ ಮಾಡದೆ ಸಾವಿರಾರು ಜನ ಸೇರಿಸಿದ್ದರಿಂದ ಈ ಪ್ರಕರಣ ದಾಖಲಾಗಿದೆ.

 

Don`t copy text!