e-ಸುದ್ದಿ, ಮಸ್ಕಿ
ಬಡವರು, ಜನಸಾಮಾನ್ಯರು ಆಧಾರ ಕಾರ್ಡ ನೊಂದಣಿ ಮಾಡಿಸಲು ಪರದಾಡುತ್ತಿದ್ದಾರೆ. ಕೂಡಲೇ ಅಂಚೆ ಕಚೇರಿಯಲ್ಲಿ ನೊಂದಣಿ ಕೇಂದ್ರ ಪ್ರಾರಂಭಿಸುವಂತೆ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಸಂಘ ಹಾಗೂ ಕರ್ನಾಟಕ ಯುವಜನ ರಂಗ ಜಂಟಿಯಾಗಿ ಒತ್ತಾಯಿಸಿವೆ.
ಪಟ್ಟಣದ ಅಂಚೆ ಕಚೇರಿ ಮುಂದೆ ಮಂಗಳವಾರ ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಸಂಘದ ಅಧ್ಯಕ್ಷ ಬಸವರಾಜ ಎಕ್ಕಿ ಪ್ರತಿಭಟನೆ ಮಾಡಿ ಮಾತನಾಡಿದರು.
ಈ ಮುಂಚೆ ಅಂಚೆ ಕಚೇರಿಯಲ್ಲಿ ಆಧಾರ ನೊಂದಣಿ ಕೇಂದ್ರ ತೆರೆಯಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಇತ್ತೀಚಿಗೆ ಕೇಂದ್ರವನ್ನು ಸ್ಥಗಿತ ಮಾಡಿರುವದರಿಂದ ಬಡವರಿಗೆ ತೊಂದರೆಯಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪಟ್ಟಣದ ಮದ್ಯ ಭಾಗದಲ್ಲಿರುವ ಅಂಚೆ ಕಚೇರಿಯಲ್ಲಿ ನೊಂದಣಿ ಕೇಂದ್ರ ಪ್ರಾರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನಿತ್ಯವು ನೂರಾರು ಜನ ಆಧಾರ ಕಾರ್ಡ ಮಾಡಿಸಲು ಅಲೆದಾಡುತ್ತಿದ್ದಾರೆ. ಕೂಡಲೇ ಇನ್ನೆರಡು ಮೂರು ದಿನಗಳಲ್ಲಿ ಕಚೇರಿಯಲ್ಲಿ ಪ್ರಾರಂಭಿಸಿ ಇಲ್ಲದಿದ್ದಲ್ಲಿ ಅಂಚೆ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ನಡೆಸುವದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ನಾಗಮ್ಮ ಮಲ್ಲಾರ್, ಸ್ಟೇಲ್ಲಾ, ಲಕ್ಷ್ಮೀ ಮಡಿವಾಳ, ಮೀನಾಕ್ಷಮ್ಮ, ಶಿವಾನಂದ, ರಾಯಪ್ಪ, ತಿಮ್ಮಣ್ಣ, ವೆಂಕಟೇಶ ಚಿಗರಿ ಸೇರಿದಂತೆ ಹಲವರು ಇದ್ದರು.