ಮತದಾರರಿಗೆ ಅಕ್ರಮ ಹಣ ಹಂಚಿಕೆ ವಿಡಿಯೋ ವೈರಲ್ : ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು

ಮತದಾರರಿಗೆ ಅಕ್ರಮ ಹಣ ಹಂಚಿಕೆ ವಿಡಿಯೋ ವೈರಲ್ : ಕಾಂಗ್ರೆಸಮತದಾರರಿಗೆ ಅಕ್ರಮ ಹಣ ಹಂಚಿಕೆ ವಿಡಿಯೋ ವೈರಲ್ : ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಚುನಾವಣಾ ಆಯೋಗಕ್ಕೆ ದೂರು
e-ಸುದ್ದಿ, ಮಸ್ಕಿ
ಮಸ್ಕಿ; ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮತದಾರರಿಗೆ ಅಕ್ರಮ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ತುಣುಕೊಂದು ಗುರುವಾರ ವೈರಲ್ ಆಗಿದೆ.
ತಾಲೂಕಿನ ಪಾಮನಕಲ್ಲೂರು ಪಂಚಾಯತಿ ವ್ಯಾಪ್ತಿಯ ಹರ್ವಾಪೂರ ಗ್ರಾಮದಲ್ಲಿ ಮಹಿಳೆಯರನ್ನು ಒಂದೆಡೇ ಸೇರಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಮತ ಹಾಕುವಂತೆ ಆಮಿಷ ಒಡ್ಡಿ ಹಣ ಹಂಚಿಕೆ ಮನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಮಸ್ಕಿ ಕ್ಷೇತ್ರಕ್ಕೆ ಶಿವಮೊಗ್ಗ, ಹಾಸನ, ಬೆಂಗಳೂರು ಮೂಲದ ಕಾರ್ಯಕರ್ತರು ಆಗಮಿಸಿದ್ದು ಇಲ್ಲಿನ ಮಹಿಳೆಯರಿಗೆ ಆಮಿಷ ಒಡ್ಡಿ ತಲಾ ಒಬ್ಬರಿಗೆ 200 ರಿಂದ 500 ರೂ.ವರೆಗೆ ಹಣವನ್ನು ಹಂಚಿಕೆ ಮಾಡಿದ್ದಾರೆ ಎನ್ನಲಾದ ದೃಶ್ಯ ಸೆರೆಯಾಗಿದೆ.
ಪ್ರಧಾನಿ ಮೋದಿಯವರು ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ. ಅವುಗಳ ಜೊತೆಗೆ ಮತದಾನಕ್ಕೆ ಮುಂಚೆ ನಿಮಗಾಗಿ ಪ್ರತ್ಯೇಕ ಹಣ ನೀಡುತ್ತೇವೆ. ನೀವು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ಹಾಕಬೇಕು. ಸಾಲಾಗಿ ಬಂದು ನಾವು ನೀಡುವ ಹಣ ಪಡೆದು ಬಹಿರಂಗ ಸಭೆಗಳಿಗೂ ಬರಬೇಕು ಎಂದು ಹಣ ಹಂಚಲಾಗಿದೆ ಎನ್ನುವ ವಿಡಿಯೋ ಇದೀಗ ವೈರಲ್ ಆಗಿದೆ.
ಬಳಗಾನೂರು, ಬೆಳ್ಳಿಗನೂರು ಗ್ರಾಮಗಳಲ್ಲಿ ಕೂಡ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಾಂಗ್ರೆಸ್‍ನಿಂದ ದೂರು ಸಲ್ಲಿಕೆ; ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಅವರ ಬೆಂಬಲಿಗರು ಕ್ಷೇತ್ರದ ಕೆಲವೆಡೆ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾಧಿಕಾರಿ ರಾಜಶೇಖರ್ ಡಂಬಳ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಬಸನಗೌಡ ಮುದಬಾಳ್, ಸಿದ್ದಣ್ಣ ಹೂವಿನಬಾವಿ, ಆನಂದ ವೀರಾಪೂರು, ಚಾಂದ್ ಶೇಡ್ಮೀ ಸೇರಿದಂತೆ ಇನ್ನಿತರÀರು ಇದ್ದರು.
—————————–
ಕೋಟ್
ಬಿಜೆಪಿಯವರು ಮತದಾರರಿಗೆ ಅಕ್ರಮವಾಗಿ ಆಮಿಷ ಒಡ್ಡಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಅಕ್ರಮವಾಗಿ ಹಣ ಹಂಚುವವರು ಯಾರೇ ಆಗಿದ್ದರು ಅಂತವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ನಿಸ್ಪಕ್ಷಪಾತವಾಗಿ ಚುನಾವಣೆ ನಡೆಯಬೇಕು ಎಂದು ಒತ್ತಾಯಿಸುತ್ತೇವೆ.
-ಧೃವನಾರಯಣ ಕೆಪಿಸಿಸಿ ಅಧ್ಯಕ್ಷರು, ಮಸ್ಕಿ ಕ್ಷೇತ್ರದ ಉಸ್ತುವಾರಿ
———————–

Don`t copy text!