ಸುದ್ದಿ, ಮಸ್ಕಿ
ಕ್ಷೇತ್ರದ ಜನರ ಮತ ಪಡೆದುಕೊಂಡು ಯಾರು ದ್ರೋಹ ಮಾಡಿದ್ದಾರೋ ಅವರಿಗೆ ಏ.17ರಂದು ಅವರ ವಿರುದ್ಧ ಮತ ಹಾಕುವ ಮೂಲಕ ಮತದಾರರು ತಕ್ಕ ಉತ್ತರ ನೀಡಿ ನಿಮ್ಮ ಶಕ್ತಿ ತೋರಿಸಬೇಕು ಎಂದು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಹೇಳಿದರು.
ಮಸ್ಕಿ ಕ್ಷೇತ್ರ ವ್ಯಾಪ್ತಿಯ ಅಂಕುಶದೊಡ್ಡಿ, ಹೂವಿನಭಾವಿ, ಬುದ್ದನ್ನಿ, ಕಾಟಗಲ್, ಬೆಲ್ಲದಮರಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಪರ ಅಬ್ಬರದ ಪ್ರಚಾರ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಕಷ್ಟು ಅನುಧಾನ ನೀಡಿದ್ದರು ಆದರೆ ಪ್ರತಾಪಗೌಡರು ಮಾತ್ರ ಕ್ಷೇತ್ರದ ಮತ್ತು ಜನರ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕ್ಷೇತ್ರದ ಸ್ವಾಭಿಮಾನಿ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಅವರಿಗೆ ತಕ್ಕ ಬುದ್ದಿ ಕಲಿಸಬೇಕು ಎಂದರು.
ಮತದಾರರು ನಮಗಿಂತ ಬುದ್ದಿವಂತರು ಜನರಿಗೂ ಕ್ಷೇತ್ರದಲ್ಲಿನ ವಾಸ್ತವ ಸ್ಥಿತಿ-ಗತಿಗಳ ಬಗ್ಗೆ ಗೊತ್ತಾಗಲಿ ಅಂದಾಗ ಮಾತ್ರ ಜನರು ಬಿಜೆಪಿವರನ್ನು ದೂರ ಇಡುತ್ತಾರೆ ಎಂದರು. ಜನರು ಯಾವುದೇ ಕಾರಣಕ್ಕೂ ಬಿಜೆಪಿಯವರನ್ನು ಸುಳ್ಳಿನ ಮಾತುಗಳನ್ನು ನಂಬಬೇಡಿ ಎಂದರು.
ಸಿಂದನೂರಿನ ಕೆ. ಕರಿಯಪ್ಪ ಮಾತನಾಡಿ ಜನಸಾಮಾನ್ಯರು ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದ್ದರು ಯಾವೊಬ್ಬ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಲ್ಲಿ ಬಡವರು ಬೀದಿಗೆ ಬಂದು ತುತ್ತು ಅನ್ನಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹೆಚ್.ಬಿ.ಮುರಾರಿ ಮಾತನಾಡಿದರು.