e-ಸುದ್ದಿ, ಮಸ್ಕಿ
ಏಪ್ರಿಲ್ 17 ರಂದು ನಡೆಯುವ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಶಾಸಕ ಎ.ಎಸ್.ನಡಹಳ್ಳಿ ಗುರುವಾರ ಮಸ್ಕಿ ಕ್ಷೇತ್ರದ ಗುಡದೂರು ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಪ್ರತಾಪಗೌಡ ಪಾಟೀಲ್ ಅವರಿಗೆ ಮತ ನೀಡಿ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜಾಲವಾಡಗಿ ಗ್ರಾಮದಲ್ಲಿ ಶಾಸಕ ಎ.ಎಸ್.ನಡಹಳ್ಳಿ ಮಾತನಾಡಿ ರಾಜ್ಯದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರ, ಬಡವರ ಹಿತ ಕಾಪಾಡುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ವ ಜನಾಂಗದ ನಾಯಕರು ಅವರು ಜನರ ಮದ್ಯೆ ಬೆಳೆದು ಬಂದಂತ ಜನನಾಯಕ. ಉಪ ಚುನಾವಣೆಯಲ್ಲಿ ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಗುರಿತಿಸಿ ಬಿಜೆಪಿ ಪಕ್ಷಕ್ಕೆ ಅಭೂತ ಪೂರ್ವ ಬೆಂಬಲವನ್ನು ನೀಡಿ ಜನರು ಅತಿ ಹೆಚ್ಚು ಅಂತರ ಮತಗಳಿಂದ ಪ್ರತಾಪಗೌಡರನ್ನು ಗೆಲ್ಲಿಸುತ್ತಾರೆ ಎಂದರು.
ಈಗಾಗಲೇ ಇಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇಲ್ಲದಂತ ಹೀನಾಯನ ಪರಿಸ್ಥಿತಿ ತಲುಪಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಮತದಾರರು ಪ್ರತಾಪಗೌಡ ಪಾಟೀಲರಿಗೆ ಮತ ನೀಡಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶರಣಪ್ಪ ಜಾಡಲದಿನ್ನಿ, ಶಿವನಗೌಡ ಗೋರೆಬಾಳ್, ಶೇಖರಪ್ಪ ಮೇಟಿ. ಅಮರೇಗೌಡ, ವೀರೇಶ ಬಳಿಗಾರ, ಸೇರಿದಂತೆ ಇತರರು ಇದ್ದರು.