ಅಕ್ಕ

ಗಜಲ್

ಅಕ್ಕ

ಈ ಕದಳಿಯ ಬನದ ರೂಹವಳಿಯದ ಅರಿವೆ. ಚೆನ್ನ ಮಲ್ಲಯ್ಯನ ಮೋಹವಳಿಯದ ಅರಿವೆ

ಹಸಿವು ನೀರೆನ್ನದೆ ಚೆಲುವನಿಗಾಗಿ ಅಲೆದು
ಅಂಗಸಂಗದ ಕಾಯವಳಿಯದ ಅರಿವೆ

ಶೂನ್ಯ ಪೀಠದ ಅಲ್ಲಮನ ಬಯಲ ಪ್ರಾಂಜಲ
ಪ್ರಣತಿಯ ಕುಡಿ ಮಲ್ಲಯ್ಯನಳಿಯದ ಅರಿವೆ

ತೊರೆದು ತೊರೆ ಸೇರಿದ ಸಾಗರದ ಆಗರವೆ
ಉಟ್ಟುಡುಗೆ ಬಿಚ್ಚಿ ಕಾಮವಳಿಯದ ಅರಿವೆ

ರೇಣು ದುನಿಯಾದ ನೋವಿಗೆ ದಂತಕತೆಯಿವಳು
ಸಾವ ಕೇಡುವರನ್ನೊಯ್ದು ಒಲೆಯೊಳಗಿಕ್ಕಿದ ಸ್ಥಾವರಕ್ಕಳಿಯದ ಅರಿವೆ


-ರೇಣುಕಾ, ಯಳವರ, ಕಲಬುರ್ಗಿ

Don`t copy text!