ಮಹಾದೇವಿಯಕ್ಕ
ಅಕ್ಕ ನಿನಗೆಂತಹ ಛಲವಿತ್ತು
ಗುರು ಕೊಟ್ಟ ಲಿಂಗವನ್ನೆ
ಪತಿಯಾಗಿ ಸ್ವೀಕರಿಸಿದೆ
ಹಸ್ತ ಮಸ್ತಕ ಸಂಯೋಗದಿ
ಲಿಂಗಕ್ಕೆ ಸತಿಯಾದೆ ನೀನು
ರಾಜನನ್ನೆ ಧಿಕ್ಕರಿಸುವ
ಧೈರ್ಯ ಹೇಗೆ ಬಂತು
ತವರನ್ನೆ ತೊರೆಯುವ
ವೈರಾಗ್ಯ ಹೇಗೆ ಬಂತು
ಜಗದ ಗಂಡರನು
ಒಲೆಯೊಳಗಿಕ್ಕಿದೆ ನೀನು
ನಿಸ್ಸಿಮ ಚೆಲುವಂಗೊಲಿದೆ
ಮಲ್ಲಿಕಾರ್ಜುನನನ್ನು
ಕನಸಲ್ಲಿ ಕಂಡವಳು
ನನಸು ಮಾಡುವ ದಿಟ್ಟ
ಮಾರ್ಗವ ಹಿಡಿದೆ ನೀನು
ಕಲ್ಯಾಣ ಸೇರಿದೆ ಹೇಗೆ
ದಟ್ಟ ಕಾಡುಗಳ ದಾಟುತ
ಬೊಮ್ಮಯ್ಯಗಳ ಸ್ವಾಗತದಿ
ಅಲ್ಲಮರ ಅಗ್ನಿ ಪರೀಕ್ಷೆಯಲಿ
ಪುಟವಿಟ್ಟ ಚಿನ್ನವಾದೆಯವ್ವಾ
ಶರಣರ ಮೆಚ್ಚುಗೆ ಪಡೆದು
ಮುಂದೆ ಸಾಧಿಸ ಹೊರಟೆ
ಮಲ್ಲಕಾರ್ಜುನನ ಸೇರಲು
ಕಾಡು ಮೇಡುಗಳ ಅಲೆದು
ಕದಳಿಯ ಸೇರಿದೆ ತಾಯಿ
ನಿನ್ನ ದಿಟ್ಟತನಕ್ಕೆ ನೀನೆ ಸಾಟಿ
ಇನ್ನಾರು ಸರಿಸಾಟಿ ನಿನಗೆ
ಸಾತ್ವಿಕ ತೇಜೋ ರೂಪದ
ಅಕ್ಕನ ಆಶೀರ್ವಾದದಿ
ಮುನ್ನುಗ್ಗುತ್ತಿಹರು ಮಹಿಳೆಯರು
ಹರಸು ತಾಯೆ ಧೀರ ಮಾತೆ.
-ಸವಿತಾ. ಮಾಟೂರ. ಇಲಕಲ್ಲ.