ಮರ

ನೀನಾದರೆ ನನ್ನ
ಜನಕ
ಕೊಡುವೆ ನಿಮಗೆಲ್ಲ
ಆಮ್ಲ ಜನಕ

ಮುಂಬಾಗಿಲಿನಲ್ಲಿ
ಪೂಜಿಸಿಕೊಳ್ಳುವೆ
ಒಣ ಕಟ್ಟಿಗೆಯಾಗಿ
ಹಿತ್ತಲು ಸೇರುವೆ

ನೀವು ಬರೆಯಬಲ್ಲ
ಕಾಗದ ನಾನು
ಬರೆಯಲು ಬಳಸುವ
ಸಾಧನ ನಾನು

ಮನೆಯನ್ನು
ಶೃಂಗರಿಸಬಲ್ಲೆ
ಮನೆ ಮನೆಗಳಿಗೆ
ಸಲಕರಣೆ ನಾನೇ ಅಲ್ಲವೇ

ನೀರೆರೆದರೆ
ನಿತ್ಯ ಎನಗೆ
ಫಲ ಪುಷ್ಪಗಳ
ಕೊಡುವೆ ನಾ ನಿಮಗೆ

ಹುಟ್ಟಿದಾಗ
ತೊಟ್ಟಿಲು ನಾನಾಗುವೇ
ಬಾಳ ಪಯಣ ಮುಗಿದರೆ
ಚಟ್ಟವೂ ನಾನೇನೇ

ನಾನು ಬೆಳೆದಷ್ಟು
ನೀವೂ ಬೆಳೆಯುವಿರಿ
ನಾನು ಕಾಣಿಸದಸ್ಟು
ನೀವೂ ಕ್ಷೀಣಿಸುವಿರಿ

ಇಂತಿ ನಿಮ್ಮ ಪ್ರೀತಿಯ
ಮರ


ಡಾಕ್ಟರ್ ನಂದಾ, ಕೊಟುರು ಬೆಂಗಳೂರು

Don`t copy text!