e-ಸುದ್ದಿ, ಮಸ್ಕಿ
ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಕಂತೆ ಕಂತೆ ಸುಳ್ಳು ಹೇಳುತ್ತಿರುವದರಿಂದ ಸೋಲುತ್ತಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಕೂಡ ಸೋಲು ಖಚಿತ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದರು.
ಮಸ್ಕಿ ಕ್ಷೇತ್ರದ ಮೆದಕಿನಾಳ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಶ್ರೀರಾಮುಲು ಸಮಿಶ್ರ ಸರ್ಕಾರದಲ್ಲಿ ಅಭಿವೃದ್ದಿಯನ್ನು ಕಡೆಗಣಿಸಿದ ಕಾರಣ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಿದ್ದಾರೆ. ಆದರೆ ಅವರನ್ನು ಮಾರಾಟ ವಾಗಿದ್ದಾರೆ, ಗೋವಾ, ಮುಂಬೈ ಗಿರಾಕಿಗಳು ಎಂದು ಮಾತನಾಡುತ್ತಿರುವದು ಅವರ ಸಂಸ್ಖøತಿ ತೊರಿಸುತ್ತದೆ ಎಂದು ರಾಮುಲು ಅಸಮದಾನ ವ್ಯಕ್ತಪಡಿಸಿದರು.
ಈಗಾಗಲೇ 17 ಜನರಲ್ಲಿ 15 ಜನ ಬಿಜೆಪಿಯಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಹೋಗಿದೆ. ಭಾರತದಲ್ಲಿ ಮೋದಿ ಕಾಂಗ್ರೆಸ್ ನಿರ್ನಾಮ ಮಾಡಿದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಕಾಂಗ್ರೆಸ್‍ನ್ನು ನಿರ್ನಾಮ ಮಾಡಲಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.
ರಾಯಚೂರು ಜಿಲ್ಲೆಗೆ ಕಾಂಗ್ರೆಸ್‍ನವರ ಆಡಳಿತದಲ್ಲಿ ಕೊಡುಗೆ ಏನೆಂದು ತೋರಿಸಲಿ. 2 ಸಾವಿರ ಕೋಟಿ ಕೋಟಿದ್ದೇವೆ ಎಂದು ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಅವರೇನು ತಮ್ಮ ಮನೆಯಿಂದ ಕೊಟ್ಟಿದ್ದಾರೆಯೇ ? ಪ್ರತಾಪಗೌಡ ಪಾಟೀಲ ಶಾಸಕರಾಗಿದ್ದರು ಅಭಿವೃದ್ದಿಗಾಗಿ ಕೊಟ್ಟಿದ್ಧೀರಿ. ಈ ಬಾರಿ ಪ್ರತಾಪಗೌಡ ಪಾಟೀಲ ಗೆದ್ದು ಬಂದ ಮೇಲೆ ಸಚಿವರಾಗಿ ಮಸ್ಕಿ ಕ್ಷೇತ್ರದ ಸಂಪೂರ್ಣ ಅಭಿವೃದ್ದಿ ಮಾಡಲಿದ್ದಾರೆ ಎಂದರು.
ಎಸ್.ಟಿ ಸಮಜದ ಹೆಣ್ಣು ಮಗಳಿಗೆ ಜಾತಿ ಆಧಾರದ ಮೇಲೆ ರಕ್ಷಣೆ ಇಲ್ಲ ಕಾನೂನಿನು ರಕ್ಷಣೆ ಮಾಡುತ್ತದೆ. ಈಗಾಗಲೇ ಈ ಪ್ರಕರಣ ನ್ಯಾಯಾಂಗದಲ್ಲಿರುವದರಿಂದ ನಾನು ಹೆಚ್ಚಿಗೆ ಪ್ರತಿಕ್ರಿಯೆಸಲಾರೆ ಎಂದರು.
5ಎ ತಾಂತ್ರಿಕ ಕಾರಣ ಪರಿಹರಿಸಿ ಜಾರಿಗೆ ತರಲು ಬದ್ಧವಾಗಿದ್ದೇವೆ. ಆದರೆ ಇದುವರೆಗೆ ಆಡಳಿತ ಮಾಡಿದ ಕಾಂಗ್ರೆಸ್‍ನವರು ಈ ಯೋಜನೆ ಯಾಕೆ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.
————————–
ಶಿವನಗೌಡ ನಾಯಕ ಗೈರು ನುಣುಚಿಕೊಂಡ ರಾಮುಲು
ಮಸ್ಕಿ ಕ್ಷೇತ್ರದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಮತ್ತು ಮುಖಂಡರು ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದಾರೆ ಆದರೆ ಪಕ್ಕದ ದೇವರ್ದುಗ ಶಾಸಕ ಶಿವನಗೌಡ ನಾಯಕ ಇದುವರೆಗೂ ಮಸ್ಕಿಗೆ ಆಗಮಿಸದಿರುವುದಕ್ಕೆ ಕಾರಣವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನಗೆ ಉತ್ತರಿಸಿದ ಬಿ.ಶ್ರೀರಾಮುಲು ಅವರಿಗೆ ಕೈ ಪ್ರಾಕ್ಯ್ಚರ್ ಆಗಿದೆ. ಹಾಗಾಗಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಭಾಗವಹಿಸುವರು ಎಂದು ಹೇಳಿದರು.
ಬಿ.ವೈ.ವಿಜಯೇಂದ್ರ ಈಗ ರಾಜಕೀಯದಲ್ಲಿ ಬೆಳೆಯುತ್ತಿದ್ದಾರೆ. ತಂದೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‍ನವರಿಗೆ ಸಹಿಸಿಕೊಳ್ಳದೆ ವಿಜಯೇಂದ್ರನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ವಿಜಯೇಂದ್ರ ಬಂದರೆ ಹಣದ ಸುರಿಮಳೆ ಹಂಚುತ್ತರೆ ಎಂಬುದು ಶುದ್ಧ ಸುಳ್ಳು. ಎಲ್ಲಾ ಸಮಾಜದ ಯುವಕರನ್ನು ಒಗ್ಗೋಡಿಸುವದಕ್ಕಾಗಿ ವಿಜೆಯೇಂದ್ರ ಶ್ರಮಿಸುತ್ತಿದ್ದಾರೆ ಎಂದು ಬಿ.ಶ್ರೀರಾಮುಲು ಹೇಳಿದರು.