ಕವಿತೆ
ಹೇ ಮುಕುಂದ
ಹೇ ಮುಕುಂದ,
ಕೊಳಲಾಗಿ ನಿನ್ನ
ತುಟಿಗಳ್ಳನ್ನು ಸೋಕಲೇ,
ನಿನ್ನುಸಿರಲ್ಲಿ ಬೆರೆತು
ಕೊಳಲಿನ ನಾದ ನಾನಾಗಲೇ,
ಗರಿಯಾಗಿ ನಿನ್ನ ಮುಡಿ ಸೇರಿ
ನಿನ್ನ ಸೌಂದರ್ಯವನ್ನು
ಇಮ್ಮಡಿಗೊಳಿಸಲೇ
ನೀಲಿ ವರ್ಣವಾಗಿ
ನಿನ್ನ ತನುವನ್ನು ತುಂಬಲೆ.,
ನಿನ್ನ ಕಣ್ಣಂಚಿನಲ್ಲಿ ಇರುವ
ಪ್ರೀತಿ ನಾನಾಗಲೇ.,
ನಿನ್ನ ಭಕುತಿಯಲ್ಲಿ
ನನ್ನನ್ನೇ ನಾ ಮರಿಯಲೇ……
-ಡಾ.ನಂದಾ ಕೋಟೂರು, ಬೆಂಗಳೂರು
Very Nice Nanda