ಪುಸ್ತಕ ಬಾಳ ದಾರಿಯ ದೀಪ

ಪುಸ್ತಕ ದಿನ

*ಪುಸ್ತಕ*ಬಾಳ ದಾರಿಯ ದೀಪ
ಪುಸ್ತಕಗಳನ್ನು ಓದುವ ಹವ್ಯಾಸ ತುಂಬಾ ಒಳ್ಳೆಯ ದು. ಯಾಕೇಂದ್ರೆ ನಮ್ಮಲ್ಲಿರುವ ಆಂತರಿಕ ಶಕ್ತಿಯನ್ನು ಮತ್ತೊಮ್ಮೆ ಮೊಗದೊಮ್ಮೆ ಚಿಂತನ ಮಂಥನ ಮಾಡುವ ಮೂಲಕ ನಮ್ಮ ಜ್ಞಾನದ ಶಕ್ತಿಯನ್ನು ಹೆಚ್ಚಿಸುತ್ತದೆ. ಎಷ್ಟೇ ಆಗಲಿ ಪುಸ್ತಕಗಳನ್ನು ಓದಲು ಸಮಯ ಸಿಕ್ಕಾಗ ಪ್ರಯತ್ನಿಸಿ ನೋಡಿ. ಒಂದು ಸಣ್ಣ ವಾಖ್ಯಾನ ನಾವು ಅಳವಡಿಸಿಕೊಂಡರು ಸಹ ನಮ್ಮ್ದೆ ಘನತೆ ತೋರಿಸಿತ್ತದೆ.

ಒಂದೊಂದು ಸಲ ಓದಿದ್ರೂ ಹೊಸ ಹೊಸ ಭಾವ ಕಾಣುವುದೇ ಸಾಹಿತ್ಯದ ಗುಣ. ಪ್ರತಿಯೊಂದು ಹಂತದಲ್ಲೂ ನೋವು ನಿವಾರಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ಟಾಪ್ ಒನ್ ಮೆಡಿಷನ್ ಪುಸ್ತಕ. ಅದರಲ್ಲೂ ವಿಶೇಷವಾಗಿ ವಚನ ಸಾಹಿತ್ಯ ಹಾಗೂ ವೈಚಾರಿಕತೆ ವಿಚಾರ ವಿನಿಮಯ ಮಾಡುವ ಪುಸ್ತಕಗಳನ್ನು ಓದಿ ಆನಂದಿಸಿ.

ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಹಲವಾರು ರೀತಿಯ ಕಷ್ಟ ಸುಖ ಇದುದ್ದೇ ಅದೆಲ್ಲವನ್ನೂ ಹೇಗೆ ಸ್ವೀಕರಿಸಬೇಕು ಎಂಬುವದು ಪುಸ್ತಕ ರೂಪದಲ್ಲಿ ನಮಗೆ ನಾವೇ ಕಂಡುಕೊಳ್ಳುವ ಪ್ರಜ್ಞೆ ಮೂಡುತ್ತದೆ. ಮುದ ನೀಡುವ ಪುಸ್ತಕಗಳನ್ನು ಜೊತೆಗೆ ಜ್ಞಾನಾರ್ಜನೆ ಮೌಲ್ಯಗಳನ್ನು ಹೊಂದಿದ ಪುಸ್ತಕಗಳನ್ನು ಓದುವ ಹವ್ಯಾಸ ಅದ್ಬುತ.

ಏನೇ ಇರಲಿ ಆಳವಾದ ಅಧ್ಯಯನ ಮಾಡಬೇಕು ಎಂಬುದನ್ನು ಮರೆಯಬಾರದು. ಜ್ಞಾನದ ಬಲವೂ ಎಲ್ಲಾಬಲಗಿಂತ ಮುಖ್ಯ. ಜ್ಞಾನಿಗಳು ಆದವ್ರು ತಮ್ಮ ಜ್ಞಾನವೂ ಮತ್ತೊಬ್ಬರ ಒಳಿತಿಗೆ ಬಳಿಸಬೇಕು ಅದು ಹೇಗೆ ನಮ್ಮನ್ನು ಸದಾ ಒಂದಿಲ್ಲೊಂದು ರೀತಿಯಲ್ಲಿ
ಸಹಕರಿಸಬಹುದು ಎಂಬುವದು ಗಮನಾರ್ಹ ಸಂಗತಿ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬ ಬಸವಣ್ಣನವರ ವಾಣಿ ಮರೆಯುವ ಹಾಗಿಲ್ಲ. ಪರಿಪೂರ್ಣ ಜ್ಞಾನಿಗಳು ಜ್ಞಾನ ಎಲ್ಲಿಂದ ಬಂದರೂ ಮನಸಾರೆ ಸ್ವೀಕರಿಸುವ ಸದ್ವಿನಯ ಹೊಂದಿರುವರು. ಅಂತೆಯೇ ವಿದ್ಯಗೆ ವಿನಯತೆ ಭೂಷಣ ಎಂದುರುವರು. ಅಹಂಕಾರ ಮನುಷ್ಯನ ಅವನತಿಗೆ ಕಾರಣ ಎಂಬುವದು ಕಟು ಸತ್ಯ ಸಂಗತಿ. ಹೀಗಾಗಿ ನಾವೆಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಂಡೆ ಇರೋಣ. ಪ್ರತಿಯೊಂದು ಹಂತದಲ್ಲೂ ಅವೆಲ್ಲವೂ ಉತ್ತಮ ಗುಣಮಟ್ಟದ ಸಲಹೆ ಸೂಚನೆಗಳನ್ನು ನೀಡುತ್ತವೆ


💎✍️ ಕವಿತಾ ಮಳಗಿ,  ಕಲಬುರ್ಗಿ

Don`t copy text!