ನಿಶ್ಚಲ ಮನ
ಅಗ್ನಿ ಪರ್ವತಗಳು ಸ್ಪೋಟಿಸಿದರೂ,
ಬೇಲಿಯನ್ನು ಆ ಅಗ್ನಿ ಸ್ಪರ್ಶಿಸದಿರಲಿ,
ಬೆಂಕಿಯಕಿಡಿಗಳು ಅಂಗಳದೊಳಗೆ ಬೀಳದಿರಲಿ..,
ಪ್ರವಾಹದ ಅಲೆಗಳು ಅಪ್ಪಳಿಸಿದರೂ,
ಎನ್ನ ಮನ ನಿಶ್ಚಲ ಕಲ್ಲು ಬಂಡೆಯಾಗಲಿ,
ಎದೆಯಲ್ಲಿ ಛಲವೊಂದು ಗೂಡು ಕಟ್ಟಿರಲಿ..,
ವಿಷಜಂತುಗಳು ಸುತ್ತಲೂ ಹರಿಯಬಿಟ್ಟರೂ
ಪಾಷಾಣವು ಮನದೊಳು ಆವರಿಸದಿರಲಿ,
ಅಮೃತದ ಬಳ್ಳಿಯು ಎನ್ನಲ್ಲಿ ಪಲ್ಲವಿಸಲಿ..,
ಧೃತಿ ಎಂದಿಗೂ ಕಣ್ಮರೆಯಾಗದಿರಲಿ
ಈ ಪಯಣದಲ್ಲಿ……
–ಮಾನಸ ಕೊಪ್ಪಳ