ಗೆಲ್ಲುವ ಕರೋನ
ಆಗಿದೆ ಕರೋನ
ಉಲ್ಬಣ
ವಾತಾವರಣವೀಗ
ಎಲ್ಲೆಡೆ ತಲ್ಲಣ
ಎಚ್ಚೆತ್ತುಕೊಳ್ಳಿ
ತತ್ ಕ್ಷಣ
ನೀವಗಬೇಡಿ ಕರೋನ
ಹರಡಲು ಕಾರಣ
ನಮ್ಮ ಕೈಯ್ಯಲ್ಲಿಲ್ಲ
ಜನನ – ಮರಣ
ಸಾಗಲೇಬೇಕಲ್ಲವೇ
ಜೀವನದ ಪಯಣ ?
ಮೈ – ಮನ ತೊಟ್ಟರೆ
ಒಮ್ಮೆ ಪಣ
ಗೆಲ್ಲುವೆವು ಹೆಮ್ಮಾರಿಯ ವಿರುದ್ಧ
ಎಂಬುದು ನನ್ನ ಅಂಬೊಣ…
– ಡಾ ನಂದಾ ಕೋಟೂರ್, ಬೆಂಗಳೂರು