e-ಸುದ್ದಿ, ಮಸ್ಕಿ
ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಭ್ರಷ್ಟಚಾರಕ್ಕೆ ಅವಕಾಶ ಮಾಡಿಕೊಡದ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಮತದಾರರು ಆಯ್ಕೆ ಮಾಡಿದಾಗ ಮಾತ್ರ ಕ್ಷೇತ್ರದ ಅಭಿವೃದ್ದಿ ಸಾರ್ವಜನಿಕರ ಸಮಸುಗಳಿಗೆ ಸ್ಪಂದನೆ ಸಿಗುತ್ತದೆ ಎಂದು ಕೆಆರ್‍ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಹೇಳಿದರು.
ಮಸ್ಕಿ ಪಟ್ಟಣದಲ್ಲಿ ಉಪಚುನಾವಣೆಗೆ ಕೆ.ಆರ್.ಎಸ್ ಪಕ್ಷದಿಂದ ಸ್ಪರ್ಧಿಸಿರುವ ಒಬಳೇಶ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಭಿನ್ನವಾಗಿಲ್ಲ. ಅಧಿಕಾರದ ಆಸೆಗಾಗಿ ಒಬ್ಬರ ಮೇಲೆ ಒಬ್ಬರು ಕೆಸರು ಎರಚಿ ಜನರನ್ನು ಮರುಳು ಮಾಡುತ್ತಿದ್ದಾರೆ. ಪ್ರಜ್ಞಾವಂತ ಮತದಾರರು ಇದನ್ನು ಅರಿತುಕೊಂಡು ಭ್ರಷ್ಟಚಾರ ಮುಕ್ತ ಮಾಡಲು ಪಣ ತೊಟ್ಟಿರುವ ಕೆ.ಆರ್.ಎಸ್ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಆನರ ಭಾವನೆಗಳಿಗೆ ಸ್ಪಂದಿಸಿದ ಜನ ಪ್ರತಿಗಳ ಕೈಗೊಂಬೆಯಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸೇವಕರಂತೆ ಕೆಲಸ ಮಾಡುವದನ್ನು ಬಿಟ್ಟು ಜನ ಪ್ರತಿನಿಧಿಗಳ ಅಣತಿಯಂತೆ ವರ್ತಿಸುತ್ತಿದ್ದಾರೆ ಅದಕ್ಕೆ ಕಡಿವಾಣ ಹಾಕಬೇಕಾದರೆ ಜನರು ಜಾಗೃತರಾಗಬೇಕು ಎಂದರು.
ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಹೊಸ ಪಕ್ಷಕ್ಕೆ ಮತ ನೀಡಿ ಮೂರು ಪಕ್ಷಗಳನ್ನು ಮನಗೆ ಕಳಿಸಿ ಎಂದರು.