ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು ಪೊಲೀಸ್ ಸಸ್ಪೆಂಡ್‍ಗೆ ಒತ್ತಾಯ
ಮತದಾರರಿಗೆ ಹಣ ಹಂಚಿಕೆ ವಿಚಾರ ಬಿಜೆಪಿ ವಿರುದ್ಧ ಭೀದಿಗಿಳಿದ ಕಾಂಗ್ರೆಸ್
e-ಸುದ್ದಿ, ಮಸ್ಕಿ
ಉಪಚುನಾವಣೆಯಲ್ಲಿ ಮತ ಪಡೆಯಲು ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕನಕವೃತ್ತದಿಂದ ಚುನಾವಣಾ ಕಚೇರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಧೃವನಾರಯಣ ನೇತೃತ್ವದಲ್ಲಿ ಬಂದ ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರ, ಪ್ರತಾಪಗೌಡ ಪಾಟೀಲ ಮತ್ತು ವಿಜಯೇಂದ್ರ ವಿರುದ್ಧ ಧಿಕ್ಕಾರ ಹಾಕಿದರು.
ಕೆಪಿಸಿಸಿ ಅಧ್ಯಕ್ಷ ಧೃವನಾರಯಣ ಮಾತನಾಡಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅಕ್ರಮವಾಗಿ ಹಣವನ್ನು ತಮ್ಮ ಕಾರ್ಯಕರ್ತರ ಹಂಚುತ್ತಿದ್ದಾರೆ. ಹಣ ಹಂಚುತ್ತಿರುವದ ದೃಶ್ಯಗಳನ್ನು ಸಾಕ್ಷಿಯಾಗಿ ಕೊಟ್ಟರು ಯಾವುದೇ ಕ್ರಮ ಜರುಗಿಸದೇ ಚುನಾವಣೆ ಆಯೋಗ ಹಾಗೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಅಕ್ರಮ ಹಣ ಹಂಚಿಕೆ ಮಾಡುತ್ತಿದ್ದರು ಅದನ್ನು ತಡೆಯುವಲ್ಲಿ ವಿಫಲರಾದ ಬಳಗಾನೂರು ಮತ್ತು ತುರ್ವಿಹಾಳ ಸಬ್ ಇನ್ಸ್‍ಪೆಕ್ಟರ್ ಅವರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಮಾತನಾಡಿ ಭ್ರಷ್ಟ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾಜಿ ಸಚಿವ ಕೃಷ್ಣ ಬೈರಗೌಡ ಮಾತನಾಡಿ ಬಿಜೆಪಿ ಸರ್ಕಾರ 20% ಸರ್ಕಾರ. ಈ ಹಣದಲ್ಲಿ ಮತದಾರರಿಗೆ ಹಣ ಹಂಚಲು ಬಂದಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಕಾನೂನು ಅಡಿಯಲ್ಲಿ ಕೆಲಸ ಮಾಡಿ ಇಲ್ಲಾ ನೌಕರಿಗೆ ರಾಜಿನಾಮೆ ನೀಡಿ ಬೆಜೆಪಿ ಪಕ್ಷ ಸೇರಿಕೊಳ್ಳಿ ಎಂದು ಕಿಡಿಕಾರಿದರು. ಶಿವರಾಜ ತಂಗಡಗಿ ಮಾತನಾಡಿ ಹಣ ಹಂಚಿಕೆ ಮಾಡಿದ ಹಾಸನ, ಶಿವಮೊಗ್ಗ ಮತ್ತು ಬೆಂಗಳುರು ಭಾಗದ ಬಿಜೆಪಿ ಕಾರ್ಯಕರ್ತರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದರೆ ಅವರ ಮೇಲೆ ದೂರು ದಾಖಲಿಸುವದು ಬಿಟ್ಟು ಅವರನ್ನು ಪೊಲೀಸ್ ವಾಹನದಲ್ಲಿ ಬಿಟ್ಟು ಬಂದಿದ್ದಾರೆ ಎಂದು ಆರೋಪಿಸಿದರು. ಹೊರಗಡೆಯಿಂದ ಬಂದ ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು. ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಬಸವರಾಜ ರಾಯರಡ್ಡಿ ಮಾತನಾಡಿ ಚುನಾವಣಾಧಿಕಾರಿಗಳು ನಿಷ್ಪಕ್ಷಪಾತವಾಗಿ ನಿಮ್ಮ ಅಧಿಕಾರ ಚಲಾಯಿಸಿ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಿ. ಅದು ಬಿಟ್ಟು ರಾಜಕೀಯ ಮುಖಂಡರ ಒತ್ತಡ ಒಳಗಾಗಿ ನಿಮ್ಮ ನೌಕರಿಗೆ ಸಂಚಾಕಾರ ತಂದುಕೊಳ್ಳಬೇಡಿ ಎಂದರು.
ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ರವಿ ಬೋಸರಾಜ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಸಿದ್ಧಣ್ಣ ಹೂವಿನಬಾವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರತಿಭಟನೆ ಹಿನ್ನಲೆಯಲ್ಲಿ ಚುನಾವಣೆ ಕಚೇರಿ ಮುಂದೆ ಟ್ರಾಫಿಕ್ ಜಾಮ್ ಆಗಿ ಜನರು ಸಂಚಾರಕ್ಕೆ ಪರದಾಡಿದರು.