e-ಸುದ್ದಿ ಮಸ್ಕಿ
ಮಸ್ಕಿ ಕ್ಷೇತ್ರದ ಉಪ ಚುನಾವಣೆ ಮುಗಿದು ಇನ್ನೇನು ಫಲಿತಾಂಶಕ್ಕಾಗಿ ಜನ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೆ, ಕರೊನಾ ಮಹಾಮಾರಿ ಉಲ್ಬಣಿಸಿದ್ದು ದಿನದಿಂದ ದಿನಕ್ಕೆ ಕರೊನಾ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿರುವದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.
ಆದರೆ ರಾಜಕೀಯ ಸಭೆ ಸಮಾರಂಭಗಳಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಇದೀಗ ಪಟ್ಟಣದಲ್ಲಿ ದಿನದಿಂದ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದೆ.
ಭಾನುವಾರ ಒಂದೇ ದಿನ ಪಟ್ಟಣದಲ್ಲಿ 23 ಜನಕ್ಕೆ ಕರೊನಾ ಪಾಟಿಸಿವ್ ದೃಢಪಟ್ಟಿದೆ. ಎರಡು ದಿನಗಳಲ್ಲಿ ಸೋಂಕಿತರ ಸಂಖ್ಯೆ 40 ರ ಗಡಿದಾಟಿದೆ. ಕರೊನಾ ಸೋಂಕಿನಿಂದ ಪಟ್ಟಣದ ವ್ಯಕ್ತಿಯೊಬ್ಬ ಬಳ್ಳಾರಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕರೊನಾ ಸೋಂಕಿತರನ್ನು ಹೋಂ ಐಶ್ಯೂಲೇಶನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಮನೆಗೆ ಪುರಸಭೆಯಿಂದ ಸಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ ಎಂದು ಡಾ. ಮೌನೇಶ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸೋಂಕಿತರ ಪತ್ತೆ ಹಚ್ಚುವ ಕಾರ್ಯ ನಡೆದಿದ್ದು ಪ್ರತಿ ದಿನ 70 ರಿಂದ 100 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದೆ. ಸೋಮವಾರದಿಂದ ಪ್ರತಿ ದಿನ 200 ಜನರ ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ ಎಂದು ಡಾ. ಮೌನೇಶ ತಿಳಿಸಿದ್ದಾರೆ.
ಬಳಗಾನೂರು: ತಾಲ್ಲೂಕಿನ ಬಳಗಾನೂರು ಪಟ್ಟಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮನೆಮನೆಗಳಿಗೆ ತೆರಳಿ ಕೊವೀಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ಬಳಗಾನೂರು ವ್ಯಾಪ್ತಿಯಲ್ಲಿ 18 ಜನಕ್ಕೆ ಕರೊನಾ ಪಾಸಿಟವ್ ದೃಢಪಟ್ಟಿದೆ ಎಂದು ಡಾ. ದಾಲವಸಾಬ ತಿಳಿಸಿದ್ದಾರೆ. ಎರಡು ದಿನನಗಳ ಹಿಂದೆ ವ್ಯಕ್ತಿಯೊಬ್ಬ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಪೊಲೀಸ್ ಗಸ್ತು: ಕರೊನಾ ನಿಯಂತ್ರಣಕ್ಕೆ ಕಪ್ರ್ಯೂ ಜಾರಿಯಲ್ಲಿದ್ದು ಸಾರ್ವಜನಿಕರು ಮನೆ ಬಿಟ್ಟು ಹೊರ ಬರಬಾರದು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಪಿಎಸ್‍ಐ ಸಿದ್ದರಾಮಪ್ಪ ಮನವಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿ ಹೊರ ಬಂದರೆ ಅಂತವರ ಬೈಕ್ ವಶ ಪಡಿಸಿಕೊಳ್ಳುವ ಜೊತೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಭಾನುವಾರ ವಿಕೇಂಡ್ ಲಾಕ್ ಡೌನ್ ಇದ್ದ ಕಾರಣ ಭಾನುವಾರ ಸಂತೆ ಮಾರುಕಟ್ಟೆಯಲ್ಲಿ ಅಂಗಡಿಗಳು ತಲೆ ಎತ್ತದಂತೆ ಪುರಸಭೆ ಸಿಬ್ಬಂದಿ ನೋಡಿಕೊಂಡರು. ತೆರೆದಿದ್ದ ಕೆಲವೊಂದ ಅಂಗಡಿಗಳನ್ನು ಬಂದ್ ಮಾಡಿಸಿದರು. ಭಾನುವಾರ ವಿಕೇಂಡ್ ಲಾಕ್‍ಡೌನ್ ಇದ್ದ ಕಾರಣ ಪಿಎಸ್‍ಐ ಸಿದ್ದರಾಮಪ್ಪ ನೇತೃತ್ವದಲ್ಲಿ ಪೆÇಲೀಸರು ಮಸ್ಕಿಯಲ್ಲಿ ಅಂಗಡಿಗಳನ್ನು ತೆರೆಯದಂತೆ ನೋಡಿಕೊಂಡರು
—————————
ಜನರಲ್ಲಿ ಆತಂಕ, ಬಿಎಲ್‍ಓಗೆ ಪ್ರಾಣ ಸಂಕಟ
ಮಸ್ಕಿ ಉಪಚುನಾವಣೆ ಮುಗಿದ ಬೆನ್ನಲೆ ತಾಲೂಕಿನಲ್ಲಿ ಕರೊನಾ ತಡೆಗಟ್ಟುವುದಕ್ಕಾಗಿ ಜಿಲ್ಲಾಡಳಿತ ರ್ಯಾಂಡಮ್ ಪರಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಪ್ರತಿನಿತ್ಯ ಮಸ್ಕಿ ವ್ಯಾಪ್ತಿಯಲ್ಲಿ 500 ರಿಂದ 800 ಜನರಿಗೆ ಕೊವೀಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷೆಗೆ ಒಳಗಾದವರಿಗೆ ಕೊವೀಡ್ ಪಾಸಿಟೀವ್ ವರದಿ ಬಂದರೆ ಅಂತ ಸೊಂಕಿತ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕವನ್ನು ಪತ್ತೆ ಹಚ್ಚಲು ಸ್ಥಳೀಯ ಬಿಎಲ್‍ಓಗಳಿಗೆ ಹೊಣೆ ನೀಡಿಲಾಗಿದೆ. ಆದರೆ ಕರೊನಾ ತಪಾಸಣೆಗೆ ಒಳಗಾದವರ ವಿಳಾಸ ಪತ್ತೆ ಹಚ್ಚುವುದ ದೊಡ್ಡ ತಲೇನೊವಾಗಿ ಪರಿಣಮಿಸಿದೆ ಎಂದು ಹೆಸರು ಹೇಳಲಿಚ್ಚಸದ ಬಿಎಲ್‍ಒ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆಯಿಂದ ಕರೊನಾ ಸೊಂಕಿ0ತರನ್ನು ಪತ್ತೆ ಹಚ್ಚುವುದಕ್ಕಾಗಿ ಅವರ ಪೋನ್ ನಂಬರ್ ಕೊಟ್ಟಿದ್ದಾರೆ. ಅವುಗಳು ಸಹ ಕೆಲವೊಂದು ರಾಂಗ್ ನಂಬರ್ ಅನುತ್ತಿದ್ದಾರೆ. ಅಲ್ಲದೇ ಪರೀಕ್ಷೆಗೆ ಒಳಗಾಗಿ ಬಂದವರಿಗೆ ಕೂಡ ಯಾವುದೇ ಮಾಹಿತಿ ಇಲ್ಲದೇ ಇರುವುದರಿಂದ ಅವರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ ಇದರಿಂದ ಮತ್ತಷ್ಟು ರೋಗ ಹರಡಲು ಕಾರಣವಾಗುತ್ತದೆ.
ಕರೊನಾ ತಡೆಗಟ್ಟುವುದಕ್ಕಾಗಿ ಸರ್ಕಾರ ಬಿಎಲ್‍ಓಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ನಮ್ಮಲ್ಲಿ ಕೂಡ 50 ವರ್ಷ ಮೇಲ್ಪಟ್ಟವರು ಇದ್ದಾರೆ. ಅವರಿಗೆ ಏನಾದರೂ ಆದರೆ ಹೇಗೆ ಆದ್ದರಿಂದ ಸರ್ಕಾರ ನಮಗೂ ಕೂಡ ಕರೊನಾ ವಾರಿಯರ್ ಅಂತ ಪರಿಗಣಿಸಿ ಎಂದು ಸಿಬ್ಬಂದಿಯೊಬ್ಬರು ಮನವಿ ಮಾಡಿದ್ದಾರೆ.