e-ಸುದ್ದಿ, ಮಸ್ಕಿ
ಕಳೆದ ಎರಡು ದಿನಗಳಿಂದ ಕರೊನಾ ಆರ್ಭಟ್ ಜೋರಾಗಿದ್ದರೂ ಮಸ್ಕಿ ಪಟ್ಟಣದಲ್ಲಿ ಅದರ ಭಯವಿಲ್ಲದೆ ಯುವಕರು ಮತ್ತು ಚಿಣ್ಣರು ಬುಧವಾರ ಭಣ್ಣ ಆಡುವ ಮೂಲಕ ಕರಿ ಆಚರಿಸಿದರು.
ಕಲ್ಯಾಣ ಕರ್ನಾಟಕ ಭಾಗವಾದ ರಾಯಚೂರು ಜಿಲ್ಲೆಯ ಕೆಲ ತಾಲೂಕುಗಳಳ್ಲಿ ಹೊಳಿ ಹುಣ್ಣಿಮೆಗೆ ಬಣ್ಣದ ಆಟ ಆಡಿದರೆ ಮಸ್ಕಿ ಮತ್ತು ಲಿಂಗಸುಗೂರು ತಾಲೂಕುಗಳಲ್ಲಿ ಯುಗಾದಿ ಹಬ್ಬದ ಮರುದಿನ ಕರಿ ದಿವಸ ಬಣ್ಣ ಆಡುವ ಪರಿಪಾಠ ಬೆಳೆದುಕೊಂಡು ಬಂದಿದೆ.
ಕ್ಷೇತ್ರದಲ್ಲಿ ಜನತೆ ಕೆಲವು ದಿನಗಳಿಂದ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದ ಯುವಕರು ಬುಧವಾರ ಪ್ರಚಾರಕ್ಕೆ ತಡೆ ನೀಡಿ ಬಣ್ಣ ಆಡುವದರಲ್ಲಿ ತೊಡಗಿರುವದು ಕಂಡು ಬಂದಿತು.
ಪಟ್ಟಣದ ವಾಲ್ಮೀಕಿ ವೃತ್ತ, ಕನಕವೃತ್ತ, ಹಳೆ ಬಸ್‍ನಿಲ್ದಾಣ, ಪಾರ್ವತಿ ನಗರ ಸೇರಿದಂತೆ ವಿವಿಧ ಬಡಾವಣೆ ಹಾಗೂ ಹಳ್ಳಿಗಳಲ್ಲಿ ಬಣ್ಣ ಆಡಿದ್ದು ಕಂಡು ಬಂದಿದೆ.
ಯುವಕರು ಪರಸ್ಪರ ಬಣ್ಣ ಹಾಡಿ ಹಗಲಗೆಯ ನಾದಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.