ವೀರವಿರಾಗಿಣಿ ಅಕ್ಕಮಹಾದೇವಿ
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ *#ಚೆನ್ನಮಲ್ಲಿಕಾರ್ಜುನಾ ?*
✍🏻 -: *#ಜಗನ್ಮಾತೆ ಅಕ್ಕಮಹಾದೇವಿಯವರು.*
-: ಭಾವಾರ್ಥ
*ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?*
ಹಚ್ಚಿದ ಗಿಡ ಗಗನದೆತ್ತರಕ್ಕೆ ಬೆಳೆದು ನಿಂತರೇನು.
ಕೆಳಗೆ ಸ್ವಲ್ಪಕಾಲ ವಿಶ್ರಮಿಸಲು
ನೆರಳೇ ಬೀಳದಂತಿದ್ದರೆ ಅದು ಎಷ್ಟೇ ಎತ್ತರಕ್ಕೆ ಬೆಳೆದರೂ ಫಲವಿಲ್ಲ..
*ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ?*
ಹಣ ಆಸ್ತಿ ಅಂತಸ್ತು ಎಷ್ಟಿದ್ದರೂ
ಹಸಿದು ಬಂದವರಿಗೆ ಒಂದು ತುತ್ತು ಅನ್ನ ನೀಡಲಾಗದಿದ್ದವನೇ ಬಡವ”
ಅರಮನೆ ಇದ್ದರೇನು ಹೆತ್ತವರ ಬೀದಿಗೆ ಬಿಟ್ಟವ ನಿರ್ಗತಿಕ. ದಯವಿಲ್ಲದ ಧನವು ಪ್ರಾಯಶ್ಚಿತ್ತಕ್ಕೆ ಮೂಲ…
*ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ?*
ಮನೆಯಲ್ಲಿ ಹಸುಗಳನ್ನು ಕಟ್ಟಿ
ಹಾಲಿಗೆ ಮತ್ತೊಂದು ಕಡೆ ಹೋಗಬಹುದೆ?
ಹಸುವುಳ್ಳವನ ಮನೆಯಲ್ಲಿ
ಹಾಲು ಮೋಸರು ತುಪ್ಪ ಹೇರಳವಾಗಿ ಇರುವಂತೆ.
ಲಿಂಗವುಳ್ಳವನಲ್ಲಿ
ಗುರು ಲಿಂಗ ಜಂಗಮದ ಭಕ್ತಿ ಇರಬೇಕು..
ತನು ಗುರುವಿಗೆ’ ಮನ ಲಿಂಗಕ್ಕೆ’
ಧನ ಜಂಗಮಕ್ಕೆ’ ಸವೆಸಬೇಕು,
ತನ್ನ ಅಂಗೈಯಲ್ಲೇ
ಬೇಡಿದ ಪದವಿಯನೀವ ಲಿಂಗವಿರಲು
ಮನೆಯಲ್ಲಿ ಹಯನ ಇದ್ದಂತೆ,
ನಿತ್ಯನಿರಂತರ ನಿನ್ನ ಬದುಕು
ಸಮೃದ್ಧವಾಗುವುದು ನಿನ್ನ ಭಕ್ತಿ ಫಲ”
ಅಂತಲ್ಲದಿದ್ದರೆ ಹಸುವಿದ್ದು ಹಯನವಿಲ್ಲದಂತೆ ವ್ಯರ್ಥ..
*ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ?*
ಎಷ್ಟೇ ದೇಹ ಸೌಂದರ್ಯವಿದ್ದರೇನು
ಗುಣವಿಲ್ಲದಿದ್ದರೆ ಆ ಸೌಂದರ್ಯ ಒಣ ಒಣ..
ಸುಣ್ಣವು ಎಷ್ಟೇ ಬೆಳ್ಳಗಿದ್ದರೂ
ಹಾಲಿನೊಂದಿಗೆ ಬೆರೆಯಬಲ್ಲುದೆ..?
ಒಂಚೂರು ಸುಣ್ಣ ಬಿದ್ದರೂ
ಸಂಸ್ಕಾರಗೊಳ್ಳದ ಹಾಲು ಒಡೆದು ಹೋಗುವಂತೆ..
ನೋಡಲು ಎಷ್ಟೇ ಚೆಂದ ಇದ್ದರೂ
ಉತ್ತಮ ಗುಣ ಮತ್ತು ಸಂಸ್ಕಾರವಿಲ್ಲದ
ಮನುಷ್ಯನ ಬದುಕು ಕೂಡ ಹಾಗೇ ನಿರರ್ಥಕ.. ನಿಸಾರ್ಥಕ ..ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ?*
ಅಕ್ಕನಿಗೆ ಇದ್ದ ಹಸಿವು
ಅದು ಭೌತಿಕದ ಹೊಟ್ಟೆಯ ಹಸಿವಲ್ಲ.
ಅದು ಚಿತ್ತವೆಂಬ ತಟ್ಟೆಯಲ್ಲಿ
ತುಂಬಬೇಕಾದ ಜ್ಞಾನದ ಹಸಿವು,
ಅದು ಭಕ್ತಿಯ ಹಸಿವು.
ಅದು ಚೆಲುವ ಚೆನ್ನಮಲ್ಲಿಕಾರ್ಜುನನ
ಸೇರಬೇಕೆಂಬ ಹಸಿವು..
ಇಂಥಾ ಹಸಿವಿನಂದಲೇ ಅಕ್ಕ ಕಲ್ಯಾಣಕ್ಕೆ ಬಂದದ್ದು.
ಅಲ್ಲಿ ಶರಣರ ಅನುಭಾವದಿಂದ
ಅಕ್ಕ’ನ ಜ್ಞಾನದ ಹಸಿವು ನೀಗಿತು
ಆಗ ಅಕ್ಕ ಜಗನ್ಮಾತೆ ಮಹಾದೇವಿಯಕ್ಕ ಎನಿಸಿಕೊಂಡಳು’
ಹಾಗೇ ಮನುಷ್ಯನು ಎಷ್ಟೇ ಹಸಿದು ಹಂಬಲಿಸಿ ಕುಳಿತಾಗ
ಚಿನ್ನದ ತಟ್ಟೆಯಿದ್ದರೇನು ಫಲ ಅದರಲ್ಲಿ ಅನ್ನವಿಲ್ಲದಿದ್ದರೆ’
ಹೊಟ್ಟೆ ತುಂಬದು, ಹಾಗೇ
ಚಿತ್ತವೆಂಬ ಚಿನ್ನದ ತಟ್ಟೆಯಲ್ಲಿ
ಶರಣರ ಸದ್ವಿಚಾರಗಳೆಂಬ
ಬುತ್ತಿಯ ಬಿಚ್ಚಿ ಉಣ್ಣಬೇಕು
ಅಂತಲ್ಲದಿದ್ದರೆ ಅವನ
ಬಾಳುವೆ ಖಾಲಿ ತಟ್ಟೆಯಂತೆ
ನಿರೀಕ್ಷೆಗೂ ಸಿಗದು ಅರಿವು ಜ್ಞಾನದ ನಿಲುವು..
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ ?*
ಹೌದು,
ಅಕ್ಕನವರೇ ತಮ್ಮ ವಚನದಲ್ಲಿ ಹೇಳಿರುವಂತೆ…
ಯಾವ ವಿದ್ಯೆ’ ಯಾವ ಜ್ಞಾನವ ಪಡೆದರೇನು.
ಸತ್ಯವನರಿಯದ ಜ್ಞಾನವದು ಅಜ್ಞಾನ…
ಸತ್ಯವನರಿಯಬೇಕಲ್ಲವೇ
ಸಾವಿಲ್ಲದ’ ಕೇಡಿಲ್ಲದ’ ರೂಹಿಲ್ಲದ’
ಎಡೆಯಿಲ್ಲದ ಕಡೆಯಿಲ್ಲದ,
ತೆರಹಿಲ್ಲದ ಕುರುಹಿಲ್ಲದ,
ಭವವಿಲ್ಲದ ಭಯವಿಲ್ಲದ ನಿರ್ಭಯ.
ಕುಲ ಸೀಮೆಗಳಿಲ್ಲದ ನಿಸ್ಸೀಮ
ಜನನ ಮರಣಗಳಿಲ್ಲದ,ಅಗಮ್ಯ ಅಗೋಚರ,
ಅಪ್ರತಿಮ ಅಪ್ರಮಾಣನಾದ
ಚೆನ್ನಮಲ್ಲಿಕಾರ್ಜುನ ದೇವರ ನಿಜದ
ಅರಿವಿಲ್ಲದಿದ್ದಡೆ ಆ ಬದುಕಿಗೆ ಅರ್ಥವಿಲ್ಲ,
ಅದು ವ್ಯರ್ಥ ಜೀವನ ನಿರರ್ಥಕ…
ಎಂಬುದಾಗಿ ಮೇಲಿನ ವಚನದಲ್ಲಿ
ಜಗನ್ಮಾತೆ ಅಕ್ಕಮಹಾದೇವಿಯವರು ತಿಳಿಸುತ್ತಾರೆ…👏🏻👏🏻
ಎಲ್ಲರಿಗೂ ಜಗನ್ಮಾತೆ ಅಕ್ಕಮಹಾದೇವಿಯವರ ಜಯಂತಿಯ ಹಾರ್ದಿಕ ಶುಭಾಶಯಗಳು,..
✍️ವಿಶ್ಲೇಷಣೆ -:
ಲೋಕೇಶ್ ಎನ್ ಮಾನ್ವಿ’
ವಿಶ್ಲಷಕರೆ…6ನೇ ಸಾಲು ನಾನು ಒಂದು ಕಡೆ ಓದಿರುವುದು.
ಅಲಗಿದ್ದು ಫಲವೇನು ಮನ ವಿಲ್ಲದನಕ್ಕ ಎಂಂದು ಆಗಿತ್್ತತು