ಉಪ ಚುನಾವಣೆ ಅಖಾಡಕ್ಕೆ ಬಿ.ವೈ ವಿಜಯೇಂದ್ರ ಪ್ರವೇಶ

ಉಪ ಚುನಾವಣೆ ಅಖಾಡಕ್ಕೆ ಬಿ.ವೈ ವಿಜಯೇಂದ್ರ ಪ್ರವೇಶ
ಮಸ್ಕಿ: ತೆರೆದ ವಾಹನಲ್ಲಿ ಅದ್ದೂರಿ ಮೆರವಣಿಗೆ-ಹೂವಿನ ಸುರಿಮಳೆ


e- ಸುದ್ದಿ ಮಸ್ಕಿ 

ಏ. 17 ರಂದು ನಡೆಯಲಿರುವ ಮಸ್ಕಿ ಉಪ ಚುನಾವಣೆ ಅಖಾಡಕ್ಕೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ಸಂತೆಕೆಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ತಮ್ಮ ಚುನಾವಣಾ ಅಖಾಡಕ್ಕೆ ಇಳಿದರು.
ಬೆಳಿಗ್ಗೆ ಮುದಗಲ್ ಪಟ್ಟಣದಿಂದ ಆಗಮಿಸಿದ ಅವರು ಮಟ್ಟೂರು ಗ್ರಾಮದ  ಮೂಲಕ ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರವೇಶಿಸಿದ ಬಿ.ವೈ ವಿಜಯೇಂದ್ರ ಅವರನ್ನು ಸಂತೆಕೆಲ್ಲೂರು, ಅಂಕುಶದೊಡ್ಡಿ ಗ್ರಾಮಗಳಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
12 ಗಂಟೆಗೆ ಮಸ್ಕಿ ಪಟ್ಟಣದ ಗಾಂಧಿನಗರಕ್ಕೆ ಆಗಮಿಸಿದ  ಅವರು ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ  ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನ ಏರಿದರು.


ನೂರಾರು ಬೈಕ್ ಗಳ ರಾಲಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಮೆರವಣಿಗೆ ಮಾಡಲಾಯಿತು. ಗಾಂಧಿ ನಗರದಲ್ಲಿ ನೂರಾರು ಯುವಕರು ಜೆಸಿಬಿ ಯಂತ್ರದ ಸಹಾಯದಿಂದ ಮುಖ್ಯಮಂತ್ರಿ ಪುತ್ರನಿಗೆ ಹೂವಿನ ಸುರಿಮಳೆ ಮಾಡಿದರು.
ದಾರಿಯಲ್ಲಿ ಮಹಿಳೆಯರು ಆರತಿ ಬೆಳಗಿ ತಿಲಕ ಇಟ್ಟರು. ಅಗಸಿ, ಮುಖ್ಯ ಬಜಾರ, ದೈವದಕಟ್ಟೆ, ತೇರ ಬೀದಿ, ಕನಕವೃತ್ತ, ವಾಲ್ಮೀಕಿ ವೃತ್ತ, ಬಸವ ವೃತ್ತದ ಮೂಲಕ ಬಸವೇಶ್ವರ ನಗರದ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.
ಕನಕವೃತ್ತದಲ್ಲಿ ಜೆಸಿಬಿ ಯಂತ್ರದ ಮೂಲಕ ಬೃಹತ್ ಹೂವಿನ ಹಾರ ಹಾಕಿ ಪಕ್ಷದ ಕಾರ್ಯಕರ್ತರು ಅಭಿನಂದಿಸಿದರು.
ಶಾಸಕ ರಾಜುಗೌಡ, ಡಾ. ಶಿವರಾಜ ಪಾಟೀಲ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಮುಖಂಡ ಮಹಾದೇವಪ್ಪಗೌಡ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Don`t copy text!