ಮಾರಕ ಕರೊನಾ
ಈ ಕರೋನಾ ಪ್ರಾಣಕ್ಕೆ ಕಾಡಿತು ಮಾರಿಯಾಗಿ
ಬೆಳೆದು ನಿಂತಿತು ನೋಡುವಷ್ಟರಲ್ಲೇ ಹೆಮ್ಮಾರಿಯಾಗಿ
ಅದೆಷ್ಟೋ ಜನರ ಬದುಕ ಚಿಂತಾಜನಕವಾಗಿಸಿ
ದುಡಿದು ತಿನ್ನುವ ಕೈಗಳಿಗೂ ಕೆಲಸ ಇಲ್ಲದಾಗಿಸಿ
ಬಂಧು ಬಳಗನೇಕರನು ಇನ್ನಿಲ್ಲದಾಗಿಸಿತು
ಮನುಕುಲವು ಈ ಅಜ್ಞಾತ ಸ್ಥಿತಿಗೆ ಹೊಂದಿಕೊಳ್ಳದಾಯಿತು
ಸುತ್ತ ಹಬ್ಬಿ ಸುಡುತಿರುವ ಜ್ವಾಲೆಯಂತೆ
ವಿಷ ವರ್ತುಲವ ಸೃಷ್ಟಿಸಿದ ಸ್ಥಿತಿಯಂತೆ
ತಮ್ಮವರ ಪ್ರಾಣ ಉಳಿಸಲು ಹರಸಾಹಸ ಪಟ್ಟಾಗಿದೆ
ಹೆಪ್ಪುಗಟ್ಟಿದ ದುಃಖದ ಕಟ್ಟೆ ಒಡೆದಾಗಿದೆ
ಪ್ರಾಣದ ಹಂಗು ತೊರೆದು ಆಪತ್ಭಾ0ಧವರು
ನೊಂದ ಜೀವಿಗಳ ಕಣ್ಣೀರ ಒರೆಸುತ್ತಿರುವರು
ಕಡಿವಾಣ ಹಾಕಬೇಕಾಗಿದೆ ಕೊರೊನಾ ಪಯಣಕ್ಕೆ
ಮತ್ತೆಂದೂ ಬಾರದಿರಲಿ ಇಂತ ಸ್ಥಿತಿ ನಮ್ಮಿ ಭೂ ಗ್ರಹಕ್ಕೆ
ಶ್ರೀಕಾಂತ್ ಅಮಾತಿ,ಮುಂಬೈ
9833791245